Advertisement

Karnataka ರಾಜ್ಯ ಸರಕಾರ ಪತನವಾದರೆ ನಾವು ಹೊಣೆ ಅಲ್ಲ: ಬಿಜೆಪಿ

12:05 AM May 14, 2024 | Team Udayavani |

ಬೆಂಗಳೂರು: ರಾಜ್ಯ ಸರಕಾರ ಪತನದ ಕುರಿತು ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಸರಕಾರ ಕೆಡವುವಂಥ ಯಾವುದೇ ಪ್ರಯತ್ನ ನಾವು ನಡೆಸುತ್ತಿಲ್ಲ, ಆದರೆ ಸರಕಾರ ಪತನವಾದರೆ ನಾವು ಹೊಣೆಗಾರರಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟನೆ ನೀಡಿದ್ದಾರೆ.

Advertisement

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಶಿಂಧೆ ಹೇಳಿಕೆ ಏನೆಂಬುದು ಗೊತ್ತಿಲ್ಲ. ವಿಪಕ್ಷವಾಗಿ ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ. ನಾವು ಸರಕಾರ ನೀಳಿಸಲು ಹೋಗುವುದಿಲ್ಲ. ಆದರೆ ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್‌ನಲ್ಲಿ ಏನೇನಾಗಲಿದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ನಾವು ಸರಕಾರ ಬೀಳಿಸುವ ಪ್ರಯತ್ನ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಮಾಜಿ ಡಿಸಿಎಂ ಡಾ| ಸಿ.ಎನ್‌.ಅಶ್ವತ್ಥನಾರಾಯಣ ಮಾತನಾಡಿ, ಈ ಸರಕಾರ ಪತನಕ್ಕೆ ನಾವು ಏನೂ ಮಾಡಬೇಕಾಗಿಲ್ಲ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಸಿಎಂ ಸ್ಥಾನಕ್ಕೆ ಜಗಳ ನಡೆಯುತ್ತಲೇ ಇದೆ. ಸಿಎಂ, ಡಿಸಿಎಂ ನಡುವೆ ದೊಡ್ಡ ಸಂಘರ್ಷವಾಗುತ್ತಿದೆ. ಪ್ರತಿ ದಿನ ಗುಂಪುಗಾರಿಕೆ ಜಗಳ ನಡೆಯುತ್ತಿದೆ ಅಭಿವೃದ್ಧಿ ಆಗುತ್ತಿಲ್ಲ. ಅವರ ಶಾಸಕರೇ ಸರಕಾರ ಪತನದ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಈ ಸರಕಾರ ಉಳಿಯುವುದಿಲ್ಲ ಎಂದು ಜನ ಹೇಳುತ್ತಿದ್ದಾರೆ. ಅವರ ಒಳಜಗಳ, ಅಧಿಕಾರದ ದಾಹದಿಂದ ಸರಕಾರ ಬೀಳಬೇಕೇ ಹೊರತು ಇದಕ್ಕೆ ನಮ್ಮ ಸಹಕಾರ ಬೇಕಿಲ್ಲ. ಲೋಕಸಭಾ ಚುನಾವಣೆ ಬಳಿಕ ಕುರ್ಚಿಯ ಎಲ್ಲ ಕಾಲು ಮುರಿದು ಅವರೇ ಸರಕಾರವನ್ನು ಬೀಳಿಸುತ್ತಾರೆ ಎಂದು ಕಾಂಗ್ರೆಸ್‌ನವರೇ ಹೇಳುತ್ತಿದ್ದಾರೆ. ಮಹಾರಾಷ್ಟ್ರದಲ್ಲೂ ಅವರ ಒಳಜಗಳದಿಂದ ಸರಕಾರ ಬಿತ್ತು. ಅವರ ಸ್ವಯಂಕೃತ ಅಪರಾಧ ಕಾರಣದಿಂದ ಪತನವಾಗಲಿದೆ ಎಂದು ಭವಿಷ್ಯ ನುಡಿದರು.

ಚುನಾವಣೆ ಫಲಿತಾಂಶದ ಬಳಿಕ ಆಪರೇಷನ್‌ ಕಮಲದ ಬಗ್ಗೆ ಮಹಾರಾಷ್ಟ್ರದ ಸಿಎಂ ಏಕನಾಥ್‌ ಸಿಂಧೆ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ, ಈ ಬಗ್ಗೆ ಉತ್ತರ ಕೊಡುವಷ್ಟು ನಾನು ದೊಡ್ಡವನಲ್ಲ.ರಾಜ್ಯದಲ್ಲಿ ಬಿಜೆಪಿ 20 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಎರಡು ಕ್ಷೇತ್ರಗಳಲ್ಲಿ ಮೈತ್ರಿಪಕ್ಷ ಜೆಡಿಎಸ್‌ ಗೆಲ್ಲಲಿದೆ.
-ಬಿ.ಶ್ರೀರಾಮುಲು, ಮಾಜಿ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next