Advertisement

ವಿರೋಧ ಪಕ್ಷದ ನಾಯಕರು ಹೊಗಳುತ್ತಾರೆ ಎಂಬ ನಿರೀಕ್ಷೆಯಲ್ಲಿ ನಾವಿಲ್ಲ: ಸಿಸಿ ಪಾಟೀಲ್

09:59 AM Nov 04, 2019 | keerthan |

ಬಳ್ಳಾರಿ: ರಾಜ್ಯ ಬಿಜೆಪಿಯಲ್ಲಿನ ಗೊಂದಲವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಿದ್ದಾರೆ ಎಂದು ಅರಣ್ಯ ಸಚಿವ ಸಿ.ಸಿ.ಪಾಟೀಲ್ ಹೇಳಿದರು.

Advertisement

ಜಿಲ್ಲೆಯ ಹೊಸಪೇಟೆ ತಾಲೂಕು ಕಮಲಾಪುರ ಬಳಿಯ ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್ ಉದ್ಘಾಟಿಸಿ ಮಾತನಾಡಿದರು. ಉಪಚುನಾವಣೆ ನಡೆಯಲಿರುವ 17 ಕ್ಷೇತ್ರಗಳಲ್ಲಿ 10 ರಿಂದ 12 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಪ್ರವಾಹ ಹೆಚ್ಚಾಗಿದ್ದು, ಸಂತ್ರಸ್ಥರಿಗೆ ಹೊಸ ಬದುಕು ಕಟ್ಟಿಕೊಡುತ್ತೇವೆ. ಸಂತ್ರಸ್ಥರಿಗೆ ಐದು ಲಕ್ಷ ರೂ. ಪರಿಹಾರ ಕೊಟ್ಟ ಏಕೈಕ ಸಿಎಂ ಯಡಿಯೂರಪ್ಪ ಆಗಿದ್ದಾರೆ. ಇದರಿಂದ ವಿರೋಧ ಪಕ್ಷದ ನಾಯಕರು ಹೊಗಳುತ್ತಾರೆ ಎಂಬ ನಿರೀಕ್ಷೆಯಲ್ಲಿ ನಾವಿಲ್ಲ ಎಂದರು.

ಅನರ್ಹ ಶಾಸಕರಿಗೆ ಹೆಚ್ಚುವರಿ ಅನುದಾನ ನೀಡಲಾಗಿದೆ. ಅವರ ಕ್ಷೇತ್ರಗಳು ಸಹ ರಾಜ್ಯದಲ್ಲೇ ಇವೆ. ಮುಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರಕ್ಕೂ ಅನುದಾನ ನೀಡಲಾಗುತ್ತದೆ ಎಂದರು.

ಜ್ಯುಲಾಜಿಕಲ್ ಪಾರ್ಕ್ ಬಗ್ಗೆ ಮಾತಣಾಡಿದ ಅವರು ಕಲ್ಯಾಣ ಕರ್ನಾಟಕದ ಮೊದಲ ಸಫಾರಿ ಇದಾಗಿದೆ. ಹುಲಿ ಮತ್ತು ಸಿಂಹಕ್ಕೆ ಮುಕ್ತ ಸಂಚಾರ ವ್ಯವಸ್ಥೆ ಮಾಡಿದ್ದೇವೆ.  ಯೂರೋಪ್ ರಾಷ್ಟ್ರದಿಂದ ಪ್ರಾಣಿ ವಿನಿಮಯ ಮಾಡುವ ಯೋಚನೆ ಇದೆ. ರಾಜ್ಯದಲ್ಲಿ ಖನಿಜ‌ನಿಧಿ ಬಳಕೆಗೆ ಒಂದಷ್ಟು ಸಮಸ್ಯೆ ಇದೆ. ಈ ವಿಚಾರ ಸುಪ್ರೀಂ ಕೋರ್ಟಿನಲ್ಲಿ ಇದೆ. ಕೋರ್ಟಿನಲ್ಲಿ ವಕೀಲರು ವಾದ ಮಾಡಿದ್ದಾರೆ ಎಂದು ತಿಳಿಸಿದರು.

Advertisement

ಜೂಲಾಜಿಕಲ್ ಪಾರ್ಕ್  141.49 ಹೆಕ್ಟೆರ್ ವಿಸ್ತೀರ್ಣ ಹೊಂದಿದೆ. ಇದರಲ್ಲಿ 11.8 ಹೆಕ್ಟೆರ್ ಮೃಗಾಲಯದ ವಿಸ್ತೀರ್ಣದಲ್ಲಿ ಮೃಗಾಲಯ ನಿರ್ಮಿಸಲಾಗಿದೆ. 10 ಆವರಣಗಳು ನಿರ್ಮಾಣ ಮಾಡಲಾಗಿದೆ. ನಾಲ್ಕು ಸಸ್ತನಿ ಪ್ರಾಣಿಗಳ ಆವರಣಗಳು,  5 ಮಾಂಸಹಾರಿ ಪ್ರಾಣಿಗಳ ಆವರಣಗಳು, 1 ಸರಿಸೃಪಗಳ ಆವರಣ,  ಚಿರತೆ, ಕರಡಿ, ಪಟ್ಟೆ ಕತ್ತೆಕಿರುಬ, ಗುಳ್ಳೆ ನರಿ, ಬೂದುತೋಳ, ಮೊಸಳೆ, ಕೆಂಪುಮೂತಿ ಮಂಗ,  ಕಪ್ಪುಹಂಸ ಇದೆ,  3.67 ಕೋಟಿ  ರೂ. ಅನುದಾನದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಸಂಸದ ವೈ. ದೇವೇಂದ್ರಪ್ಪ, ಜಿಪಂ ಉಪಾಧ್ಯಕ್ಷೆ ದೀನಾ ಮಂಜುನಾಥ್ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next