ನ್ಯಾ| ಮನೋಜ್ ಕುಮಾರ್ ನೇತೃತ್ವದ ನ್ಯಾಯಪೀಠ ಈ ತೀರ್ಪು ನೀಡಿದೆ ಎಂದು “ದ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಹರಿದ್ವಾರದಲ್ಲಿ ಗೋಹತ್ಯೆ ಕುರಿತು ಸಲ್ಲಿಸಲಾಗಿದ್ದ ಪಿಐಎಲ್‌ಗೆ ಸಂಬಂಧಿಸಿ ಈ ತೀರ್ಪು ನೀಡಲಾಗಿದೆ.
Advertisement
ಪ್ರಾಣಿಗಳ ರಕ್ಷಣೆಯ ಮಹತ್ವದ ಬಗ್ಗೆ ಉಪನಿಷತ್, ಅರ್ಥಶಾಸ್ತ್ರ, ಜೈನ, ಬೌದ್ಧ ಧರ್ಮಗಳಲ್ಲಿ ಉಲ್ಲೇಖೀಸಲಾಗಿರುವ ಅಂಶ ಗಳು, ಮಹಾತ್ಮಾ ಗಾಂಧಿ, ದಲೈಲಾಮಾ ಅವರ ಬೋಧನೆಗಳು, ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪುಗಳನ್ನು 41 ಪುಟಗಳ ತೀರ್ಪಿನಲ್ಲಿ ನ್ಯಾಯಪೀಠ ಪ್ರಸ್ತಾಪಿಸಿದೆ. ದನ, ಎತ್ತು, ಕಡಸುಗಳನ್ನು ಹತ್ಯೆ ಮಾಡುವುದನ್ನೂ ತಡೆಯಬೇಕು ಎಂದು ಹೇಳಿದೆ. ಗೋಮಾಂಸ ಅಥವಾ ಅದರ ಉತ್ಪನ್ನದ ಮಾರಾಟಕ್ಕೂ ನಿಷೇಧ ಹೇರಬೇಕು ಎಂದಿದೆ ನ್ಯಾಯಪೀಠ. ತೀರ್ಪು ಪ್ರಕಟವಾದ 3 ವಾರಗಳ ಒಳಗಾಗಿ ಉತ್ತರಾಖಂಡದಲ್ಲಿ ದನಗಳಿಗಾಗಿ ಚಿಕಿತ್ಸೆ ನೀಡಲು ಆಸ್ಪತ್ರೆಗಳನ್ನು ಸ್ಥಾಪಿಸಬೇಕು. ಗೋಹತ್ಯೆ ನಡೆಯದಂತೆ ಗ್ರಾಮೀಣ ಪ್ರದೇಶ ದಲ್ಲಿ 24 ಗಂಟೆಗೆ ಒಂದು ಬಾರಿ ಪೊಲೀಸರು ಗಸ್ತು ತಿರುಗಬೇಕು. 3 ತಿಂಗಳೊಳಗೆ ಗೋ ಶಾಲೆಗಳಲ್ಲಿ ಅಕ್ರಮವಾಗಿ ನೆಲೆಸಿರುವವರನ್ನು ಹೊರಹಾಕಲು ಕ್ರಮ ಕೈಗೊಳ್ಳಬೇಕು. ಡಿವೈಎಸ್‌ಪಿ ಮಟ್ಟದ ಅಧಿಕಾರಿ ನೇತೃತ್ವದಲ್ಲಿ ಕುಮೌನ್ ಮತ್ತು ಘರ್ವಾಲ್‌ನಲ್ಲಿ ವಿಶೇಷ ತಂಡ ರಚಿಸಬೇಕು ಎಂದು ಆದೇಶಿಸಿದೆ.