Advertisement

2019 ವಿಶ್ವಕಪ್ ತಂಡದಲ್ಲಿದ್ದ ಸಮಸ್ಯೆಯೇ ಈಗಲೂ ಇದೆ; ಜಹೀರ್ ಖಾನ್ ಕಳವಳ

11:42 AM Mar 25, 2023 | Team Udayavani |

ಮುಂಬೈ: 2011ರ ಏಕದಿನ ವಿಶ್ವಕಪ್ ಹೀರೋ ಜಹೀರ್ ಖಾನ್ ಅವರು ಟೀಂ ಇಂಡಿಯಾದ ಸದ್ಯದ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ. ಈ ವರ್ಷದ ಕೊನೆಯಲ್ಲಿ ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಗೆ ತಯಾರಿ ನಡೆಸುತ್ತಿರುವ ಭಾರತ ತಂಡವು ಇನ್ನೂ ಹಳೆಯ ಬೋಟ್ ನಲ್ಲೇ ಪ್ರಯಾಣಿಸುತ್ತಿದೆ ಎಂದಿದ್ದಾರೆ.

Advertisement

ಶ್ರೇಯಸ್ ಅಯ್ಯರ್ ಅವರ ಗಾಯ ಮತ್ತು ಸೂರ್ಯಕುಮಾರ್ ಯಾದವ್ ಅವರ ಏಕದಿನದಲ್ಲಿ ಸತತ ವೈಫಲ್ಯಗಳು ಮತ್ತೊಮ್ಮೆ ಟೀಂ ಇಂಡಿಯಾವನ್ನು 2019 ಏಕದಿನ ವಿಶ್ವಕಪ್‌ ನ ಪರಿಸ್ಥಿತಿಗೆ ತಳ್ಳಿದೆ. ನಾಲ್ಕನೇ ಕ್ರಮಾಂಕದ ಬಗ್ಗೆ ಮತ್ತಷ್ಟು ಕೆಲಸ ನಡೆಸಬೇಕಾಗಿದೆ ಎಂದು ಮಾಜಿ ವೇಗಿ ಜಹೀರ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಏಕದಿನ ತಂಡದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡುವ ನಿರೀಕ್ಷೆಯಿದ್ದ ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯಾ ವಿರುದ್ಧ ಇತ್ತೀಚೆಗೆ ಮುಕ್ತಾಯಗೊಂಡ ಸರಣಿಯಲ್ಲಿ ಸತತ ಮೂರು ಗೋಲ್ಡನ್ ಡಕ್‌ ಗಳನ್ನು ದಾಖಲಿಸಿದರು. ಇದು ಅವರ ಏಕದಿನ ಭವಿಷ್ಯದ ಮೇಲೆ ಗಂಭೀರ ಪ್ರಶ್ನೆಗಳು ಏಳುವಂತೆ ಮಾಡಿದೆ.

ಇದನ್ನೂ ಓದಿ:ರಾಹುಲ್ ಅನರ್ಹತೆಗೆ ಪ್ರತ್ಯುತ್ತರವಾಗಿ ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸಿ: ಪ್ರಿಯಾಂಕಾ

ಕ್ರಿಕ್ ಬಜ್ ಜೊತೆಗೆ ಮಾತನಾಡಿದ ಜಹೀರ್, “ಬ್ಯಾಟಿಂಗ್ ಕ್ರಮಾಂಕವು ಖಂಡಿತವಾಗಿಯೂ ಮತ್ತೊಮ್ಮೆ ಗಮನ ಹರಿಸಬೇಕಾದ ವಿಚಾರವಾಗಿದೆ. ಅವರು (ಟೀಂ ಇಂಡಿಯಾ) ಮತ್ತೆ ನಾಲ್ಕನೇ ಕ್ರಮಾಂಕದ ಆಯ್ಕೆಯನ್ನು ಲೆಕ್ಕಾಚಾರ ಮಾಡಬೇಕಾಗುತ್ತದೆ. ಇದು 2019 ರ ವಿಶ್ವಕಪ್‌ ನಲ್ಲೂ ಚರ್ಚೆಗೆ ಕಾರಣವಾಗಿತ್ತು. ನಾವು ಈಗ ನಾಲ್ಕು ವರ್ಷಗಳ ಬಳಿಕವೂ ಅದೇ ದೋಣಿಯಲ್ಲಿದ್ದೇವೆ. ಹೌದು, ಶ್ರೇಯಸ್ ಅಯ್ಯರ್ ನಾಲ್ಕನೇ ಕ್ರಮಾಂಕದ ಆಟಗಾರ ಎಂದು ನನಗೆ ಗೊತ್ತು. ಆದರೆ ಅವರು ಈಗ ದೀರ್ಘಕಾಲದವರೆಗೆ ಗಾಯಗೊಂಡಿದ್ದರೆ, ನೀವು ಆದಷ್ಟು ಬೇಗ ಉತ್ತರ ಕಂಡು ಕೊಳ್ಳಬೇಕಾಗುತ್ತದೆ” ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next