Advertisement

ಮರೆಯಾಗುತ್ತಿರುವ ಅಪೂರ್ವ ಜಾನಪದ ಕಲೆ ಪಾಣರಾಟ

10:47 PM Feb 15, 2020 | Sriram |

ಬಸ್ರೂರು: ಆಧುನಿಕತೆಯತ್ತ ಸಾಗುತ್ತಿರುವ ರಭಸದಲ್ಲಿ ನಮ್ಮ ಮೂಲ ಸಂಸ್ಕೃತಿ ಮರೆಯುತ್ತಿದ್ದೇವೆ. ನಮ್ಮ ಪ್ರಾಚೀನರು ನಡೆಸಿಕೊಂಡು ಬಂದಿರುವ ಒಂದೊಂದೇ ಆಚರಣೆಯನ್ನು ಆಧುನಿಕತೆಯ ಹೆಸರಿನಲ್ಲಿ ಬದಿಗೆ ಸರಿಸುತ್ತಿದ್ದೇವೆ.

Advertisement

ಏನಿದು ಪಾಣರಾಟ?
ಈ ಸಾಲಿಗೆ ಪಾಣಾರಾಟವೂ ಸೇರುತ್ತದೆ. ಕುಂದಾಪುರ ತಾಲೂಕಿನ ವಾಲೂ¤ರಿನ ನಾಗರಾಜ ಪಾಣ ಅವರ ತಂಡ ಮಾತ್ರ ಪ್ರಸ್ತುತ ಪಾಣಾರಾಟ ನಡೆಸುತ್ತಿದೆ. ಪಾಣಾರಾಟದಲ್ಲಿ ದೈವಸ್ಥಾನಗಳಲ್ಲಿ ನಡೆಯುವಂತೆ ಢಕ್ಕೆ ಬಲಿ ಸೇವೆ, ಕೋಲ ಸೇವೆಯೂ ಇರುತ್ತದೆ. ಕೆಲವು ದೈವದ ಮನೆ ಗಳಲ್ಲಿ ಮಾತ್ರ ಪಾಣಾರಾಟ ನಡೆಯುತ್ತದೆ. ಇಲ್ಲಿ ಕನ್ನಡ ಪದ್ಯ ಹೇಳುತ್ತಾರೆ. ಈ ಪದ್ಯ ಗಳಲ್ಲಿ ಬಣಜಿಗ ಶೆಟ್ಟಿ ಕಥೆ, ಕುಂತ್ಯಮ್ಮನ ಹಾಡು ಸೇರಿದಂತೆ ಹಲವು ಕಥನ ಕಾವ್ಯಹೇಳುವುದು ವಿಶೇಷ. ಸುಮಾರು ಅರ್ಧ ಗಂಟೆ ಈ ಪದ್ಯಗಳನ್ನು ಆಕರ್ಷಕವಾದ ಹಾಡು-ಕುಣಿತದೊಂದಿಗೆ ಪ್ರದರ್ಶಿಸ ಲಾಗುತ್ತದೆ. ಪಾಣಾರಾಟ ನಡೆಸುವ ತಂಡದಲ್ಲಿ ಏಳರಿಂದ ಎಂಟು ಜನ ಜಾನಪದ ಕಲಾವಿದರಿರುತ್ತಾರೆ.

ಮನೆ ಮನೆಗೆ ತಿರುಗಿ ಪದ ಹೇಳುವ ಕ್ರಮ
ಪಾಣಾರಾಟದಲ್ಲಿ ದೇವರ ದರ್ಶನ ಸೇವೆಯೂ ಇರುತ್ತದೆ, ನಾಗರಾಜ ಅವರ ತಂಡ ಕಂಡೂÉರು, ಬಳ್ಕೂರು, ಗುಲ್ವಾಡಿ, ಹಳ್ನಾಡು, ಬಸೂÅರು ಮತ್ತಿತರ ಪ್ರದೇಶ ಗಳಲ್ಲಿ ಬೇರೆ ಬೇರೆ ಕಥನ ಕಾವ್ಯಗಳನ್ನು ಹೇಳುತ್ತಾ ಮನೆ ಮನೆಗೆ ತಿರುಗುವ ಕ್ರಮ ರೂಢಿಯಲ್ಲಿದೆ. ಪದ್ಯ ಹೇಳುವಾಗ ತೆಂಬರೆ ಎಂಬ ವಾದ್ಯ ಬಾರಿಸುತ್ತಾರೆ.

ಪಾಣಾರರ ವೇಷ
ಪಾಣಾರರು ಪಾಣಾರಾಟ, ಕೃಷಿ ಕೆಲಸಕ್ಕೆ ಬಳಸುವ ಮಂಡೆ ಹಾಳೆ ತಯಾರಿಸುವುದು, ಮನೆ ಮನೆಗೆ ಹೋಗಿ ಪದ ಹೇಳುವುದನ್ನು ಬಿಟ್ಟು ನವರಾತ್ರಿ, ಚೌತಿ ಹಬ್ಬದ ಸಂದರ್ಭದಲ್ಲಿ ವೇಷಗಳನ್ನು ಹಾಕಿ ಮನೆ ಮನೆಗೆ ಸಾಗುವ ರೂಢಿಯಲ್ಲಿದೆ. ಕೋಲ ಸೇವೆಪಾಣಾರಾಟದಲ್ಲಿ ಮೊದಲು ಸ್ವಾಮಿ, ಬೊಬ್ಬರ್ಯ, ಹಾçಗುಳಿ, ಚೌಂಡಿ ಮುಂತಾದ ಕೋಲಗಳ ಸೇವೆಯ (ಹೊಗಳಿಕೆ) ಅನಂತರದ “ಬಲಿಸೇವೆ’ಗೆ ಪಾಣಾರಾಟ ಎನ್ನುತ್ತಾರೆ. ಈ ಅಪೂರ್ವ ಜಾನಪದ ಕಲೆಯಾದ ಕೋಲ ಸೇವೆಯೂ ಮರೆಯಾಗುತ್ತಿದೆ.

ಪ್ರದರ್ಶನ ನೀಡುತ್ತಿದ್ದೇನೆ
ಪ್ರಸ್ತುತ ನಾನು ಮತ್ತು ಪುತ್ರ ಸತೀಶ ಪಾಣ ಮಾತ್ರ ಮನೆ ಮನೆಗೆ ತೆರಳಿ ಪದ ಹೇಳುವುದು, ಪಾಣಾರಾಟ ನಡೆಸಿಕೊಡುವುದನ್ನು ಕಲಿತಿದ್ದು ಪ್ರದರ್ಶನ ನೀಡುತ್ತಿದ್ದೇವೆ. ಮುಂದಿನ ತಲೆಮಾರಿಗೂ ಈ ಜಾನಪದ ಕಲೆ ಉಳಿಯಬೇಕಾಗಿದೆ.
– ನಾಗರಾಜ ಪಾಣ,
ವಾಲೂ¤ರು

Advertisement

– ದಯಾನಂದ ಬಳ್ಕೂರು

Advertisement

Udayavani is now on Telegram. Click here to join our channel and stay updated with the latest news.

Next