Advertisement

ಹಸಿವಿನ ವ್ಯಾಪಾರದ ವಿರುದ್ಧ ನಾವುಗಳು ಹೋರಾಡುತ್ತಿದ್ದೇವೆ: ರಾಕೇಶ್ ಟಿಕಾಯತ್

10:17 AM Mar 21, 2021 | Team Udayavani |

ಶಿವಮೊಗ್ಗ: ಕಳೆದ ನಾಲ್ಕು ತಿಂಗಳಿಂದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಯುತ್ತಿದೆ. ದೇಶದಲ್ಲಿ ಎಂಎಸ್ ಪಿ ಕಾನೂನು ಜಾರಿಗೆ ಬರಬೇಕು. ಅದು ಜಾರಿಗೆ ತರಲು ಹೊರಟಿರುವ ಮೂರು ಕಾಯ್ದೆಯನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು. ನಾವು ಮೊದಲಿನಿಂದಲೂ ಇದನ್ನೇ ಹೇಳುತ್ತಿದ್ದೇವೆ. ಆದರೆ, ಕೇಂದ್ರ ಸರ್ಕಾರ ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದು ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದರು.

Advertisement

ಶಿವಮೊಗ್ಗ ಪ್ರೆಸ್ ಟ್ರಸ್ಟ್ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಮಾರುಕಟ್ಟೆಯಲ್ಲಿ ರೈತರ ಬೆಳೆಗಳಿಗೆ ಉತ್ತಮ ಬೆಂಬಲ ಬೆಲೆಯ ಅಗತ್ಯವಿದೆ. ಇದಕ್ಕಾಗಿ ದೇಶದಲ್ಲಿ ಬಹಳ ದೊಡ್ಡ ಆಂದೋಲನ ನಡೆಯುತ್ತಿದೆ ಎಂದರು.

ಬಹುರಾಷ್ಟ್ರೀಯ ಕಂಪೆನಿಗಳು, ನಮ್ಮನ್ನಾಳಲು ಕಾತುರತೆಯಿಂದ ಕಾಯುತ್ತಿವೆ. ಈಗ ತರಕಾರಿ ಸೇರಿದಂತೆ ಹಲವು ವಸ್ತುಗಳನ್ನು ಮಾಲ್ ಗಳಲ್ಲಿ ಖರೀದಿ ಮಾಡುತ್ತಿದ್ದೇವೆ. ಮುಂದೊಂದು ದಿನ ತಿನ್ನುವ ರೊಟ್ಟಿ ಕೂಡ ಮಾಲ್ ನಲ್ಲಿ ಖರೀದಿ ಮಾಡುವ ಪರಿಸ್ಥಿತಿ ಬರಬಹುದು. ಈಗಾಗಲೇ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಲಾಗುತ್ತಿದೆ. ಹಸಿವಿನ ವ್ಯಾಪಾರದ ವಿರುದ್ಧ ನಾವುಗಳು ಹೋರಾಡುತ್ತಿದ್ದೇವೆ. ದೇಶದಲ್ಲಿ ಜನರ, ಜನರಿಗಾಗಿ ಸರ್ಕಾರ ಇರಬೇಕು. ದೇಶದ ಜನರು ಈಗಲೇ ಎಚ್ಚೆತ್ತುಕೊಳ್ಳಬೇಕಿದೆ ಎಂದು ಟಿಕಾಯತ್ ಹೇಳಿದರು.

ಇದನ್ನೂ ಓದಿ:ಮನೆಯಂಗಳದ ಗಿಡ ಕಿತ್ತ ತಪ್ಪಿಗೆ ಬಾಲಕಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸುಟ್ಟ ದುರುಳ!

ಮೇ, ಜೂನ್ ವರೆಗೆ ಈ ಆಂದೋಲನ ಮುಗಿಯಲಿದೆ ಎಂದು ಕೇಂದ್ರ ಸರ್ಕಾರ ಭಾವಿಸಿದಂತಿದೆ. ಆದರೆ, ಈ ಆಂದೋಲನ ಈ ಕಾಯ್ದೆಗಳನ್ನು ವಾಪಸ್ ಪಡೆದು ರೈತರ ಹಿತ ಕಾಯುವವರೆಗೂ ಮುಗಿಯುವುದಿಲ್ಲ ಎಂದು ಅವರು ಸರ್ಕಾರವನ್ನು ಎಚ್ಚರಿಸಿದರು.

Advertisement

ಕರ್ನಾಟಕ ರಾಜ್ಯದಲ್ಲೂ ಕೃಷಿ ನೀತಿ ಕಾಯ್ದೆ ಜಾರಿಗೊಳಿಸಲಾಗುತ್ತಿದೆ. ಇದರ ವಿರುದ್ಧವೂ ಹೋರಾಟಗಳು ನಿರಂತರವಾಗಿ ನಡೆಯಬೇಕಿದೆ. ಯಾವುದೇ ಕಾರಣಕ್ಕೂ ರಾಜ್ಯದ ರೈತರು ಸುಮ್ಮನೆ ಕೂರಬಾರದು. ರೈತ ಪಂಚಾಯತ್ ಸಮಾವೇಶ ದೇಶದೆಲ್ಲೆಡೆ ಮುಂದುವರೆಯಬೇಕಿದೆ ಎಂದು ಅವರು ಕರೆಕೊಟ್ಟರು.

ಇದನ್ನೂ ಓದಿ: ಇಳಿವಯಸ್ಸಿನ ಏಕಾಂಗಿ ಸಾಹಸ : ಮಚ್ಚಿನ ಗ್ರಾ.ಪಂ. ರಸ್ತೆಗೆ ನಾಣ್ಯಪ್ಪ ಗೌಡರ ಕರಸೇವೆ

ಧರ್ಮ, ಜಾತಿಗಳನ್ನು ಮುಂದಿಟ್ಟುಕೊಂಡು, ಸರ್ಕಾರ ನಡೆಸಲಾಗುತ್ತಿದೆ. ರೈತರ ಹಿತ ಕಾಪಾಡುವ ರೀತಿಯಲ್ಲಿ ಸರ್ಕಾರ ಆಡಳಿತ ನಡೆಸಬೇಕಿದೆ. ಆಗ ಮಾತ್ರ ದೇಶ ಉಳಿಯಲಿದೆ. ಧರ್ಮ, ಜಾತಿ ವಿಚಾರದಲ್ಲಿ ಜನರ ಕಣ್ಣಿಗೆ ಮಣ್ಣೆರುಚುವ ಕೆಲಸ ನಡೆಸಲಾಗುತ್ತಿದೆ ಎಂದು ರಾಕೇಶ್ ಟಿಕಾಯತ್ ಆರೋಪಿಸಿದರು

Advertisement

Udayavani is now on Telegram. Click here to join our channel and stay updated with the latest news.

Next