Advertisement

ಭ್ರಷ್ಟರ ಆಯ್ಕೆಯಲ್ಲಿ ನಾವೂ ಭ್ರಷ್ಟರೇ

02:22 PM Aug 19, 2017 | Team Udayavani |

ದಾವಣಗೆರೆ: ಭ್ರಷ್ಟ ರಾಜಕಾರಣಿಗಳನ್ನು ಆಯ್ಕೆ ಮಾಡುವ ಜನರೂ ಭ್ರಷ್ಟರೇ ಎಂಬುದನ್ನು ನಾವು ಮನನ ಮಾಡಿಕೊಳ್ಳಬೇಕಿದೆ ಎಂದು ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ರಾ.ಲ. ಕಾನೂನು ಕಾಲೇಜು ಗ್ರಂಥಾಲಯ ಸಭಾಂಗಣದಲ್ಲಿ ಶುಕ್ರವಾರ ರಾಷ್ಟ್ರ ನಿರ್ಮಾಣದಲ್ಲಿ ಕಾನೂನು ವಿದ್ಯಾರ್ಥಿಗಳ ಪಾತ್ರ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ನಾವು ಇಂದು ಭ್ರಷ್ಟ ರಾಜಕಾರಣಿಗಳನ್ನು ಬೆಂಬಲಿಸುತ್ತಿದ್ದೇವೆ. ಭ್ರಷ್ಟರನ್ನು ಆಯ್ಕೆ ಮಾಡುವ ನಾವೂ ಈ ಮೂಲಕ ಭ್ರಷ್ಟರಾಗುತ್ತಿದ್ದೇವೆ ಎಂದರು. ಭಾರತ ದೇಶದಲ್ಲಿ ಚುನಾವಣೆ ಸಂದರ್ಭದಲ್ಲಿ ಮತದಾರರು ಎಲ್ಲಾ ಅಭ್ಯರ್ಥಿಗಳಿಂದ ಹಣ ಪಡೆದು ಮತದಾನ ಮಾಡುತ್ತಾರೆ. ಇದರಿಂದ ಗೆದ್ದಂತಹ ಅಭ್ಯರ್ಥಿ ಸಮಾಜ ಸೇವೆ ಮಾಡದೆ ಖರ್ಚು ಮಾಡಿದ ಹಣವನ್ನು ಪಡೆದುಕೊಳ್ಳುವುದರ ಬಗ್ಗೆ ಚಿಂತನೆ ಮಾಡುತ್ತಾ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಳ್ಳುತ್ತಾನೆ. ಅಲ್ಲದೇ ಕೆಲವರು ಜಾತಿ ಆಧಾರದ ಮೇಲೆ ನಾಯಕನನ್ನು ಆಯ್ಕೆ ಮಾಡುತ್ತಾರೆ. ಆ ಮೂಲಕ ರಾಜಕೀಯ ಅಪಮೌಲ್ಯ ಮಾಡುತ್ತಾರೆ ಎಂದರು.

ದೇಶಕ್ಕೆ ಸ್ವತಂತ್ರ ಬಂದು 70 ವರ್ಷಗಳು ಕಳೆದಿವೆ. ಸತತ ಪರಿಶ್ರಮದಿಂದ ನಾವು ಕಟ್ಟುತ್ತಿರುವುದು ಭ್ರಷ್ಟ ದೇಶವನ್ನ. ಇದರ ಅರಿವು ಎಲ್ಲರಿಗೂ ಆಗಬೇಕಿದೆ. ಸ್ವತಂತ್ರ ಹೋರಾಟದಲ್ಲಿ ಭಾಗಿಯಾದವರ ಪೈಕಿ ವಕೀಲರೇ ಹೆಚ್ಚಿದ್ದರು. ಸ್ವತಂತ್ರ ಬಂದು 7 ದಶಕ ಕಳೆದರೂ ನಿರ್ಮಾಣದ ವಿಷಯದಲ್ಲಿ ಆಸಕ್ತಿ ತೋರುತ್ತಿಲ್ಲ ಎಂದು ಅವರು ಹೇಳಿದರು. 

ಪ್ರತಿನಿತ್ಯವೂ ರೈತರು ಸಾಲಬಾಧೆ ಹಾಗೂ ಸ್ವಾಭಿಮಾನಕ್ಕೆ ಹೆದರುತ್ತಾರೆ. ಉನ್ನತ ಮಟ್ಟದ ಅಧಿಕಾರಿ ಪ್ರಾಮಾಣಿಕ ಸೇವೆ ಮಾಡಲಾಗದೆ ಹಾಗೂ ಒತ್ತಡದ ಸಂದರ್ಭ ನಿಭಾಯಿಸಲಾರದೇ ಆತ್ಮಹತ್ಯೆ ಕಡೆ ಮುಖ ಮಾಡಿದ್ದಾರೆ. ಆದರೆ ರಾಜಕೀಯ ನಾಯಕರು ಮಾತ್ರ ಇದುವರೆಗೂ ಎಲ್ಲಿಯೂ ಆತ್ಮಹತ್ಯೆ ಮಾಡಿಕೊಂಡಿಲ್ಲ. ಇದರ ಬಗ್ಗೆ ಚಿಂತನೆ ಮಾಡಬೇಕು ಎಂದು ತಿಳಿಸಿದರು. 

ಕಾಲೇಜಿನ ಪ್ರಾಂಶುಪಾಲ ಪ್ರೊ| ಬಿ.ಎಸ್‌. ರೆಡ್ಡಿ, ಉಪನ್ಯಾಸಕರಾದ ಬಸವನಗೌಡ, ಯತಿರಾಜು, ವಿ. ಸೋಮಶೇಖರ್‌ ಇತರರು ವೇದಿಕೆಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next