Advertisement

ನಿಮ್ಮೆಲ್ಲರ ರಕ್ಷಣೆಗೆ ನಾವು ಬದ್ಧ: ರಾಹುಲ್ ಗಾಂಧಿ

01:16 AM Jun 08, 2019 | mahesh |

ವಯನಾಡ್‌: ‘ಪ್ರಸ್ತುತ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ದ್ವೇಷದ ವಾತಾವರಣ ನಿರ್ಮಿಸುತ್ತಿದ್ದಾರೆ. ಆದರೆ, ದ್ವೇಷವನ್ನು ಪ್ರೀತಿಯಿಂದಷ್ಟೇ ಎದುರಿಸಲು ಸಾಧ್ಯ ಎಂಬುದನ್ನು ಕಾಂಗ್ರೆಸ್‌ ಪಕ್ಷ ಅರ್ಥಮಾಡಿಕೊಂಡಿದೆ. ಮೋದಿಯವರ ನೀತಿಯಿಂದಾಗಿ ಸಮಸ್ಯೆ ಎದುರಿಸುತ್ತಿರುವ ನಿಮ್ಮೆಲ್ಲರನ್ನೂ ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ. ಅದಕ್ಕೆ ನಾವು ಬದ್ಧರಾಗಿದ್ದೇವೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಹೇಳಿದ್ದಾರೆ.

Advertisement

ಶುಕ್ರವಾರ 3 ದಿನಗಳ ಕೇರಳ ಪ್ರವಾಸವನ್ನು ಆರಂಭಿಸಿರುವ ರಾಹುಲ್, ತಮ್ಮ ಲೋಕಸಭಾ ಕ್ಷೇತ್ರವಾದ ವಯನಾಡ್‌ನ‌ಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಈ ಮಾತುಗಳನ್ನಾಡಿದ್ದಾರೆ. ಭಾನುವಾರದವರೆಗೂ ಕೇರಳದಲ್ಲೇ ಇರಲಿರುವ ರಾಹುಲ್, ಸುಮಾರು 15ರಷ್ಟು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಕಲಿಕಾವು, ನೀಲಂಬೂರ್‌, ಎಡವಣ್ಣ ಮತ್ತು ಅರೀಕೋಡೆಯಲ್ಲಿ ಸಾರ್ವಜನಿಕ ಸಭೆ ಹಾಗೂ ರೋಡ್‌ಶೋಗಳಲ್ಲೂ ಪಾಲ್ಗೊಳ್ಳಲಿ ದ್ದಾರೆ. ಲೋಕಸಭೆ ಚುನಾವಣೆಯಲ್ಲಿ ವಯನಾಡ್‌ನಿಂದ ಕಣಕ್ಕಿಳಿದಿದ್ದ ರಾಹುಲ್, 4.31 ಲಕ್ಷ ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಫ‌ಲಿತಾಂಶದ ಬಳಿಕ ಮೊದಲ ಬಾರಿಗೆ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ, ಮತದಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ವಯನಾಡ್‌ನ‌ಲ್ಲಿ ಮಾತನಾಡಿದ ಅವರು, ವಯನಾಡ್‌ನ‌ ಪ್ರತಿಯೊಬ್ಬ ನಾಗರಿಕನಿಗೂ ನನ್ನ ಬಾಗಿಲು ತೆರೆದಿರುತ್ತದೆ. ಕೇವಲ ವಯನಾಡು ಮಾತ್ರವಲ್ಲದೆ, ಇಡೀ ರಾಜ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಲೋಕಸಭೆಯಲ್ಲಿ ಎತ್ತುತ್ತೇನೆ ಎಂದಿದ್ದಾರೆ.

ಮಲಪ್ಪುರಂ ತಲುಪಿದ ಬಳಿಕ ರಾಹುಲ್ ಮಾರ್ಗಮಧ್ಯೆ ಟೀ ಅಂಗಡಿವೊಂದಕ್ಕೆ ತೆರಳಿ, ಚಹಾ ಸವಿದಿದ್ದೂ ಕಂಡುಬಂತು.

ರೈತನ ಮನೆಗೆ ಭೇಟಿ?
ಸಾಲ ತೀರಿಸಲಾಗದೇ ಪನಮಾರಮ್‌ನಲ್ಲಿ ಮೇ 23ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ 53 ವರ್ಷದ ಕೃಷಿಕ ದಿನೇಶ್‌ ಕುಮಾರ್‌ ಅವರ ಮನೆಗೂ ರಾಹುಲ್ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next