Advertisement

ಸಿದ್ದರಾಮಯ್ಯ ಅವರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇವೆ

09:53 PM Jul 16, 2022 | Team Udayavani |

ಕುಳಗೇರಿ ಕ್ರಾಸ್ (ಬಾಗಲಕೋಟೆ) : ಸಿದ್ದರಾಮಯ್ಯ ಅವರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇವೆ ಎಂದು ಹಣ ಎಸೆದದ್ದಕ್ಕಾಗಿ ಕೆರೂರಿನಲ್ಲಿ  ಕ್ಷಮೆ ಯಾಚಿಸಲಾಗಿದೆ.

Advertisement

ಬಿಸ್ಮಿಲ್ಲಾ ಹನೀಫ ಸಾಬ ಚಿಕ್ಕೂರ, ರಾಜೇಸಾಬ ಜಾಫರಸಾಬ ಮಳಗಲಿ,ದಾವಲ ಮಲ್ಲಿಕ್ ಮೆಹಬೂಬಸಾಬ ಮಳಗಲಿ,ರಫೀಕ ಕರೀಮ ಸಾಬ ಮಳಗಲಿ, ಹನೀಫ ಚಾಂದಸಾಬ ಚಿಕ್ಕೂರ, ರಾಜಮಾ ರೆಹಮಾನಸಾಬ ಕಲಾದಗಿ, ಯಾಸ್ಮೀನ ರಾಜೇಸಾಬ ಮಳಗಲಿ ಸೇರಿ ಕೆಲ ಮಹಿಳೆಯರು ಸುದ್ದಿಗಾರರ ಎದುರು ನಿನ್ನೆಯ ವರ್ತನೆಗೆ ಸಾರ್ವಜನಿಕ ಕ್ಷಮೆ ಯಾಚಿಸಿದ್ದಾರೆ.

ಕೆಲವರು ಸೃಷ್ಟಿ ಮಾಡಿದ ಅಶಾಂತಿಯ ವಾತಾವರಣದಿಂದ ಕೆರೂರಿನಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ. ಯಾವುದೇ ತಪ್ಪು ಮಾಡದಿದ್ದರೂ ಅಮಾಯಕರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಹೀಗಾಗಿ ನಮ್ಮ ಮನಸ್ಸಿಗೆ ಭಾರಿ ನೋವಾಗಿತ್ತು. ಈ ನೋವಿನಲ್ಲಿ ಸಿದ್ದರಾಮಯ್ಯ ಅವರ ಮಂದೆ ಅನುಚಿತವಾಗಿ ನಡೆದುಕೊಳ್ಳಬೇಕಾಯಿತು. ಇದಕ್ಕಾಗಿ ನಾವು ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ. ಸಿದ್ದರಾಮಯ್ಯ ಅವರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇವೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಅಗೌರವ ತೋರಿಸುವ ಯಾವುದೇ ಉದ್ದೇಶ ನಮ್ಮದಾಗಿರಲಿಲ್ಲ. ಅವರಿಗೆ ಅವಮಾನ ಮಾಡುವ ಉದ್ದೇಶವೂ ಎಳ್ಳಷ್ಟು ನಮ್ಮಲ್ಲಿ ಇರಲಿಲ್ಲ. ನಡೆದಿರುವ ಘಟನೆಗಳ ಹಿನ್ನೆಲೆಯಲ್ಲಿ ನಮ್ಮ ಮನಸ್ಸಿಗೆ ತೀವ್ರ ಘಾಸಿಯಗಿದೆ. ಸಿದ್ದರಾಮಯ್ಯ ಅವರು ಹಣ ನೀಡುವುದಕ್ಕಿಂತ ಅವರು ನಮಗೆ ನ್ಯಾಯ ಒದಗಿಸಿಕೊಡಬೇಕು ಎಂಬುದೇ ನಮ್ಮ ಕಳಕಳಿಯ ಮನವಿ. ಸಿದ್ದರಾಮಯ್ಯ ಅವರು ನಮ್ಮ ಸಮುದಾಯದ ನಾಯಕರು. ಸದಾ ನಮ್ಮ ಸಮುದಾಯದ ಪರ ನಿಲ್ಲುವ ರಾಜಕಾರಣಿ ಅವರು. ಈ ರೀತಿ ಇರುವಾಗ ಅವರಿಗೆ ಅವಮಾನ ಮಾಡುವ ಮಟ್ಟಕ್ಕೆ ನಾವು ಹೋಗುವುದಿಲ್ಲ.ಆಕಸ್ಮಿಕವಾಗಿ ನಡೆದಿರುವ ಘಟನೆ ಇದಾಗಿಯೇ ಹೊರತು ಸಿದ್ದರಾಮಯ್ಯ ಅವರಿಗೆ ಅಗೌರವ ತೋರಿಸುವ ಉದ್ದೇಶ ನಮ್ಮದಾಗಿರಲಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇವೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದ ಕೆರೂರ ಗುಂಪು ಘರ್ಷಣೆ ಗಾಯಾಳುಗಳ ಭೇಟಿಗೆ ಬಾಗಲಕೋಟೆಗೆ ಆಗಮಿಸಿ ಗಾಯಾಳುಗಳಿಗೆ ನೀಡಿದ ಹಣದ ಕಟ್ಟನ್ನು ಪೊಲೀಸ್ ಬೆಂಗಾವಲು ವಾಹನಕ್ಕೆ ಎಸೆದು ಆಕ್ರೋಶ ವ್ಯಕ್ತಪಡಿಸಲಾಗಿತ್ತು. ನಮಗೆ ನ್ಯಾಯ ಬೇಕು, ಹಣ ಬೇಡ ಎಂದು ಆಕ್ರೋಶ ವ್ಯಕ್ತ ಪಡಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next