Advertisement

ದಿಟ್ಟ ನಿಲುವಿಗೆ ಇಂದಿರಾ ಗಾಂಧಿಯವರನ್ನೂ ಹೊಗಳಿದ್ದೆವು : ಸಚಿವ ಕೆ.ಎಸ್. ಈಶ್ವರಪ್ಪ

03:45 PM Oct 20, 2021 | Team Udayavani |

ಶಿವಮೊಗ್ಗ:’ನಾವು ಕಾಂಗ್ರೆಸ್ ನ ರಾಷ್ಟ್ರೀಯ ನಾಯಕರಿಗೆ ಹಗುರವಾಗಿವಾಗಿ ಇದುವರೆಗೂ ಟೀಕೆ ಮಾಡಿಲ್ಲ.ಪಾಕಿಸ್ತಾನದ ವಿರುದ್ಧ ತೆಗೆದುಕೊಂಡಿದ್ದ ದಿಟ್ಟ ನಿಲುವಿಗೆ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು ಹೊಗಳಿದ್ದೆವು’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಬುಧವಾರ ಹೇಳಿಕೆ ನೀಡಿದ್ದಾರೆ.

Advertisement

ರಾಹುಲ್ ಗಾಂಧಿಯವರ ಬಗ್ಗೆ ನಳಿನ್ ಕುಮಾರ್ ಕಟೀಲ್ ಅವರು ನೀಡಿದ ಹೇಳಿಕೆ ನೀಡಿದ ವಿಚಾರಕ್ಕೆ ಸುದ್ದಿಗಾರರಿಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.

‘ಕಾಂಗ್ರೆಸ್ ನವರು ಬಹಳ ನೋವಿನಿಂದ ಟೀಕೆ ಮಾಡುತ್ತಿದ್ದಾರೆ.ಬಿಜೆಪಿ ಕೇವಲ ಅನಿಸಿಕೊಳ್ಳಲು ಮಾತ್ರ ಇಲ್ಲ’ ಎಂದರು.

‘ಆಗಿನ ವಿಪಕ್ಷ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು, ಇಂದಿರಾಗಾಂಧಿಯವರನ್ನು ದುರ್ಗೆ ಎಂದು ಹೊಗಳಿದ್ದರು. ಆದರೆ, ವಿಶ್ವವೇ ಮೆಚ್ಚಿರುವ ನಾಯಕ, ಪ್ರಧಾನಿ ನರೇಂದ್ರ ಮೋದಿಯವರಿಗೆ ಹೆಬ್ಬೆಟ್ ಗಿರಾಕಿ ಎಂದು ಕಾಂಗ್ರೆಸ್ ನವರು ಟೀಕೆ ಮಾಡಿದ್ದಾರೆ. ಕಾಂಗ್ರೆಸ್ ನವರು ಸೊಕ್ಕಿನಿಂದ ಮಾತನಾಡುತ್ತಾರಲ್ಲಾ.ಹೀಗೆ ಹೇಳಿದಾಗ ನಾವೇನು ಮಂಡಕ್ಕಿ ತಿನ್ನುತ್ತಾ ಕೂರಬೇಕಾ’ ಎಂದು ಕಿಡಿಕಾರಿದರು.

‘ಮೋದಿಗೆ ಟೀಕೆ ಮಾಡಿದ್ದು ಇಡೀ ದೇಶದ, ಪ್ರಪಂಚದ ಜನರಿಗೆ ಇಂತಹ ಹೇಳಿಕೆ ನೋವಾಗಿದೆ. ರಾಹುಲ್ ಗಾಂಧಿ ಬಗ್ಗೆ ಡ್ರಗ್ಸ್ ಪೆಡ್ಲರ್ ಎಂದು ಹೇಳಿದ ಕೂಡಲೇ, ಕಾಂಗ್ರೆಸ್ ನವರ ಹೇಳಿಕೆಗಳು ಬರತೊಡಗಿವೆ.ಕಟೀಲು ಅವರಿಗೆ ನಿಮಾನ್ಸ್ ಗೆ ಸೇರಿಸಿ ಎಂದು ಹೇಳುತ್ತಿದ್ದಾರೆ. ನರೇಂದ್ರ ಮೋದಿಯವರನ್ನು ಟೀಕೆ ಮಾಡಿದ ಅವರಿಗೆ ಯಾವ ಆಸ್ಪತ್ರೆಗೆ ಸೇರಿಸಬೇಕು’ ಎಂದು ಪ್ರಶ್ನಿಸಿದರು.

Advertisement

‘ಸಿದ್ದರಾಮಯ್ಯರಿಗೆ ಯಾವ ಆಸ್ಪತ್ರೆಗೆ ಸೇರಿಸಿದರೂ ಹುಚ್ಚು ವಾಸಿಯಾಗಲ್ಲ’ ಎಂದರು.

‘ನಾವು ಕಾಂಗ್ರೆಸ್ ರಾಷ್ಟ್ರೀಯ ನಾಯಕರುಗಳಿಗೆ ಈ ರೀತಿ ಪದಗಳನ್ನು ಯಾರಿಗೂ ಬಳಸಿದವರಲ್ಲ.ಪ್ರಧಾನಿ ಮೋದಿಯವರಿಗೆ ಟೀಕೆ ಮಾಡಿದ್ದಕ್ಕೆ, ನಮ್ಮ ರಾಜ್ಯಾಧ್ಯಕ್ಷರು, ತಿರುಗೇಟು ನೀಡಿದ್ದಾರಷ್ಟೇ’ ಎಂದರು.

‘ಇದೇ ರೀತಿ ಮುಂದುವರೆಸಿದರೆ, ಈ ರೀತಿ ಹಗುರವಾಗಿ ಮಾತನಾಡಿದರೆ, ನಾವು ಬೇರೆ ಬೇರೆ ರೀತಿಯ ಪದಗಳನ್ನು ನಾವು ಬಳಸಬೇಕಾಗುತ್ತದೆ. ನರೇಂದ್ರ ಮೋದಿಯವರ ಬಗ್ಗೆ ಟೀಕೆ ಮಾಡಿದ ಸಿದ್ಧರಾಮಯ್ಯನವರು, ದೇಶದ ಕ್ಷಮೆ ಕೋರಲಿ.ಕಟೀಲು ಅವರ ಭಾವಚಿತ್ರ ಸುಟ್ಟು ಹಾಕಿದರೆ, ನಾವೇನು ಬೆದರಲ್ಲ.ನಾವು ಶಕ್ತಿಶಾಲಿಯಾಗಿ ಬೆಳೆದಿದ್ದೆವೆ.ಇಡೀ ದೇಶವೇ ನಾವು ಆಳುತ್ತಿದ್ದೆವೆ. ಎಲ್ಲಿದೆ ಕಾಂಗ್ರೆಸ್’ ಎಂದು ಪ್ರಶ್ನಿಸಿದರು.

‘ರಾಷ್ಟ್ರೀಯ ಅಧ್ಯಕ್ಷನ ಆಯ್ಕೆ ಮಾಡುವ ಯೋಗ್ಯತೆ ಇಲ್ಲದವರು ಮೋದಿಯವರ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದರು.

‘ಆರ್.ಎಸ್.ಎಸ್. ಬಗ್ಗೆ ಮಾಜಿ ಸಿ.ಎಂ. ಕುಮಾರಸ್ವಾಮಿ ಟೀಕೆ ಕೂತಿರುವ ಒಬ್ಬ ಕುಂಟನಿಗೆ ಏಳುವ ಶಕ್ತಿ ಇರುವುದಿಲ್ಲ.ಅಂತಹ ಕುಂಟ, ಪೈಲ್ವಾನನಿಗೆ ಎದ್ದು ಬಂದು ಜಾಡಿಸಿ ಒದೆಯುತ್ತೆನೆ ಎಂದು ಹೇಳುತ್ತಾನೆ. ಆದರೆ, ಆ ಕುಂಟನಿಗೆ ಎದ್ದೆಳಲು ಕೂಡ ಶಕ್ತಿ ಇರುವುದಿಲ್ಲ.ಅಂತಹ ಪರಿಸ್ಥಿತಿ ಜೆಡಿಎಸ್ ದ್ದಾಗಿದೆ’ ಎಂದು ಲೇವಡಿ ಮಾಡಿದರು.

‘ಆರ್ ಎಸ್ಎಸ್ ಈಗ ಸೂರ್ಯನಷ್ಟು ಬೆಳೆದಿದೆ.ಆರ್ ಎಸ್ಎಸ್ ಪ್ರಪಂಚದಲ್ಲಿಯೇ, ಸಂಸ್ಕೃತಿ ಬೆಳೆಸುವ ದೊಡ್ಡ ಸಂಘಟನೆ. ಸೂರ್ಯನಿಗೆ ಉಗಿಯುವ ಕೆಲಸ ಇವರು ಮಾಡುತ್ತಿದ್ದಾರೆ. ಸಿದ್ಧರಾಮಯ್ಯರಿಗೆ ಮತ್ತು ಕುಮಾರಸ್ವಾಮಿಯವರಿಗೆ ಆರ್ ಎಸ್ಎಸ್ ನ ಒಂದು ಕೂದಲು ಕೂಡ ಅಲ್ಲಾಡಿಸಲು ಆಗುವುದಿಲ್ಲ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next