Advertisement

ನಾವು ಜನಾಭಿಪ್ರಾಯವನ್ನು ಸ್ವಾಗತಿಸುತ್ತೇವೆ: ಸಿ.ಟಿ ರವಿ

09:44 AM Feb 12, 2020 | Team Udayavani |

ಚಿಕ್ಕಮಗಳೂರು: ದೆಹಲಿ ಚುನಾವಣೆ ಫಲಿತಾಂಶ ಏನೇ ಇರಲಿ ಜನಾಭಿಪ್ರಾಯವನ್ನು ಸ್ವಾಗತಿಸುತ್ತೇವೆ ಎಂದು ಸಚಿವ ಸಿ.ಟಿ. ರವಿ ಹೇಳಿಕೆ ನೀಡಿದ್ದಾರೆ. ಗೆದ್ದಾಗ ಮೋದಿ, ಬಿಜೆಪಿ ವಿರುದ್ಧ ತೀರ್ಪು ಎನ್ನುತ್ತಾರೆ, ಸೋತಾಗ ಇವಿಎಂ ಮೇಲೆ ಆರೋಪಿಸುವುದು ಕೆಲವರ ಕಾಯಿಲೆ ಎಂದು ಪರೋಕ್ಷವಾಗಿ ಅವರು ಕಾಂಗ್ರೆಸ್ ಗೆ ಟಾಂಗ್ ನೀಡಿದರು.

Advertisement

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಪ್ರಜಾಪ್ರಭುತ್ವಕ್ಕೆ ಅಪಮಾನಿಸುವ ಕೆಲಸ ಮಾಡಲ್ಲ, ದೀರ್ಘ ವರ್ಷಗಳ ಆಡಳಿತ ನಡೆಸಿದ ಕಾಂಗ್ರೆಸ್ ಶೂನ್ಯ ಸಂಪಾದಿಸಿದೆ. ದೊಡ್ಡ ಪರಂಪರೆಯ ಕಾಂಗ್ರೆಸ್ ದೆಹಲಿಯಲ್ಲಿ ಅವಸಾನದ ಅಂಚಿನಲ್ಲಿದೆ. ಇನ್ನಾದರೂ ಟೀಕೆಯನ್ನೇ ಉದ್ಯೋಗ ಮಾಡಿಕೊಳ್ಳುವುದನ್ನ ಕಾಂಗ್ರೆಸ್ ಬಿಡಲಿ ಎಂದರು.

ನಾವು ಸೋಲು-ಗೆಲುವು ಎರಡನ್ನೂ ಕಂಡಿದ್ದೇವೆ, ಅದು ಸ್ವಾಭಾವಿಕ ಸ್ಥಳೀಯ ನಾಯಕತ್ವ, ಸಮಸ್ಯೆ, ಸ್ಥಳೀಯ ನಾಯಕತ್ವ ಆಧಾರದ ಅರಿವಾಗಿದೆ. ನಮ್ಮದು ವಿರೋಚಿತ ಹೋರಾಟ, ಅಸಹಾಯಕತೆಯ ಶರಣಾಗತಿಯಲ್ಲ ಎಂದರು.

ಸೋಲಿಗೆ ಕಾರಣವೇನೆಂದು ಪಕ್ಷದ ವೇದಿಕೆಯಲ್ಲಿ ಚರ್ಚಿಸುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next