Advertisement

ಬಿಬಿಎಲ್ ನಲ್ಲಿ ಸಿಡ್ನಿ ಥಂಡರ್ಸ್ ಪರ ಆಡಲಿದ್ದಾರೆ ಇಬ್ಬರು ಭಾರತೀಯರು

09:54 AM Sep 26, 2021 | Team Udayavani |

ಮುಂಬೈ: ಭಾರತದಲ್ಲೀಗ ಇಂಡಿಯನ್ ಪ್ರೀಮಿಯರ್ ಲೀಗ್ ನದ್ದೇ ಹವಾ. ಎಲ್ಲೆಡೆ ಐಪಿಎಲ್ ಮಾತು. ಕೋವಿಡ್ ಕಾರಣದಿಂದ ಭಾರತದಿಂದ ಯುಎಇ ಗೆ ಐಪಿಎಲ್ ಸ್ಥಳಾಂತರಿಸಿದ್ದರೂ, ಚುಟುಕು ಸಮರದ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಅತ್ತ ಆಸ್ಟ್ರೇಲಿಯಾದಲ್ಲೂ ಬಿಗ್ ಬ್ಯಾಶ್ ಲೀಗ್ ನ ತಯಾರಿ ಆರಂಭವಾಗಿದೆ.

Advertisement

ಬಿಗ್ ಬಾಶ್ ಲೀಗ್ ನ ಮಹಿಳಾ ಕೂಟಕ್ಕೆ ತಯಾರಿ ಜೋರಾಗಿಯೇ ನಡೆಯುತ್ತಿದೆ. ಭಾರತೀಯ ಆಟಗಾರರಾದ ಸ್ಮೃತಿ ಮಂಧನಾ ಮತ್ತು ದೀಪ್ತಿ ಶರ್ಮಾ ಅವರೊಂದಿಗೆ ಸಿಡ್ನಿ ಥಂಡರ್ಸ್ ಒಪ್ಪಂದ ಮಾಡಿಕೊಂಡಿದೆ.

ಇದನ್ನೂ ಓದಿ:ಎಂಟು ಪಂದ್ಯ ಗೆದ್ದ ಡೆಲ್ಲಿಗೆ ಮತ್ತೆ ಅಗ್ರಸ್ಥಾನ

ಸಿಡ್ನಿ ಥಂಡರ್ಸ್ ತಂಡಕ್ಕೆ ಹೀಥರ್ ನೈಟ್ ಮತ್ತು ಟ್ಯಾಮಿ ಬೊಮೆಂಟ್ ಅಲಭ್ಯರಾದ ಕಾರಣ ಭಾರತೀಯರನ್ನು ಫ್ರಾಂಚೈಸಿ ಸೇರಿಸಿಕೊಂಡಿದೆ. ಕಳೆದ ಸೀಸನ್ ನಲ್ಲಿ ಚಾಂಪಿಯನ್ ಆಗಿದ್ದ ಸಿಡ್ನಿ ಥಂಡರ್ಸ್ ಈ ಬಾರಿ ಮತ್ತೆ ಚಾಂಪಿಯನ್ ಆಗುವತ್ತ ದೃಷ್ಟಿ ನೆಟ್ಟಿದೆ.

Advertisement

ಸ್ಮೃತಿ ಮಂಧನಾ ಈ ಮೊದಲು ಬಿಗ್ ಬ್ಯಾಶ್ ನಲ್ಲಿ ಆಡಿದ್ದರು. ಬ್ರಿಸ್ಬೇನ್ ಹೀಟ್ ಮತ್ತು ಹೋಬಾರ್ಟ್ ಹರಿಕೇನ್ಸ್ ತಂಡದಲ್ಲಿ ಭಾರತದ ಎಡಗೈ ಆರಂಭಿಕ ಆಟಗಾರ್ತಿ ಆಡಿದ್ದರು. ದೀಪ್ತಿ ಶರ್ಮಾ ಇದೇ ಮೊದಲ ಬಾರಿ ಆಸೀಸ್ ಲೀಗ್ ನಲ್ಲಿ ಆಡಲಿದ್ದಾರೆ. ಇತ್ತೀಚೆಗೆ ದಿ ಹಂಡ್ರೆಡ್ ನಲ್ಲಿ ಆಡಿದ್ದ ದೀಪ್ತಿ 5.26 ಎಕಾನಮಿಯಲ್ಲಿ 10 ವಿಕೆಟ್ ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next