Advertisement

ಜಿಮ್‌ಗೆ ಹೋಗಲು ಪ್ರೇರೇಪಿಸುವ ಮಾರ್ಗಗಳು

10:30 PM Feb 24, 2020 | mahesh |

ನೀವು ಜಿಮ್‌ಗೆ ಹೋಗಬೇಕು ಅಂದುಕೊಂಡಿರುತ್ತೀರಿ. ನಾಳೆಯಿಂದ ಹೋಗೋಣ ಎಂದು ನಿರ್ಧರಿಸಿ ಮಲಗಿರುತ್ತೀರಿ. ಆದರೆ ಮಾರನೇ ದಿನವೇ ಎಚ್ಚರವಾದಾಗ ಇವತ್ತು ಬೇಡ ನಾಳೆ ಹೋಗೋಣ ಎಂದು ಮುಸುಕು ಹೊದ್ದು ಮತ್ತೇ ಮಲಗಿ ಬಿಡುತ್ತೀರಿ. ಹೀಗೆ ನಾಳೆ ಎನ್ನುವುದು ಬರುವುದೇ ಇಲ್ಲ. ಇದು ನಿಮ್ಮೊಬ್ಬರ ಸಮಸ್ಯೆ ಒಂದೇ ಅಲ್ಲ. ಬಹುತೇಕರು ಇಂತಹ ಸಮಸ್ಯೆ ಎದುರಿಸುತ್ತಾರೆ. ಇದಕ್ಕೆ ಸರಳ ಪರಿಹಾರವಿದೆ. ದಿನಚರಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

Advertisement

ಜಿಮ್‌ ಮೆಟ್‌ ಗುರುತಿಸಿ
ನಾವು ಯಾವುದೇ ಕೆಲಸವನ್ನು ಇಷ್ಟ ಪಡುತ್ತೇವೆ ಎಂದಾದರೆ ಅದನ್ನು ದಿನಚರಿಯ ಭಾಗವಾಗಿಸುತ್ತೇವೆ. ಇದು ಜಿಮ್‌ ವಕೌìಟ್‌ಗೂ ಅನ್ವಯಿಸುತ್ತದೆ. ನೀವು ಇದನ್ನು ಇಷ್ಟಪಡುತ್ತೀರಿ ಎಂದಾದರೆ ಒಂದು ದಿನವೂ ತಪ್ಪಿಸಿಕೊಳ್ಳುವುದಿಲ್ಲ. ಆದ್ದರಿಂದ ನಿಮ್ಮ ಸ್ನೇಹಿತರೂ ಜಿಮ್‌ ಸೇರುವಂತೆ ಮನವೊಲಿಸಿ. ಇಲ್ಲದಿದ್ದರೆ ದಿನಾ ಜಿಮ್‌ಗೆ ಹೋಗುವವರನ್ನು ಸ್ನೇಹಿತರನ್ನಾಗಿಸಿ. ಏಕಾಂಗಿಯಾಗಿ ಜತೆಗೆ ವಕೌìಟ್‌ ಮಾಡುವುದಕ್ಕಿಂತ ಇದು ಉತ್ತಮ. ಒಂದು ವೇಳೆ ಜಿಮ್‌ಗೆ ಹೋಗಲು ನಿಮಗೆ ಉದಾಸೀನವಾದರೂ ನಿಮ್ಮ ಸ್ನೇಹಿತ ಕರೆದೊಯ್ಯಬಹುದು.

ಹತ್ತಿರದ ಜಿಮ್‌ ಗುರುತಿಸಿ
ಜಿಮ್‌ ದೂರ ಇದ್ದರೆ ಹೋಗಿ ಬರಲು ಕಷ್ಟ. ಅಲ್ಲದೆ ನಿಮ್ಮ ಸಮಯವೂ ವ್ಯರ್ಥವಾಗುತ್ತದೆ. ಆದ್ದರಿಂದ ಹತ್ತಿರದಲ್ಲೇ ಇರುವ ಜಿಮ್‌ ಗುರುತಿಸಿ.

ದೃಢ ನಿರ್ಧಾರವಿರಲಿ
ಕೆಲವೊಮ್ಮೆ ನಿಮ್ಮ ಉದಾಸೀನತೆ ಜಿಮ್‌ಗೆ ಹೋಗುವುದಕ್ಕೆ ತಡೆಯಾಗಬಹುದು. ಆದ್ದರಿಂದ ಮಾನಸಿಕವಾಗಿ ದೃಢ ನಿರ್ದಾರ ಕೈಗೊಳ್ಳಿ. ಯಾವ ಕಾರಣಕ್ಕೂ ಜಿಮ್‌ ತಪ್ಪಿಸುವುದಿಲ್ಲ ಎನ್ನುವ ಮನಸ್ಥಿತಿ ಹೊಂದಿ. ಒಂದು ದಿನ ವಕೌìಟ್‌ ತಪ್ಪಿಸಿದರೆ ಮತ್ತೆ ಮತ್ತೆ ಉದಾಸೀನತೆ ಕಾಡುತ್ತದೆ.

ತಾಳ್ಮೆ ಇರಲಿ
ಜಿಮ್‌ಗೆ ಸೇರಿದ ತತ್‌ಕ್ಷಣ ಕೊಬ್ಬು ಕರಗುತ್ತದೆ ಎನ್ನುವ ನಿರೀಕ್ಷೆ ಬೇಡ. ತೂಕ ಕಳೆದುಕೊಳ್ಳಲು ಕನಿಷ್ಠ ಎರಡರಿಂದ ಮೂರು ತಿಂಗಳು ಹಿಡಿಯುತ್ತದೆ. ಆದ್ದರಿಂದ ಕೊಬ್ಬು ಕರಗುವವರೆಗೆ ತಾಳ್ಮೆ ಇರಲಿ.

Advertisement

ಸರಿಯಾದ ಸಮಯಕ್ಕೆ ಮಲಗಿ: ಬೇಗ ಮಲಗಿದರೆ ಬೇಗ ಎದ್ದೇಳಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿ ದಿನ ಸರಿಯಾದ ಸಮಯಕ್ಕೆ ಮಲಗುವುದನ್ನು ರೂಢಿಸಿಕೊಳ್ಳಿ. ಎಂಟು ಗಂಟೆ ನಿದ್ದೆ ಸಿಕ್ಕರೆ ಉದಾಸೀನತೆ ಕಾಡುವುದಿಲ್ಲ. ಆದ್ದರಿಂದ ತಡರಾತ್ರಿವರೆಗೆ ಮೊಬೈಲ್‌ನಲ್ಲಿ ಕಾಲಹರಣ ಮಾಡುವುದನ್ನು ಬಿಟ್ಟು ಬೇಗ ಮಲಗಿ ಬಿಡಿ. ನೆನಪಿರಲಿ ಸೋಶಿಯಲ್‌ ಮೀಡಿಯಾ ನಿಮ್ಮ ಕೊಬ್ಬು ಕರಗಿಸಲು ಸಹಾಯ ಮಾಡುವುದಿಲ್ಲ.

- ಆರ್‌.ಬಿ.

Advertisement

Udayavani is now on Telegram. Click here to join our channel and stay updated with the latest news.

Next