Advertisement

Wayanad ಮೃತರ ಸಂಖ್ಯೆ 369ಕ್ಕೆ: ನೆರವಿಗಾಗಿ ಒಂದಾದ ರಾಜಕಾರಣಿಗಳು

12:21 AM Aug 05, 2024 | Team Udayavani |

ವಯನಾಡ್‌: ವಯನಾಡ್‌ ಸಂತ್ರಸ್ತರ ರಕ್ಷಣ ಕಾರ್ಯಾ ಚರಣೆ 6ನೇ ದಿನಕ್ಕೆ ತಲುಪಿರುವಂತೆಯೇ ದೇಶದ ಮೂಲೆ-ಮೂಲೆಗಳಿಂದ ನೆರವು ಹರಿದುಬರುತ್ತಿದೆ. ಇತ್ತ ರಾಜ್ಯದಲ್ಲೂ ವಯನಾಡ್‌ ಪುನರ್‌ ನಿರ್ಮಿಸಲು ಆಡಳಿತಾರೂಢ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಸರಕಾರಕ್ಕೆ ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಕೂಡ ಸಹಕಾರ ನೀಡುವುದಾಗಿ ಘೋಷಿಸಿದೆ. ಇದರ ಭಾಗವಾಗಿ ಯುಡಿಎಫ್ನ ಎಲ್ಲ ಶಾಸಕರು ತಮ್ಮ ಒಂದು ತಿಂಗಳ ವೇತನವನ್ನು ಸಿಎಂ ಪರಿಹಾರ ನಿಧಿಗೆ ನೀಡುವುದಾಗಿ ಹೇಳಿದ್ದಾರೆ. ಮತ್ತೂಂದೆಡೆ ಸಿನೆಮಾ ನಟರೂ ವಯನಾಡಿಗಾಗಿ ಮಿಡಿಯುತ್ತಿದ್ದು, ಮೆಗಾ ಸ್ಟಾರ್‌ ಚಿರಂಜೀವಿ ಮತ್ತು ಅವರ ಮಗ ನಟ ರಾಮ್‌ ಚರಣ್‌ ಅವರು ಸಂತ್ರಸ್ತರಿಗಾಗಿ 1 ಕೋಟಿ ರೂ., ನಟ ಅಲ್ಲು ಅರ್ಜುನ್‌ ಕೂಡ 25 ಲಕ್ಷ ರೂ. ಗಳನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ.

Advertisement

ಮೃತರ ಸಂಖ್ಯೆ 369ಕ್ಕೆ ಏರಿಕೆ
ವಯನಾಡ್‌ನ‌ ಭೂಕುಸಿತ ಪ್ರದೇಶಗಳಲ್ಲಿನ ರಕ್ಷಣ ಕಾರ್ಯಾಚರಣೆ ಮುಂದುವರಿ ದಿದ್ದು, ರವಿವಾರ ಚಲಿಯಾರ್‌ ನದಿ ದಂಡೆಗಳಲ್ಲಿ 12 ಶವಗಳನ್ನು ಮೇಲೆತ್ತಲಾಗಿದೆ. ಈ ಮೂಲಕ ಮೃತರ ಸಂಖ್ಯೆ 369ಕ್ಕೆ ಏರಿಕೆಯಾಗಿದೆ. ಜತೆಗೆ ದುರಂತದಲ್ಲಿ ನಾಪತ್ತೆಯಾದವರ ಸಂಖ್ಯೆಯೂ 206ಕ್ಕೆ ತಲುಪಿದೆ. ರಕ್ಷಣ ಕಾರ್ಯಾಚರಣೆಯನ್ನು ಬಿರುಸುಗೊಳಿಸುವ ನಿಟ್ಟಿನಲ್ಲಿ ಹೆಚ್ಚುವರಿ ಸಿಬಂದಿ, ಡ್ರೋನ್‌ ಸೇರಿ ಇತರ ಉಪಕರಣಗಳ ನಿಯೋಜನೆಯನ್ನೂ ಹೆಚ್ಚಿಸಿರು ವುದಾಗಿ ಆಡಳಿತ ಮಾಹಿತಿ ನೀಡಿದೆ. ಜತೆಗೆ ವಯನಾಡ್‌, ಮಲಪ್ಪುರಂ, ಕಲ್ಲಿಕೋಟೆ ಮಾರ್ಗವಾಗಿ ಸಾಗುವ ಚಲಿಯಾರ್‌ ನದಿಯಲ್ಲೂ ಶವಗಳ ಶೋಧ ಕಾರ್ಯಾಚರಣೆ ಬಿರುಸುಗೊಳಿಸಲಾಗಿದೆ. ಆ ನದಿ ಯೊಂದರಲ್ಲೇ 74ಕ್ಕೂ ಅಧಿಕ ಶವಗಳು ಸಿಕ್ಕಿದ್ದು, ದೇಹದ 134ಕ್ಕಿಂತ ಹೆಚ್ಚು ಭಾಗಗಳು ಪತ್ತೆಯಾಗಿವೆ.

ಹೃದಯ ಗೆದ್ದ ಕೇರಳದ ಪುಟ್ಟ ಬಾಲಕನ ಪತ್ರ!
ವಯನಾಡ್‌: ಕೇರಳದ ಪುಟ್ಟ ಬಾಲಕನೊಬ್ಬ ವಯ ನಾಡ್‌ ರಕ್ಷಣ ಕಾರ್ಯಾಚರಣೆಯ ಕುರಿತು ಸೈನ್ಯಕ್ಕೆ ಬರೆ ದಿರುವ ಪತ್ರ ಹೃದಯಸ್ಪರ್ಶಿಯಾಗಿದೆ. ಮಾಸ್ಟರ್‌ ರಾಯನ್‌ ಈ ಪತ್ರ ಬರೆದಿದ್ದು, ಭವಿಷ್ಯದಲ್ಲಿ ಸೇನೆ ಸೇರುವ ಇರಾದೆ ವ್ಯಕ್ತಪಡಿಸಿ ದ್ದಾನೆ. “ನಿಮ್ಮ ರಕ್ಷಣ ಕಾರ್ಯಾ ಚರಣೆ ನೋಡಲು ಸಂತೋಷ ಹಾಗೂ ಹೆಮ್ಮೆ ಆಗುತ್ತಿದೆ. ಕೇವಲ ಬಿಸ್ಕೆಟ್‌ನಿಂದ ಹಸಿವನ್ನು ನೀಗಿಸಿಕೊಂಡು ಸೇತುವೆ ನಿರ್ಮಾಣದಲ್ಲಿ ತೊಡಗಿರುವುದು, ನನಗೂ ಭವಿಷ್ಯದಲ್ಲಿ ಸೇನೆ ಸೇರಲು ಸ್ಫೂರ್ತಿಯಾಗಿದೆ’ ಎಂದು ಕೈಬರಹದ ಪತ್ರದ ಮೂಲಕ ತಿಳಿಸಿದ್ದಾನೆ. ಈ ಪತ್ರಕ್ಕೆ ಸೇನೆ ಪ್ರತಿಕ್ರಿಯಿಸಿದ್ದು, ಈ ರೀತಿ ಪದಗಳು ನಮಗೆ ಕೆಲಸ ಮಾಡಲು ಶಕ್ತಿ ನೀಡುತ್ತವೆ ಎಂದು ಹೇಳಿದೆ.

ವಯನಾಡ್‌ ಸ್ಮರಣೀಯ: ಸಂಸದ ತರೂರ್‌ಗೆ ತರಾಟೆ
ತಿರುವನಂತಪುರ: ವಯನಾಡಿಗೆ ತಮ್ಮ ಭೇಟಿ “ಸ್ಮರಣೀಯ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ ಕಾಂಗ್ರೆಸ್‌ ಸಂಸದ ಶಶಿ ತರೂರ್‌ಗೆ ಬಿಜೆಪಿ ಸೇರಿದಂತೆ ನೆಟ್ಟಿಗರು ತರಾಟೆ ತೆಗೆದು ಕೊಂಡಿದ್ದಾರೆ. ಇದರಿಂದ ಎಚ್ಚೆತ್ತ ತರೂರ್‌, ಸ್ಮರಣೀಯ ಪದ ಅರ್ಥವನ್ನು ಹುಡುಕಿ ಹಾಕಿ ಸ್ಪಷ್ಟನೆ ನೀಡಿ ಆಕ್ರೋಶ ವನ್ನು ತಿಳಿಗೊಳಿಸಲು ಯತ್ನಿಸಿದ್ದಾರೆ. ವಯನಾಡಿನ ಭೂಕುಸಿತ ಪ್ರದೇಶಕ್ಕೆ ಭೇಟಿ ನೀಡಿದ್ದ ತರೂರ್‌, ಅಲ್ಲಿನ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸಿದ್ದರು. ಮತ್ತೆ ಸ್ಪಷ್ಟನೆ ನೀಡಿ ರುವ ತರೂರ್‌, ಸ್ಮರಣೀಯ ಎಂದರೆ “ಮರೆಯಲಾಗದ, ಗಮನಾರ್ಹ’ ಎಂಬ ಅರ್ಥವೂ ಇದೆ ಎಂದು ಹೇಳಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next