Advertisement
ವಯನಾಡ್ ಅನ್ನು ರಾಹುಲ್ ಅವರು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಗುಸುಗುಸು ಹಬ್ಬುತ್ತಿದ್ದಂತೆ, ಅಮೇಠಿಯಲ್ಲಿ ಅವರ ಗೆಲುವು ಖಚಿತವಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಇದಕ್ಕೆ ಕಾರಣ 2014ರಲ್ಲಿ ಅವರ ಗೆಲುವು ದೊಡ್ಡ ಪ್ರಮಾಣದ್ದೇನೂ ಆಗಿರಲಿಲ್ಲ. ಶೇಕಡಾವಾರು ಮತಗಳಿಕೆಯಲ್ಲಿ ಬಿಜೆಪಿ ಕಾಂಗ್ರೆಸ್‌ಗೆ ತೀವ್ರ ಪೈಪೋಟಿ ಒಡ್ಡಿತ್ತು.
ಬಿಜೆಪಿ ಅಮೇಠಿಯಲ್ಲಿ ಕಳೆದ ಬಾರಿ ಸೋತರೂ, ಅದರ ಲಕ್ಷ್ಯ 2019ರದ್ದಾಗಿತ್ತು. ಚುನಾವಣೆಯಲ್ಲಿ ಸೋತ ಬಳಿಕ ಸೋತ ಅಭ್ಯರ್ಥಿ ಸ್ಮತಿ ಇರಾನಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ. ಇದರರ್ಥ ಮುಂದಿನ ಬಾರಿಯಾದರೂ ಗಾಂಧಿ ಕುಟುಂಬದ ಕೋಟೆ ಯಂತಿದ್ದ ಅಮೇಠಿಯನ್ನು ರಾಹುಲ್ ಕೈಯಿಂದ ತಪ್ಪಿಸು ತ್ತಿದ್ದೇವೆ ಎಂಬ ಪ್ರಬಲ ಸಂದೇಶವನ್ನು ನೀಡಲಾಗಿತ್ತು. ಅದಕ್ಕೆ ತಕ್ಕಂತೆ ಅಮೇಠಿಯಲ್ಲಿ ತಳಮಟ್ಟದ ಸಂಪರ್ಕ, ಪಕ್ಷ ಕಟ್ಟುವ ಕೆಲಸವನ್ನು ಬಿಜೆಪಿ ಇನ್ನಿಲ್ಲದಂತೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಇನ್ನೊಂದು ಕ್ಷೇತ್ರದಲ್ಲಿ ಕಣಕ್ಕಿಳಿಸುವ ಬಗ್ಗೆ ತೀರ್ಮಾನ ಮಾಡಿತ್ತು. ಅಮೇಠಿಯಲ್ಲಿ ಏನಾಗಿತ್ತು?
1970ರಿಂದಲೂ ಅಮೇಥಿ ಗಾಂಧಿ ಕುಟುಂಬದ ಭದ್ರ ಕೋಟೆ. 1998ರಲ್ಲಿ ಒಂದು ಬಾರಿ ಮಾತ್ರ ಬಿಜೆಪಿ ಪಾಲಾಗಿತ್ತು. ಅದನ್ನು ಹೊರತು ಪಡಿಸಿದರೆ 2004ರಿಂದ ರಾಹುಲ್ ಗಾಂಧಿಯವರು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 2009ರಲ್ಲಿ ರಾಹುಲ್ ಅವರು ಶೇ.71.8ರಷ್ಟು ಮತ ಪಡೆದಿದ್ದರು. ಈ ಸಂದರ್ಭ ಬಿಜೆಪಿ ನಾಲ್ಕನೇ ಸ್ಥಾನಕ್ಕೆ ಕುಸಿದಿತ್ತು. ಆದರೆ 2014ರಲ್ಲಿ ಇದು ಸಂಪೂರ್ಣ ಬದಲಾಗಿತ್ತು. ರಾಹುಲ್ ಅವರ ಶೇಕಡಾವಾರು ಮತಗಳಿಕೆ ಶೇ. 46.2ಕ್ಕೆ ಕುಸಿದಿದ್ದು, ಅವರ ಪ್ರತಿಸ್ಪರ್ಧಿ, ಬಿಜೆಪಿಯ ಸ್ಮತಿ ಇರಾನಿ ಮತಗಳಿಕೆ ಶೇ.34.4ರಷ್ಟಕ್ಕೆ ಏರಿತ್ತು. ಅಂದರೆ ಐದೇ ವರ್ಷದಲ್ಲಿ ಶೇ.28.1ರಷ್ಟು ಮತವನ್ನು ರಾಹುಲ್ ಕಳೆದುಕೊಂಡಿದ್ದರು. 2009ರಿಂದ 2014ರ ವೇಳೆಗೆ ಬಿಜೆಪಿ ಮತಗಳಿಕೆಯನ್ನು ಶೇ.28.5ರಷ್ಟು ಏರಿಸಿಕೊಂಡಿತ್ತು.
Related Articles
Advertisement
ವಯನಾಡ್‌ನಲ್ಲಿ ಏನಾಗಿತ್ತು?2009ರ ಚುನಾವಣೆಯಲ್ಲಿ ಕಾಂಗ್ರೆಸ್ ಮತಗಳಿಕೆ ಪ್ರಮಾಣ ಶೇ. 50ರಷ್ಟಿದ್ದರೆ, ಸಿಪಿಐ ಮತಗಳಿಕೆ ಶೇ. 31ರಷ್ಟಿತ್ತು. ಇತರರದ್ದು ಶೇ. 15 ಮತ್ತು ಬಿಜೆಪಿ ಶೇ. 4ರಷ್ಟಿತ್ತು. 2014ರ ಹೊತ್ತಿಗೆ ಕಾಂಗ್ರೆಸ್ ಮತಗಳಿಕೆ ಶೇ. 41ರಷ್ಟಕ್ಕೆ ಇಳಿದಿದ್ದು, ಸಿಪಿಐನದ್ದು ಶೇ.39ಕ್ಕೇರಿತ್ತು. ಅಂದರೆ ಕಾಂಗ್ರೆಸ್ ಮತಗಳಿಕೆ ಶೇ. 10ರಷ್ಟು ಇಳಿದಿದ್ದು, ಸಿಪಿಐನದ್ದು ಶೇ. 8ರಷ್ಟು ಏರಿತ್ತು. ಕಾಂಗ್ರೆಸ್, ಸಿಪಿಐ ಮತಗಳಿಕೆ ವ್ಯತಾಸ ಶೇ. 2.3 ಆಗಿತ್ತು. ಹಾಗೆಯೇ ಬಿಜೆಪಿ ಮತಗಳಿಕೆ ಗಮನಾರ್ಹವಾಗಿ ಶೇ. 8.8ಕ್ಕೇರಿತ್ತು. 2016ರ ಚುನಾವಣೆಯಲ್ಲಿ ಕಾಂಗ್ರೆಸ್ ಮತಗಳಿಕೆ ವಯನಾಡ್‌ನಲ್ಲಿ ಶೇ. 41.2ರಿಂದ ಶೇ. 44.7ಕ್ಕೆ ಏರಿತ್ತು. ಸಿಪಿಐನದ್ದು ಶೇ. 38.9ರಿಂದ ಶೇ. 43.1ಕ್ಕೇರಿತ್ತು. ಇಲ್ಲೂ ಎಡಪಕ್ಷಗಳು ಕಾಂಗ್ರೆಸ್‌ಗೆ ನೇರ ಸ್ಪರ್ಧೆಯನ್ನು ನೀಡಿವೆ. ಆದ್ದರಿಂದ ಫಲಿತಾಂಶಗಳನ್ನು ಗಮನಿಸಿದಾಗ ಅಮೇಠಿ ಗಿಂತ ವಯನಾಡ್‌ನ ಚುನಾವಣೆ ಫಲಿತಾಂಶ ರಾಹುಲ್ ಗಾಂಧಿಯವರ ಪಾಲಿಗೆ ಬಹಳ ಸಿಹಿಯಾಗಿರಬಹುದು ಎಂದು ಹೇಳುವಂತಿಲ್ಲ.