Advertisement

Wayanad ಭೀಕರ ದುರಂತ; ಇದುವರೆಗೆ 401 ಅಂಗಾಂಗಗಳ ಡಿಎನ್ಎ ಪರೀಕ್ಷೆ!

11:54 AM Aug 14, 2024 | Team Udayavani |

ವಯನಾಡ್ : ಜುಲೈ 30 ರಂದು ಸಂಭವಿಸಿದ ಭೀಕರ ಭೂಕುಸಿತದಿಂದ ತತ್ತರಿಸಿ ಹೋಗಿರುವ ವಯನಾಡಿನಲ್ಲಿ ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಪತ್ತೆಯಾದ 401 ದೇಹದ ಭಾಗಗಳ ಡಿಎನ್‌ಎ ಪರೀಕ್ಷೆ ಮಂಗಳವಾರ ಪೂರ್ಣಗೊಂಡಿದೆ.

Advertisement

ಸೇನೆ, ವಿಶೇಷ ಕಾರ್ಯಾಚರಣೆ ಪಡೆ, ಅಗ್ನಿಶಾಮಕ, ರಕ್ಷಣ ತಂಡಗಳು ಅರಣ್ಯ ಇಲಾಖೆ ಮತ್ತು ಹಲವಾರು ಸ್ವಯಂಸೇವಕರನ್ನು ಒಳಗೊಂಡ ತಂಡಗಳು ನಡೆಸಿರುವ ಶೋಧ ಕಾರ್ಯಾಚರಣೆಯಲ್ಲಿ 121 ಪುರುಷರು ಮತ್ತು 127 ಮಹಿಳೆಯರು ಸೇರಿದಂತೆ 248 ಜನರಿಗೆ ಸೇರಿದ 349 ದೇಹದ ಭಾಗಗಳು ಪತ್ತೆಯಾಗಿವೆ. 52 ದೇಹದ ಭಾಗಗಳು ಕೊಳೆತಿರುವುದರಿಂದ ಹೆಚ್ಚಿನ ಪರೀಕ್ಷೆಗಳ ಅಗತ್ಯವಿದೆ ಎಂದು ಕಂದಾಯ ಸಚಿವ ಕೆ.ರಾಜನ್ ಹೇಳಿದ್ದಾರೆ.

ಇದುವರೆಗೆ 115 ಮಂದಿಯ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಬಿಹಾರದ ಮೂವರು ಸ್ಥಳೀಯರ ಸಂಬಂಧಿಕರ ರಕ್ತದ ಮಾದರಿಗಳು ಈಗ ಲಭ್ಯವಾಗಿವೆ ಎಂದು ಸಚಿವ ಕೆ.ರಾಜನ್ ಹೇಳಿದ್ದಾರೆ.

ತಾತ್ಕಾಲಿಕ ಪುನರ್ವಸತಿಗಾಗಿ, ಈಗ ನೀಡಲು ಸಿದ್ಧವಾಗಿರುವ 53 ಮನೆಗಳ ಸುರಕ್ಷತೆ ಮತ್ತು ನಿರ್ವಹಣೆಯ ಬಗ್ಗೆ ವರದಿಯನ್ನು ನೀಡುವಂತೆ ಹ್ಯಾರಿಸನ್ ಮಲಯಾಳಂ ಕಾರ್ಮಿಕ ಸಂಘಟನೆಗಳನ್ನು ಕೇಳಲಾಗಿದೆ ಮತ್ತು ಉಳಿದ ಮನೆಗಳನ್ನು ಒದಗಿಸಲಾಗುವುದು ಎಂದು ಸಚಿವ ಹೇಳಿದ್ದಾರೆ.

ಮುಂಡಕೈ-ಚುರಲ್ಮಲಾ ದುರಂತ ಪ್ರದೇಶಗಳಲ್ಲಿ ಹುಡುಕಾಟಕ್ಕಾಗಿ ಮಂಗಳವಾರ 260 ಸ್ವಯಂಸೇವಕರು ಸೇರಿಕೊಂಡಿದ್ದಾರೆ. ಚುರಲ್ಮಲಾ ಸೇತುವೆ ಕೆಳಗಿನ ಅರಣ್ಯದಲ್ಲಿ ಹರಿಯುವ ನದಿಯ ದಡವನ್ನು ಕೇಂದ್ರೀಕರಿಸಿ ಪರಿಶೀಲನೆ ನಡೆಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next