Advertisement
“ನಮ್ಮ ಮುತ್ತಜ್ಜಿ ಮಾರಮ್ಮ ಅವರು, ಕರ್ನಾಟಕದ ಚಾಮರಾಜನಗರ ತಾಲೂಕಿನ ಮಂಗಲ ಗ್ರಾಮದವರು. ಸುಮಾರು 50 ವರ್ಷಗಳ ಹಿಂದೆಯೇ ಕೂಲಿ ಕೆಲಸಕ್ಕಾಗಿ ಕೇರಳದ ವಯನಾಡು ಜಿಲ್ಲೆಯ ಚೂರಲ್‌ಮಲಾದ ಟೀ ಎಸ್ಟೇಟ್‌ಗೆ ಬಂದರು. ಅವರ ಮಗಳು ನಮ್ಮ ಅಜ್ಜಿ ಜಯಮ್ಮ ಅವರ ಮಗಳು ನಮ್ಮ ತಾಯಿ ಗೌರಮ್ಮ. ನಮ್ಮ ತಂದೆ ಗುಂಡ್ಲುಪೇಟೆಯ ಅಣ್ಣೂರು ಕೇರಿ ಗ್ರಾಮದ ನಾಗರಾಜ ಶೆಟ್ಟಿ ಅವರನ್ನು ವಿವಾಹವಾದರು. ನಮ್ಮ ತಾಯಿ ಚೂರಲ್ ಮಲೈ ಟೀ ಎಸ್ಟೇಟ್ ನಲ್ಲಿ ಟೀ ಕೀಳುವ ಕೆಲಸ ಮಾಡುತ್ತಿದ್ದಾರೆ. ನಮ್ಮ ತಂದೆ ನಾಗರಾಜ ಶೆಟ್ಟಿ ಗುಂಡ್ಲುಪೇಟೆಯ ಅಣ್ಣೂರು ಕೇರಿಯಲ್ಲಿ ನಮ್ಮ ಜಮೀನು ನೋಡಿಕೊಂಡು, ಎರಡೂ ಕಡೆ ಬಂದು ಹೋಗುತ್ತಾರೆ. ಚೂರಲ್‌ಮಲಾದಲ್ಲಿ ಹ್ಯಾರಿಸನ್ ಮಲಯಾಳಂ ಲಿಮಿಟೆಡ್ ಎಂಬ ದೊಡ್ಡ ಕಂಪೆನಿಯ ಟೀ ಎಸ್ಟೇಟ್ ಇದೆ. ಈ ಎಸ್ಟೇಟು ಸುಮಾರು 7000 ಎಕರೆಗಿಂತ ಹೆಚ್ಚು ವಿಸ್ತಾರವಾಗಿದೆ. ಇಲ್ಲಿ ನೂರಾರು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ನಾನು ಕಲ್ಪೆಟ್ಟದಲ್ಲಿ ಆಯುರ್ವೇದಿಕ್ ಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಪತ್ನಿ ಪ್ರವೀದಾ ಚೂರಲ್‌ಮಲೈಯಿಂದ 13 ಕಿ.ಮೀ. ದೂರದ ಮೇಪಾಡಿಯವರು. ನರ್ಸ್ ಅಗಿದ್ದಾರೆ. ನನ್ನ ಪತ್ನಿ ಪ್ರವೀದಾ ಅವರ ತಂದೆ ತಾಯಿ ಚಾಮರಾಜನಗರ ಪಟ್ಟಣದಿಂದ ಹಲವಾರು ವರ್ಷಗಳ ಹಿಂದೆಯೇ ವಲಸೆ ಬಂದು ಮೇಪಾಡಿಯಲ್ಲೇ ನೆಲೆಸಿದ್ದಾರೆ.
Related Articles
Advertisement
ಮನೆಯ ಪಕ್ಕದಲ್ಲಿ ಉದ್ದನೆಯ ಕಂಬಿ ಇದ್ದು, ನಾನು ನಮ್ಮ ತಾಯಿ, ಮಾವ, ಅತ್ತೆ ಹಾಗೂ ಅತ್ತೆ ಮಗ ಕಂಬಿ ಮೇಲಿಂದ ನಮ್ಮನೆ ಪಕ್ಕದಲ್ಲಿರುವ ಟೀ ಎಸ್ಟೇಟ್ ಆಸ್ಪತ್ರೆಯ ಛಾವಣಿಯ ಮೇಲೆ ನಿಂತೆವು. ಅಲ್ಲಿಗೂ ನೀರು ತುಂಬಿತು. ಆ ಕಟ್ಟಡದ ಪಕ್ಕದಲ್ಲಿ ಚಿಕ್ಕ ಗುಡ್ಡ ಇತ್ತು. ನೀರಿನಿಂದ ರಕ್ಷಣೆಗಾಗಿ. ಚಿಕ್ಕ ಗುಡ್ಡಕ್ಕೆ ಹೋಗಿ ನಿಂತೆವು. ಅಲ್ಲಿ ಎಸ್ಟೇಟ್ ಅಸಿಸ್ಟೆಂಟ್ ಮ್ಯಾನೇಜರ್ ಬಂಗಲೆ ಇದೆ. ಆ ಅವರಣದಲ್ಲಿ ನಿಂತೆವು. ಅಕ್ಕಪಕ್ಕದಿಂದ ಜನರು ಸೇರಿ ಒಟ್ಟು 120 ಜನ ಸೇರಿದೆವು. ನಮ್ಮ ಎಸ್ಟೇಟಿನಿಂದ ಮೇಲ್ಭಾಗದಲ್ಲಿ ಮುಂಡಕೈ ಬೆಟ್ಟ ಇದೆ. ಅಲ್ಲಿ ಗುಡ್ಡ ಇನ್ನೊಮ್ಮೆ ಕುಸಿಯಿತು. ಇನ್ನು ನಾವು ಬದುಕುವುದಿಲ್ಲ ಎಂದು ತಿಳಿದೆವು. ಪಕ್ಕದ ಹೊಳೆಯಿಂದ ಕಾಪಾಡಿ ಕಾಪಾಡಿ ಎಂಬ ಶಬ್ದ ಕೇಳಿ ಬರುತ್ತಲೇ ಇತ್ತು. ಎಲ್ಲ ಕತ್ತಲೆ, ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಹೇಗೋ ರಾತ್ರಿ ತುಂಬಿಸಿದೆವು.6 ಗಂಟೆ ನಸುಕಿನಲ್ಲಿ ಗುಡ್ಡದಿಂದ ನೋಡಿದರೆ. ನಮ್ಮ ಊರೇ ಇಲ್ಲ. ನಮ್ಮ ಮನೆಗಳೆಲ್ಲ ನೆಲ ಸಮವಾಗಿವೆ. ಮನೆಗಳುಕಟ್ಟಡಗಳಿದ್ದ ಜಾಗದಲ್ಲೆಲ್ಲ ಕೆಮ್ಮಣ್ಣು ಮಿಶ್ರಿತ ನೀರು ಹರಿಯುತ್ತಿದೆ.
ಈಗ ನಾವೆಲ್ಲ ಮೇಪಾಡಿಯ ಸರ್ಕಾರಿ ಪ್ರೌಢಶಾಲೆ, ಇನ್ನೊಂದು ಪ್ರೈವೇಟ್ ಗರ್ಲ್ ಸ್ಕೂಲ್, ಸೇಂಟ್ ಜೋಸೆಫ್ ಸ್ಕೂಲ್ ಮತ್ತಿತರ ಕಾಳಜಿ ಕೇಂದ್ರಗಳಲ್ಲಿ ಇದ್ದೇವೆ. ನಮ್ಮ ಮನೆ ಏನಾಗಿದೆ ನೋಡಬೇಕು. ನಮ್ಮ ಕೆಲ ಗೆಳಯರ ಕುಟುಂಬದವರು ಕಾಣೆಯಾಗಿದ್ದಾರೆ ಅವರನ್ನು ಪತ್ತೆ ಹಚ್ಚಬೇಕು. ನಾಳೆ ಗುರುವಾರ ನಮ್ಮ ಕುಟುಂಬದವರನ್ನು ಗುಂಡ್ಲುಪೇಟೆಯ ಅಣ್ಣೂರು ಕೇರಿಗೆ ಕಳುಹಿಸಬೇಕು. ನನ್ನ ಹೆಂಡತಿ ಮನೆಯವರು ಚಾಮರಾಜನಗರಕ್ಕೆ ತೆರಳಿದ್ದಾರೆ.
ನಮ್ಮನ್ನು ಎಚ್ಚರಿಸಿದ ಹಸುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ನಾವು ಹಗ್ಗ ಬಿಚ್ಚಿದ್ದೆವು. ಕತ್ತಲೆಯಲ್ಲಿ ಅವು ಎತ್ತ ಕೊಚ್ಚಿಕೊಂಡು ಹೋದವು ಎಂಬುದೂ ಗೊತ್ತಾಗಲಿಲ್ಲ.” – ಕೆ.ಎಸ್. ಬನಶಂಕರ ಆರಾಧ್ಯ ಇದನ್ನೂ ಓದಿ: Paris Olympics: ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಏಳು ತಿಂಗಳ ಗರ್ಭಿಣಿ!