Advertisement

ಜಲಾನಯನ ಅಭಿವೃದ್ಧಿ ಯೋಜನೆ ಪ್ರಯೋಜನಕ್ಕೆ ಕರೆ

10:39 AM Jul 26, 2020 | Suhan S |

ಕಡೂರು: ಕೃಷಿ ಇಲಾಖೆಯಿಂದ ಜಲಾನಯನ ಅಭಿವೃದ್ಧಿ ಮೂಲಕ ಬರಗಾಲ ತಡೆಯಲು ಯಗಟಿ ಜಿಪಂ ವ್ಯಾಪ್ತಿಯ ತಾಲೂಕಿನ ಹರಿಸಮುದ್ರ ಸೇರಿದಂತೆ 6 ಗ್ರಾಪಂಗಳು ಆಯ್ಕೆಯಾಗಿದ್ದು ರೈತರು ಈ ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕೆಂದು ಜಿಪಂ ಸದಸ್ಯ ಶರತ್‌ ಕೃಷ್ಣಮೂರ್ತಿ ತಿಳಿಸಿದರು.

Advertisement

ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಜಲಾನಯನ ಅಭಿವೃದ್ಧಿ ಮೂಲಕ ಬರಗಾಲ ತಡೆಗಟ್ಟುವ ಯೋಜನೆ ಮೂಲಕ ಇಲಾಖೆ ರೈತರಿಗೆ ಸಸಿ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಿದ್ದು ಈ ಕಾರ್ಯಕ್ರಮದಲ್ಲಿ ಸಸಿ ವಿತರಣೆ ಮಾಡಿ ಮಾತನಾಡಿದರು. ಕೃಷಿ ಇಲಾಖೆಯ ಅಡಿಯಲ್ಲಿ ಬರುವ ಜಲಾನಯನ ಅಭಿವೃದ್ಧಿ ಮೂಲಕ ಬರಗಾಲ ತಡೆಯುವಿಕೆ ಕಾರ್ಯಕ್ರಮವು ಕ್ಷೇತ್ರದ ಹರಿಸಮುದ್ರವನ್ನು ಈ ಬಾರಿ ಆಯ್ಕೆ ಮಾಡಿಕೊಂಡಿದ್ದು ಇಲ್ಲಿನ ಸುಮಾರು 6 ಗ್ರಾಪಂ ವ್ಯಾಪ್ತಿಗೆ ಸೇರುವ ಹಳ್ಳಿಗಳಲ್ಲಿನ ರೈತರ ಹೊಲಗಳ ಬದುಗಳಿಗೆ ವಿವಿಧ ಜಾತಿಯ ಸಸಿಗಳನ್ನು ವಿತರಿಸಿ ಅವುಗಳನ್ನು ಬೆಳೆಸುವುದರಿಂದ ಅಂತರ್ಜಲ ಹೆಚ್ಚಾಗಿ ಮಳೆಯ ನೀರು ಕೃಷಿ ಹೊಂಡಗಳಲ್ಲಿ ಸಂಗ್ರಹಿಸಲು ಸಾಧ್ಯವಾಗಲಿದೆ. ಇದರಿಂದ ಬರಗಾಲವನ್ನು ಹತೋಟಿಗೆ ತರಲು ಸಹಕಾರವಾಗಲಿದೆ ಎಂದರು.

6 ಗ್ರಾಪಂ ವ್ಯಾಪ್ತಿಯ ರೈತರು ಈ ಬಾರಿ ಇಲಾಖೆ ನೀಡುವ ಸಲಹೆ- ಸೂಚನೆಗಳನ್ನು ಪಡೆದು ಸದುಪಯೋಗ ಪಡಿಸಿಕೊಳ್ಳಿ ಎಂದು ಕರೆ ನೀಡಿದರು. ಕೃಷಿ ಇಲಾಖೆಯ ಹಿರಿಯ ಸಹಾಯಕ (ತೋಟಗಾರಿಕೆ) ನಿರ್ದೇಶಕಿ ಎ.ಸಿ. ನೇತ್ರಾವತಿ ಮಾತನಾಡಿ, ಜಿಲ್ಲೆಯಲ್ಲಿ ಈ ಸಾಲಿಗೆ 3 ತಾಲೂಕುಗಳನ್ನು ಆಯ್ಕೆ ಮಾಡಿಕೊಂಡಿದ್ದು ಕಡೂರು ತಾಲೂಕಿನ ಹರಿಸಮುದ್ರ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.

ಗ್ರಾಪಂ ಮಾಜಿ ಸದಸ್ಯರಾದ ಗೋವಿಂದಪ್ಪ, ಸಿದ್ದಮ್ಮ, ಶಂಕ್ರಮ್ಮ, ಹಾಗೂ ಆರ್‌ಎಫ್‌ಒ (ಕೃಷಿ ಇಲಾಖೆ) ಇಸ್ಮಾಯಿಲ್‌ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next