Advertisement
ರಸ್ತೆ ಬದಿಯ ಅಂಗಡಿಗಳಲ್ಲಿ ಮಾರಾಟಕ್ಕಿಟ್ಟ ಕಲ್ಲಂಗಡಿ ಹಣ್ಣುಗಳ ಖರೀದಿಗೆ ಜನರು ಮುಗಿ ಬೀಳುತ್ತಿದ್ದಾರೆ. ಅದು ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿನ ಅಂಗಡಿಗಳು ರಸ್ತೆ ಬದಿಯಲ್ಲಿ ತಲೆ ಎತ್ತುವುದು ಸಾಮಾನ್ಯವಾಗಿದ್ದು, ಇದು ದಾರಿಹೋಕರು, ವಾಹನ ಸವಾರರು ಮತ್ತು ಸಾರ್ವಜನಿಕರಿಗೆ ಅನುಕೂಲವಾಗಿದೆ. ವಿಶೇಷವಾಗಿ ಮಧ್ಯಾಹ್ನ ಕಲ್ಲಂಗಡಿ ಸೇವಿಸಿ ಬಿಸಿಲಿನ ಬೇಗುದಿಯಿಂದ ಸುಧಾರಿಸಿಕೊಳ್ಳುತ್ತಿದ್ದಾರೆ. ಪಟ್ಟಣದ ಪುರಸಭೆ ಕಾರ್ಯಾಲಯ ಎದುರು 5-6 ಕಡೆ ರಸ್ತೆ ಬದಿಯಲ್ಲಿ ಕಲ್ಲಂಗಡಿ ಹಣ್ಣಿನ ಅಂಗಡಿಗಳಿವೆ. ಪಟ್ಟಣದ ಬಸ್ ನಿಲ್ದಾಣ, ಅಖಂಡೇಶ್ವರ ವೃತ್ತ, ಬಸವೇಶ್ವರ ವೃತ್ತದ ಬಳಿ ಸಾಕಷ್ಟು ಕಲ್ಲಂಗಡಿ ಹಣ್ಣಿನ ಅಂಗಡಿಗಳು ತಲೆ ಎತ್ತಿವೆ. ಅಲ್ಲದೇ ತಳ್ಳು ಬಂಡಿಗಳಲ್ಲಿ ಐಸ್ ಗಡ್ಡೆ ಮೇಲೆ ಕಲ್ಲಂಗಡಿ ಹಣ್ಣು ಇಟ್ಟು ಪ್ರತಿ ಗ್ಲಾಸ್‌ಗೆ 10 ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಮಳೆ ಮತ್ತು ನೀರಿನ ಕೊರತೆಯಿಂದ ಕಲ್ಲಂಗಡಿ ಬೆಳೆಯುವುದು ಅಪರೂಪ. ಆದರೆ ಪ್ರಸಕ್ತ ವರ್ಷ ಹೊರ ರಾಜ್ಯಗಳಿಂದ ಹಣ್ಣು ಸರಬರಾಜು ಕಡಿಮೆಯಾಗಿದೆ.
Related Articles
Advertisement