ರಾಮಚಂದ್ರ ಹೆಗಡೆಯವರು ತಮ್ಮ ಮೂರು ಎಕರೆಯಲ್ಲಿ ಏನಾದರೂ ಹೊಸ ಕೃಷಿ ಸಾಹಸ ಮಾಡಬೇಕು, ಭತ್ತದ ಕೃಷಿಯ ಬಳಿಕ ಎರಡನೇ ಬೆಳೆ ಗಳಿಸಬೇಕು ಎಂದು ಆಲೋಚಿಸಿದರು.
Advertisement
ಆಗ ಹೊಳೆದದ್ದು ಕಲ್ಲಂಗಡಿ ಬೇಸಾಯ. ಇದು ಹೊಸತಾಗಿದ್ದರಿಂದ ಏನು ಮಾಡಬೇಕು, ಏನು ಮಾಡಬಾರದು ಎಂದೆಲ್ಲ ಕೃಷಿ ವಿಜಾನಿಗಳಾದ ಶಿವಾನಂದ ಹೊಂಗಲ್, ಸತೀಶ ಹೆಗಡೆ, ಗಣೇಶ ಹೆಗಡೆ, ಸುಜಯ್ ಹೊಸಳ್ಳಿ ಅವರುಗಳು ಸಲಹೆ ಕೊಟ್ಟರು. ಪೂನಾದಿಂದ ಸಿಂಜೆಂಟಾ ಕಂಪನಿಯ ಕಲ್ಲಂಗಡಿ ಬೀಜಗಳನ್ನು ತರಿಸಿ, ವ್ಯವಸ್ಥಿತವಾಗಿ ಮಡಿ ಮಾಡಿ, ಪ್ಲಾಸ್ಟಿಕ್ ಹಾಸು ಹಾಕಿ ನಾಟಿ ಮಾಡಿದರು. ಹನಿ ನೀರಾವರಿ ವ್ಯವಸ್ಥೆಯನ್ನೂ ಮಾಡಿದರು. ಮೂರು ಎಕರೆಯಲ್ಲಿ ಕಲ್ಲಂಗಡಿಯ 15 ಪ್ಯಾಕೆಟ್ ಗಳಿಂದ 17ಸಾವಿರ ಸಸಿಗಳು ಕುಳಿತವು. ಕುಳಿ ತೆಗಸಿ, ಜೋಡಿಯಾಗಿ 3-2ರ,ಅಂತರದಲ್ಲಿ ನೆಟ್ಟರು. ದಡ್ಡಿ ಗೊಬ್ಬರ, ಬೇವಿನ ಹಿಂಡಿ, ಗೊಬ್ಬರ, ಕ್ಯಾಲಿÒಯಂ, ರಂಜಕ, ಔಷಧಗಳು ಸೇರಿದ ಕಷಾಯ ಸಿಂಪರಣೆ ಮಾಡಿದರು. ಹಂತ ಹಂತವಾಗಿ ನಾಟಿ ಆರಂಭಿಸಿದ್ದರಿಂದ ಈಗ 65-70ನೇ ದಿನಕ್ಕೆ ಕಲ್ಲಂಗಡಿ ಕೊಯ್ಲಿಗೆ ಬಂದಿದೆ. 80 ದಿನಗಳಲ್ಲಿ ಕೊಯ್ಲು ಮುಗಿಸಿದರೆ ಇಳುವರಿ ಕೂಡ ಹೆಚ್ಚು. ಇನ್ನೂ ಏಪ್ರಿಲ್ ಕೊನೆ ತನಕವೂ ಇಲ್ಲಿ ನಿರಂತರ ಕೊಯ್ಲು ನಡೆಯಲಿವೆ. ಈ ಬಾರಿ ಆಲೀಕಲ್ಲು ಮಳೆ ಬೀಳದೇ ಇರುವುದು ತುಸು ನೆಮ್ಮದಿ ಕೊಟ್ಟಿದೆ. ಈಗಾಗಲೇ 7 ಟನ್ ಕೊಯ್ಲು ಮಾಡಿರುವ ರಾಮಚಂದ್ರ ಹೆಗಡೆ ಅವರ ಕಲ್ಲಂಗಡಿಗೆ ಸಕ್ಕರೆಯ ಸಿಹಿ ಇದೆ. ಹೀಗಾಗಿ, ಎಲ್ಲ ಮಾರುಕಟ್ಟೆಯಲ್ಲೂ ಬೇಡಿಕೆ ಹೆಚ್ಚಿದೆ. “ಕಲ್ಲಂಗಡಿ ಕೃಷಿಯ ಯಶಸ್ವಿಗೆ ನನ್ನ ಪತ್ನಿ ಲಕ್ಷ್ಮಿ, ಮಗ ಪ್ರಮಥನ ಆಸಕ್ತಿ ಕೂಡ ಕಾರಣ’ ಎನ್ನುತ್ತಾರೆ ರೈತ ರಾಮಚಂದ್ರ.