Advertisement
5 ಎಕರೆ ಪ್ರದೇಶದಲ್ಲಿ ಕೃಷಿ ಪೇಟೆಯಲ್ಲಿ ಸ್ವಂತ ಉದ್ದಿಮೆ ಹೊಂದಿದ್ದರೂ ಶೇಖರ್ ಅವರು ಒಂದೇ ಬಗೆಯ ಕೃಷಿಯನ್ನು ನೆಚ್ಚಿಕೊಂಡಿಲ್ಲ. ವೈವಿಧ್ಯಮಯ ಕೃಷಿ ಮಾಡುತ್ತಿದ್ದಾರೆ. ಮುಂಗಾರು ಸಂದರ್ಭ ಭತ್ತದ ಕೃಷಿ ಮಾಡಿದ ಬಳಿಕ ಎಳ್ಳು, ಉದ್ದು, ಆವಡೆ, ಉದ್ದು ಬೆಳೆಸುತ್ತಾರೆ. ಇದರೊಂದಿಗೆ ತೋಟಗಾರಿಕೆ ಬೆಳೆಗಳಾದ ಕಲ್ಲಂಗಡಿ, ಕಬೂìಜ, ಸೌತೆಕಾಯಿ, ಅಲಸಂಡೆ, ಗೆಣಸು, ಮುಳ್ಳು ಸೌತೆ, ಬೂದು ಕುಂಬಳಕಾಯಿ, ಹರಿವೆ, ಪಡುವಲಕಾಯಿ, ಸೋರೆ ಕಾಯಿ, ಹೀರೆಕಾಯಿ, ಬಸಳೆ, ಬದನೆ, ಸಿಹಿ ಕುಂಬಳಕಾಯಿ, ಮೂಲಂಗಿ, ಅವರೆ ಕಾಯಿಗಳನ್ನು ಬೆಳೆದಿದ್ದಾರೆ.
ಪ್ರಗತಿ ಪರ ಕೃಷಿಕರಾಗಿರುವ ಅವರು ಹೈನುಗಾರಿಕೆಯನ್ನೂ ನಡೆಸುತ್ತಿದ್ದಾರೆ. ತನ್ನ ಹತ್ತಾರು ಎಕರೆಯಷ್ಟು ವಿಸೀ¤ರ್ಣದ ಗದ್ದೆಯಲ್ಲಿ ಬೆಳೆಸಲಾಗುವ ಎಲ್ಲಾ ವಿಧದ ಕೃಷಿಗೂ ಹಟ್ಟಿಗೊಬ್ಬರವನ್ನೇ ಬಳಸುತ್ತಾರೆ. ಹಟ್ಟಿಗೊಬ್ಬರವನ್ನು ದಾಸ್ತಾನಿರಿಸುವ ಅವರು ಸುಡುಮಣ್ಣು, ಸಾವಯವ ಗೊಬ್ಬರ ಬಳಸುತ್ತಾರೆ. ವಿದೇಶ ಪ್ರವಾಸ
2012ರಲ್ಲಿ ಕರ್ನಾಟಕ ಸರಕಾರ ಪ್ರಾಯೋಜಿತ ಚೀನ ಪ್ರವಾಸವನ್ನೂ ನಡೆಸಿರುವ ಅವರು ತಮ್ಮಲ್ಲಿ ಬೆಳೆಸುತ್ತಿರುವ ಧವಸ ಧಾನ್ಯ, ಭತ್ತದ ಬೆಳೆ ಮತ್ತು ತರಕಾರಿ ಬೆಳೆಗಳನ್ನು ಬೆಳೆಸುವ ಬಗ್ಗೆ ಕೃಷಿಯಾಸಕ್ತರಿಗೆ ಉಚಿತ ಕೃಷಿ ಪಾಠವನ್ನೂ ಮಾಡುತ್ತಿದ್ದಾರೆ.
Related Articles
ಆರಂಭದ ವರ್ಷದಲ್ಲಿ ಕಲ್ಲಂಗಡಿ ಬೆಳೆ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದೆವು. ಊರಿನ ಕಲ್ಲಂಗಡಿ ಎಂಬ ಕಾರಣಕ್ಕೆ ಖರೀದಿದಾರರು ಕೆ.ಜಿ.ಗೆ 5 ರೂ.ಗೆ ಖರೀದಿಸಿ, 15-20 ರೂ.ಗೆ ಮಾರಾಟ ಮಾಡುತ್ತಿದ್ದರು. ನಷ್ಟವಾಗುತ್ತಿರುವುದು ಗಮನಕ್ಕೆ ಬಂದ ಕೂಡಲೇ ಮನೆಯಲ್ಲೇ ಮಾರಾಟಕ್ಕೆ ಮುಂದಾಗಿದ್ದಾರೆ. ಜತೆಗೆ ವಿವಿಧ ತರಕಾರಿ, ಸೊಪ್ಪು ಮತ್ತು ಧವಸ ಧಾನ್ಯ ಬೆಳೆಗಳನ್ನೂ ಮನೆಯಲ್ಲಿಯೇ ಮಾರಾಟ ಮಾಡುತ್ತಿದ್ದಾರೆ. ಕಲ್ಲಂಗಡಿಯಿಂದ ಅವರಿಗೆ ವಾರ್ಷಿಕ 50ರಿಂದ 60 ಸಾವಿರ ಲಾಭವೂ ಬರುತ್ತಿದೆ.
Advertisement
ಕೃಷಿಯಿಂದ ಬದುಕು ಹಸನಕೃಷಿ ಬದುಕು ಎಲ್ಲರ ಕೈ ಹಿಡಿಯುತ್ತಿದೆ. ಕೃಷಿಯ ಮೂಲಕ ಬದುಕು ಕಟ್ಟಿಕೊಳ್ಳಲು ಎಲ್ಲರಿಗೂ ಉತ್ತಮ ಅವಕಾಶವಿದೆ. ಇವತ್ತಿನ ಯುವಕರು ಕೂಡಾ ಈ ಬಗ್ಗೆ ಆಲೋಚಿಸಬೇಕಿದೆ.
-ಶೇಖರ್ ಸಾಲ್ಯಾನ್, ಕಾಪು ಪ್ರಗತಿಪರ ಕೃಷಿಕರು