Advertisement
ಈ ಸಂಬಂಧ ಜಿಲ್ಲೆಯಲ್ಲಿ 5 ಸಾವಿರ ಮನೆಗಳನ್ನು ತಲುಪುವ ಗುರಿ ಹೊಂದಲಾಗಿದೆ. ಈಗಾಗಲೇ ಕೆಲವು ಪ್ಲಂಬರುಗಳನ್ನು ಸಂಪರ್ಕಿಸಿ “ಮಳೆ ನೀರು ಸಂರಕ್ಷಣೆಯೊಂದಿಗೆ ಈ ವಾರಾಂತ್ಯ’ ಎಂಬ ಘೋಷವಾಕ್ಯದೊಂದಿಗೆ ಮಳೆ ಕೊಯ್ಲು ಕಾರ್ಯಕ್ರಮ ನಡೆಸಲು ಯೋಜಿಸಲಾಗಿದೆ.
Related Articles
ಸ್ನಾನ ಮಾಡಲು ನೀರನ್ನು ವ್ಯರ್ಥ ಮಾಡದೇ ಒಂದು ಬಕೆಟ್‌ಗೆ ಸೀಮಿತ ಗೊಳಿಸೋಣ. ವಾಟರ್ ಪ್ಯೂರಿಫಯರ್ ನಿಂದ ಹೊರ ಬರುವ ನೀರನ್ನು ಸಿಂಕ್‌ಗೆ ಬಿಡದೇ ಪಾತ್ರೆ ತೊಳೆಯಲು ಬಳ ಸೋಣ. ಸೋರುತ್ತಿರುವ ನಲ್ಲಿಗಳನ್ನು ಮತ್ತು ಫÉಶ್ ಟ್ಯಾಂಕ್‌ಗಳನ್ನು ತತ್‌ಕ್ಷಣ ದುರಸ್ತಿ ಮಾಡಿಸೋಣ. ಶೌಚಾಲಯದ ಬಳಕೆಗೆ ಕಮೋಡ್‌ಗಿಂತ ಇಂಡಿಯನ್ ಟಾಯ್ಲೆಟ್ ಬಳಸೋಣ. ಸಂಪ್ ಅಥವಾ ಕೊಳವೆ ಬಾವಿಯಿಂದ ನೀರನ್ನು ಓವರ್ ಹೆಡ್ ಟ್ಯಾಂಕ್‌ಗೆ ಪಂಪ್ ಮಾಡುವಾಗ ಟ್ಯಾಂಕ್ ತುಂಬಿ ಸುರಿಯದಂತೆ ಎಚ್ಚರ ವಹಿಸೋಣ-ಇತ್ಯಾದಿ ಸಲಹೆಗಳಿವೆ.
Advertisement
ಪ್ರಧಾನಿ ಗಮನ ಸೆಳೆದ ಕಲ್ಯಾಣಿ ಸ್ವತ್ಛತೆಯುವಾ ಬ್ರಿಗೇಡ್ ಎರಡೂವರೆ ವರ್ಷಗಳಿಂದ ರಾಯಚೂರು, ಗದಗ, ಮೈಸೂರು ಸೇರಿದಂತೆ ಒಟ್ಟು 100ಕ್ಕೂ ಹೆಚ್ಚು ಕಲ್ಯಾಣಿಗಳನ್ನು ಪುನರುಜ್ಜೀವನಗೊಳಿಸಿದೆ. ಇಂತಹ ಕಲ್ಯಾಣಿಗಳಲ್ಲಿ ಜೀವಜಲ ತುಂಬಿ ಅಲ್ಲಿನ ಜನಜೀವನಕ್ಕೆ ಸಹಾಯವಾಗಿದೆ. ಈ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲೂ ಉಲ್ಲೇಖೀಸಿ ಶ್ಲಾ ಸಿದ್ದರು. ತಮಿಳು- ಕನ್ನಡಿಗರ ಬೆಸೆಯಲು “ಮೈಟ್ರೀ’
ಕಾವೇರಿ ಜಲಾನಯನದಲ್ಲಿ ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳಲ್ಲಿ ಜಲ ಕದನ ನಡೆಯದಂತೆ ಜಾಗೃತಿ ಮೂಡಿಸಿ ತಮಿಳುನಾಡಿನ ಯುವ ಜನರನ್ನೂ ಸೇರಿಸಿಕೊಂಡು ಕುಶಾಲನಗರದಲ್ಲಿ ಈ ಹಿಂದೆ “ಮೈಟ್ರೀ’ ಕಾವೇರಿ ಸ್ವತ್ಛತೆ ಕಾರ್ಯವನ್ನು ಕೈಗೆತ್ತಿಕೊಂಡಿತ್ತು. ತಮಿಳು-ಕನ್ನಡಿಗರ ಮತ್ತು ಭೂಮಿ-ಆಕಾಶಗಳ ನಡುವಣ ಮರದ ಸಂಬಂಧ ಎಂಬ ಧ್ಯೇಯೋದ್ದೇಶದೊಂದಿಗೆ ಕಾವೇರಿ ಸ್ವತ್ಛತೆ ನಡೆಸಿತ್ತು.