Advertisement

ಕೆರೆ ನೀರು ಕಣ್ತುಂಬಿಕೊಂಡು ಕುಪ್ಪಳಿಸಿದ ಜನತೆ

04:07 PM Sep 03, 2021 | Team Udayavani |

ಯಳಂದೂರು: ಸಂತೆಮರಹಳ್ಳಿ ಹೋಬಳಿಯ ಜೀವನಾಡಿಯಾಗಿರುವ ಉಮ್ಮತ್ತೂರು ದೊಡ್ಡ ಕೆರೆಗೆ ನೀರು ಹರಿಯುತ್ತಿದ್ದಂತೆಯೇ ಇಲ್ಲಿನ ಜನರು ಕುಣಿದು ಕುಪ್ಪಳಿಸಿದರು. ಕೆರೆಗೆ ದೊಡ್ಡ ಪೈಪ್‌ನಲ್ಲಿ ನೀರು ಹರಿ ಯುತ್ತಿದ್ದಂತೆಯೇ ಮಕ್ಕಳಂತೆ ಕುಣಿದು ಕುಪ್ಪಳಿಸಿದರು.

Advertisement

ನೀರನ್ನು ತೀರ್ಥದಂತೆ ನೆತ್ತಿಗೆ ನೇವರಿಸಿಕೊಂಡು, ಗಂಗೆ ಪೂಜೆಗೆ ಆಗಮಿಸಿದ ಶಾಸಕರನ್ನು ಎತ್ತಿಕೊಂಡು ಮೆರೆದಾಡಿದರು.. ಧನ್ಯತೆಯನ್ನು ಮೆರೆದರು…

ದಶಕದ ಹೋರಾಟದ ಫ‌ಲವಾಗಿ ಗುರುವಾರ ಮುಂಜಾನೆ ಕೆರೆಗೆ ಕಬಿನಿ ಏತ ನೀರಾವರಿ ಯೋಜನೆಯಡಿಯಲ್ಲಿ 24 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿಯಲ್ಲಿ ನೀರು ಹರಿದಾಗ ಇಲ್ಲಿನ ಸುತ್ತಮುತ್ತಲ ಜನರು ಸಂಭ್ರಮಿಸಿದ ಪರಿ ಇದು. ಇದು ಈ ಭಾಗದ ಜನರ ಸುದೀರ್ಘ‌ ಹೋರಾಟವಾಗಿದ್ದು ಅದರ ಫ‌ಲವನ್ನು ಪಡೆಯಲು ಇಷ್ಟು ವರ್ಷಕಾಯಬೇಕಾಯಿತು.

2012 ರಿಂದಲೂ ಹೋರಾಟ: 2012 ರಲ್ಲಿ ಕಪಿಲಾ ನದಿಯಿಂದ ಆಲಂಬೂರಿನಿಂದ ನೀರು ತುಂಬಿಸುವ ಯೋಜನೆಯಡಿಯಲ್ಲಿ ನಂಜನಗೂಡು, ಚಾಮರಾಜನಗರ, ಗುಂಡ್ಲುಪೇಟೆಯ 20 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿತ್ತು. ಆಗ ನಮ್ಮೂರಿನ ಕೆರೆಯನ್ನೂ ತುಂಬಿಸಬೇಕು ಎಂಬ ಹೋರಾಟಕ್ಕೆ ಇಲ್ಲಿನ ರೈತರು ನಿರ್ಧಾರ ಮಾಡಿಬಿಟ್ಟರು.

ಆಲಂಬೂರು ಯೋಜನೆಯಡಿ 2014ರಲ್ಲಿ ನೀರು ಕೆರೆಗಳಿಗೆ ಹರಿದಾಗ ಈ ಹೋರಾಟ ಇನ್ನಷ್ಟು ತೀವ್ರಗೊಂಡು ಚಳವಳಿಯ ರೂಪ ಪಡೆಯಿತು.
ನಂತರದ ದಿನಗಳಲ್ಲಿ ಕೆರೆಯ ಬದಿಯಲ್ಲಿರುವ ಕೊಟ್ಟರು ಬಸವೇಶ್ವರ ದೇಗುಲದ ಮುಂಭಾಗ ಶಾಮಿಯಾನ ಹಾಕುವ ಮೂಲಕ ನೀರು ತುಂಬು ವರೆಗೂ ಹೋರಾಟ ನಡೆಸಿದ್ದರು. ಆಗ ಇದ್ದಕಾಂಗ್ರೆಸ್‌ ಸರ್ಕಾರ ಇದ್ದಾಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್‌.ಎಸ್‌. ಮಹದೇವ ಪ್ರಸಾದ್‌, ಶಾಸಕ ಎಸ್‌.ಜಯಣ್ಣ ಸಂಸದ ಆರ್‌. ಧ್ರುವನಾರಾಯಣ ಸ್ಥಳಕ್ಕೆ ಭೇಟಿ ನೀಡಿ ಇವರ ಮನವೊಲಿಸಲು ಎಷ್ಟೇ ಪ್ರಯತ್ನಿಸಿದರೂ. ಇವರು ಪಟ್ಟು ಸಡಿಲಿಸಿರಲಿಲ್ಲ. ಇದಕ್ಕೆ ಹಾಲಿ ಶಾಸಕ ಎನ್‌. ಮಹೇಶ್‌ಕೂಡ ಅಂದು ಸಾಥ್‌ ನೀಡಿದ್ದರು.

Advertisement

ಇದನ್ನೂ ಓದಿ:ಬೆಳಗಾವಿ: ಹಳೇಯ ಮತದಾರರ ಪಟ್ಟಿ ನೀಡಿದ್ದಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಕ್ರೋಶ

223 ಕೋಟಿ ರೂ. ವೆಚ್ಚದ ಯೋಜನೆ: ಇವರ ಹೋರಾಟಕ್ಕೆ ಫ‌ಲ ಎಂಬಂತೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ 2017ರ ಜುಲೈನಲ್ಲಿ 223 ಕೋಟಿ ರೂ. ವೆಚ್ಚದಲ್ಲಿ ಚಾಮರಾಜನಗರ, ಯಳಂದೂರು ತಾಲೂಕುಗಳ 24 ಕೆರೆಗಳನ್ನು ತುಂಬಿಸುವ ಯೋಜನೆಗೆ ಚಾಲನೆ ನೀಡಿದ್ದರು. ಆದರೆ ಯೋಜನೆಯಅನುಷ್ಟಾನದ ವಿಳಂಬದಿಂದ ಆಗಾಗ ಈ ಬಗ್ಗೆ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ಉಮ್ಮತ್ತೂರು ಕರೆ ಪುನಶ್ಚೇತನ ಸಮಿತಿ, ರೈತಸಂಘ, ಹಸಿರು ಸೇನೆ ಸೇರಿದಂತೆ ವಿವಿಧ ಪ್ರಗತಿಪರಸಂಘಟನೆಗಳು ಹೋರಾಟ ವಾಗ್ವಾದ ನಡೆಸಿಕೊಂಡೆ ಬಂದಿದ್ದರು. ಈ ವರ್ಷದ ಫೆ.15 ರಂದು ಬೃಹತ್‌ ರ್ಯಾಲಿ ನಡೆಸಿ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆಯನ್ನು ಹಾಕಲಾಗಿತ್ತು. ನಂತರ ಏಪ್ರಿಲ್‌ ವರೆಗೆ ಗಡುವ ನೀಡ
ಲಾಗಿತ್ತು. ಅದೂ ಪೂರ್ಣಗೊಳ್ಳದೆ ಶಾಸಕ ಎನ್‌. ಮಹೇಶ್‌ ಇವರಿಗೆ ಆಗಸ್ಟ್‌ 31 ರೊಳಗೆ ನೀರು ಹರಿಸುವ ಭರವಸೆ ನೀಡಿದ್ದರು. ಆದರೂ ನೀರು ಬಾರದೆ ಇರುವುದರಿಂದ ಮತ್ತೆ ಪ್ರತಿಭಟನೆ ನಡೆಸುವ ಇರಾದೆ ಹೊಂದಿದ್ದರು. ಇದಾದ 2 ದಿನದ ನಂತರವೇ ಇಲ್ಲಿಗೆ ನೀರು ಹರಿದಿದ್ದರಿಂದ
ಇಲ್ಲಿನ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ತಮ್ಮ ಜಮೀನಿನಲ್ಲಿ ಉತ್ತಮ ಫ‌ಲಸು ಬೆಳೆಸುವ ಹೊಸ ಆಶಾಕಿರಣ ಹೊಂದಿದ್ದಾರೆ.

ನೀರು,ಬೆಳೆ ಸಿಗದ್ದಕ್ಕೆ ಊರನ್ನೇ ತೊರೆದಿದ್ದರು!
ಈ ಭಾಗದಲ್ಲಿ ಬರಗಾಲ ಹೆಚ್ಚಾಗಿತ್ತು. ರೈತರು ಮಳೆಯನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ ಇತ್ತು. ಆಗ258 ಎಕರೆ ವಿಸ್ತಾರ ಹೊಂದಿರುವ ಈ ಕೆರೆ ನೀರು ಇಲ್ಲಿನ ನೂರಾರು ಎಕರೆ ಜಮೀನಿಗೆ ನೀರುಣಿಸುತ್ತಿತ್ತು. ಆದರೆ ಮಳೆಯಕೊರತೆ, ಸತತ ನೀರಿನ ಅಭಾವದಿಂದಕೆರೆಗೆ ನೀರು ತುಂಬದೆ ಅನೇಕ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಅನೇಕ ರೈತರು ಮಳೆಯನ್ನು ನಂಬಿ ಫ‌ಸಲುಗಳನ್ನು ಉತ್ತಿ, ಇದು ಒಣಗಿದ್ದರಿಂದ ಊರನ್ನೇ ತೊರೆದಿದ್ದರು.

ಕೆರೆಭರ್ತಿಗೆ ಒಂದೂವರೆ ತಿಂಗಳು ಕಾಯಬೇಕು
ಸದ್ಯಕ್ಕೆ ಇಲ್ಲಿಗೆ ನೀರು ಹರಿಯುತ್ತಿದ್ದು ಪ್ರಾಯೋಗಿಕವಾಗಿ ಇದು ಯಶಸ್ಸುಕಂಡಿದೆ.ಕೆಲವು ತಾಂತ್ರಿಕ ಸಮಸ್ಯೆಗಳುಕಾಣಿಸಿಕೊಂಡಲ್ಲಿಕೆಲ ದಿನ ವಿಳಂಬವಾದರೂ ಆಗಬಹುದು. ಆದರೂ ಸಂಪೂರ್ಣ ಕೆರೆ ತುಂಬಲು ಒಂದೂವರೆ ತಿಂಗಳಿಂದ2 ತಿಂಗಳು ಬೇಕಾಗಬಹುದು ಎಂದು ಅಧಿಕಾರಿಗಳು ಹಾಗೂ ಶಾಸಕರು ಮಾಹಿತಿ ನೀಡಿದರು. ಆದರೂ ಕೂಡಕೆರೆಗೆ ನೀರು ಬಂದಿರುವುದು ಈ ಭಾಗದ ರೈತರಿಗೆ ಮರಳುಗಾಡಿನಲ್ಲಿ
ಓಯುಸಿಸ್‌ ಸಿಕ್ಕ ಅನುಭವವಾಗಿದ್ದು ಇವರಕೆರೆಗೆ ನೀರು ಬಂದ ಸಂಭ್ರಮದಲ್ಲಿ ಇವರು ಚಿಕ್ಕಮಕ್ಕಳಂತೆ ಕುಣಿದು ಕುಪ್ಪಳಿಸಿದ್ದು ಇವರ ಸಂತೋಷಕ್ಕೆ ಪಾರವೇ ಇರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next