ಚಾಮರಾಜನಗರ: ತಾಲೂಕಿನ ಉಮ್ಮತ್ತೂರು ದೊಡ್ಡಕೆರೆಗೆ ನೀರು ತುಂಬಿಸುವ ಯೋಜನೆಯು ಕಳೆದ ಐದು ವರ್ಷದಿಂದ ಕುಂಟುತ್ತಾ ಸಾಗುತ್ತಿದ್ದು, ಇದನ್ನು ಖಂಡಿಸಿ ಹಾಗೂ ಆ.31 ರೊಳಗೆಕೆರೆಗೆ ಹರಿಸಬೇಕು ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನಾ ಧರಣಿ ಸೋಮವಾರ 3ನೇ ದಿನಕ್ಕೆಕಾಲಿಟ್ಟಿದೆ.ತಾಲೂಕಿನ ಉಮ್ಮತ್ತೂರು ಕೆರೆಯ ಪಕ್ಕದಲ್ಲಿರುವ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಮುಂಭಾಗ ರೈತರು ಧರಣಿ ನಡೆಸುತ್ತಿದ್ದಾರೆ.
ಸೋಮವಾರ ಸ್ಥಳಕ್ಕೆ ಮಾಜಿ ಶಾಸಕ ಎಸ್. ಬಾಲರಾಜ್ ಹಾಗೂ ಕೆರೆಗಳಿಗೆ ನೀರು ತುಂಬಿಸುವ ಹೋರಾಟ ಸಮಿತಿಯ ಸಂಚಾಲಕ ಕಾಳನಹುಂಡಿ ಗುರುಸ್ವಾಮಿ ಭೇಟಿ ನೀಡಿ, ಧರಣಿಗೆ ಬೆಂಬಲ ಸೂಚಿಸಿದರು.
ಇದನ್ನೂ ಓದಿ:ಶ್ರೀರಂಗಪಟ್ಟಣ: ಜೂಜು ಅಡ್ಡೆ ಮೇಲೆ ದಾಳಿ, ಮೂವರ ಬಂಧನ
ಸೆ.1ರಂದು ಸುತ್ತೂರಿಗೆ ತೆರಳಿ ರೈತರಿಂದಲೇ ಈ ಯೋಜನೆಯನ್ನು ಚಾಲನೆಗೊಳಿಸಲಾಗುವುದು. ರೈತರು ಮತ್ತು ಅಚ್ಚುಕಟ್ಟುದಾರರು ಹೆಚ್ಚಿನ
ಸಂಖ್ಯೆಯಲ್ಲಿ ಅಂದು ಬೆಳಗ್ಗೆ10ಕ್ಕೆಕೆರೆಯ ಸಮೀಪ ಹಾಜರಾಗಬೇಕೆಂದು ಉಮ್ಮತ್ತೂರು ದೊಡ್ಡಕೆರೆ ಹೋರಾಟ ಸಮಿತಿ ಮತ್ತು ಗ್ರಾಮಸ್ಥರು ಕೋರಿದ್ದಾರೆ.