Advertisement
ಉಡುಪಿ: ಪ್ಲಾಸ್ಟಿಕ್ ಬಾಟಲುಗಳನ್ನು ಮನೆಗೆ ನೀರು ತರುತ್ತಿರುವ ಮಕ್ಕಳು. ಈ ದೃಶ್ಯ ಕಂಡು ಬಂದಿದ್ದು ನಗರದ ತೆಂಕಪೇಟೆ ವಾರ್ಡ್‌ನಲ್ಲಿ!
Related Articles
ಬಾವಿ ನೀರು ಇದ್ದರೂ ಕೂಡ ಉಪಯೋಗ ಮಾಡಲಾಗದಂತಿದೆ. ಇದಕ್ಕೆ ಕಾರಣ ಡ್ರೈನೇಜ್ ನೀರು. ಮಳೆಗಾಲದಲ್ಲಿ ನೀರು ತುಂಬಿ ಡ್ರೈನೇಜ್ ನೀರು ನಮ್ಮ ಬಾವಿಗೆ ಹರಿಯುತ್ತಿದೆ. ಈ ಕಾರಣಕ್ಕಾಗಿಯೇ ಇದನ್ನು ಕುಡಿಯಲು ಉಪಯೋಗಿಸುತ್ತಿಲ್ಲ. ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು ಮಾತ್ರ ಸದ್ಯಕ್ಕೆ ಈ ನೀರು ಬಳಕೆಯಾಗುತ್ತಿದೆ ಎನ್ನುತ್ತಾರೆ ರೇಖಾ.
Advertisement
ಚುನಾವಣೆ ಸಮಯ ನಿರಂತರ ನೀರುಚುನಾವಣೆ ಸಮಯದಲ್ಲಿ ನಿರಂತರ ನೀರು ಲಭ್ಯವಾಗುತ್ತಿತ್ತು. ಇದು ಚುನಾವಣೆ ಸಮಯಕ್ಕೆ ಮಾತ್ರವೇ ಎಂದು ನಾವೇ ಮತಪ್ರಚಾರಕ್ಕೆ ಬಂದವರಲ್ಲಿ ಕೇಳಿದ್ದುಂಟು. ಈಗ ಹಾಗೆಯೇ ಆಗಿದೆ. ಚುನಾವಣೆ ಮುಗಿದ ಮರುದಿನದಿಂದಲೇ ಮತ್ತೆ 3 ದಿನಕ್ಕೊಮ್ಮೆ ನೀರು ಎಂದು ತಿಳಿಸಲಾಯಿತು ಎಂದು ವಾಸ್ತವ ಘಟನೆಯನ್ನು ವಿವರಿಸಿದವರು ಶ್ಯಾಂ ಭಟ್. ಚರಂಡಿ ನೀರಿಗೆ ಕೊರತೆ ಇಲ್ಲ!
ಬಾದ್ಯಾಸ್ ಕಾಂಪೌಂಡ್, ಪಿಪಿಸಿ ಸಂಸ್ಕೃತ ಕಾಲೇಜಿನ ಹಿಂಭಾಗದಲ್ಲಿರುವ 5ರಿಂದ 10 ಮನೆಗಳಿಗೆ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ಡ್ರೈನೇಜ್ ನೀರು ಓವರ್‌ಫ್ಲೋ ಆಗಿ ಕುಡಿಯುವ ಬಾವಿ ನೀರು ಕೂಡ ಕಲುಷಿತಗೊಂಡಿವೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ಬಾದ್ಯಾಸ್ ಕಾಂಪೌಂಡ್ ನಿವಾಸಿಗಳು ಸ್ವಂತ ಖರ್ಚಿನಿಂದ ಟ್ಯಾಂಕರ್ ನೀರು ಕೂಡ ತರಿಸಿದ್ದಾರಂತೆ. ಕೆಲವೆಡೆ ಟ್ಯಾಂಕರ್ ಹೋಗುವಷ್ಟು ಜಾಗ ಕೂಡ ಇಲ್ಲದಿರುವುದು ಸಮಸ್ಯೆಯಾಗಿದೆ. ಜನರ ಬೇಡಿಕೆಗಳು
– ದಿನಕ್ಕೊಮ್ಮೆಯಾದರೂ ಟ್ಯಾಂಕರ್ ನೀರಾದರೂ ಪೂರೈಸಿ
– ಎತ್ತರ ಪ್ರದೇಶಕ್ಕೂ ನೀರು ತಲುಪುವಂತಿರಲಿ
– ನಳ್ಳಿ ನೀರು ಸಂಪರ್ಕ ಇಲ್ಲದ ಮನೆಗಳಿಗೆ ನೀರು ಒದಗಿಸಿ
– ಲಭ್ಯವಿರುವ ಬಾವಿಗಳ ನೀರು ಪೂರೈಸಿದರೂ ಸಮಸ್ಯೆ ಪರಿಹಾರ ಸಾಧ್ಯ
– ನೀರು ಪೂರೈಕೆಯ ನಿಗದಿತ ಅವಧಿ ತಿಳಿಸಿ ಎತ್ತರ ಪ್ರದೇಶಕ್ಕೆ ನೀರಿಲ್ಲ
ನಮ್ಮ ವಾರ್ಡ್ ವ್ಯಾಪ್ತಿಯ ಒಂದೆರಡು ಕಡೆ ನೀರಿನ ಸಮಸ್ಯೆ ಇದೆ. ಒಂದು ಬಾರಿ 3-4 ಮನೆಗಳಿಗೆ ಟ್ಯಾಂಕರ್ ನೀರು ಒದಗಿಸಲಾಗಿದೆ. ಎತ್ತರ ಪ್ರದೇಶಕ್ಕೆ ನೀರು ಸರಿಯಾಗಿ ಲಭ್ಯವಾಗುತ್ತಿಲ್ಲ.
– ಮಾನಸಾ ಸಿ. ಪೈ,
ತೆಂಕಪೇಟೆ ವಾರ್ಡ್ ಸದಸ್ಯರು ಚರಂಡಿ ಸರಿಪಡಿಸಿದರೂ ಸಾಕು
ಡ್ರೈನೇಜ್ ನೀರಿನಿಂದಾಗಿ ಕುಡಿಯುವ ಬಾವಿ ನೀರು ಕಲುಷಿತಗೊಂಡಿದೆ. ನಗರಸಭೆ ಈ ಬಗ್ಗೆ ಕ್ರಮ ವಹಿಸಿದರೂ ಕೂಡ ನಮ್ಮ ವ್ಯಾಪ್ತಿಗೆ ತಕ್ಕಷ್ಟು ಕುಡಿಯುವ ನೀರು ಲಭ್ಯವಾಗುತ್ತದೆ ಎಂದು ಹೇಳುತ್ತಾರೆ ರಾಜಾಂಗಣ ಪಾರ್ಕಿಂಗ್ ಪ್ರದೇಶದಲ್ಲಿ ನಿವಾಸಿಗಳು. ಮನೆಯ ಬಾವಿಯ ಪಕ್ಕದಲ್ಲಿಯೇ ಚರಂಡಿ ಹಾದು ಹೋಗುವುದರಿಂದ ಕುಡಿಯುವ ನೀರು ಇದ್ದೂ ಉಪಯೋಗಕ್ಕಿಲ್ಲದಂತಾಗಿದೆ ಎಂಬುವುದು ಇಲ್ಲಿನ ನಿವಾಸಿಗಳ ಅಳಲು. ಸದ್ಯಕ್ಕೆ 3 ದಿನಕ್ಕೊಮ್ಮೆ ಬರುವ ನಳ್ಳಿ ನೀರನ್ನೇ ಆಶ್ರಯಿಸಿದ್ದೇವೆ. ಅದೂ ಬಾರದಿದ್ದರೆ ಸಮೀಪದ ಮನೆಯೊಂದರ ಬಾವಿ ನೀರು ತರುತ್ತೇವೆ. ಬಾವಿ ನೀರು ಕೂಡ ಬತ್ತಿ ಹೋಗಿದೆ. ಇನ್ನು ಎಷ್ಟು ದಿನ ನೀರು ಸಿಗುತ್ತದೋ ಗೊತ್ತಿಲ್ಲ. ಟ್ಯಾಂಕರ್ ನೀರನ್ನಾದರೂ ಒದಗಿಸಿದರೆ ಒಳ್ಳೆಯದಿತ್ತು.
-ವಸಂತಿ, ಸ್ಥಳೀಯರು ಉದಯವಾಣಿ ಆಗ್ರಹ
ಟ್ಯಾಂಕರ್ ನೀರು ಪೂರೈಸಿದರೆ ಜನರಿಗೆ ಅನುಕೂಲವಾದೀತು. ನೀರಿನ ಸಂಪರ್ಕ, ಬಾವಿಗಳು ಇಲ್ಲದ ಮನೆಗಳನ್ನು ಗುರುತಿಸಿ ಅವರಿಗಾದರೂ ಟ್ಯಾಂಕರ್ ನೀರು ಒದಗಿಸಿದರೆ ಒಳ್ಳೆಯದು. ನೀರು ಬಿಡುವ ನಿರ್ದಿಷ್ಟ ವೇಳೆಯನ್ನು ಮೊದಲೇ ತಿಳಿಸಿದರೆ ನಿವಾಸಿಗಳಿಗೆ ಅನುಕೂಲವಾಗುತ್ತದೆ. ಮಾಹಿತಿ ನೀಡಿ
ನೀರಿನ ತೀವ್ರ ಸಮಸ್ಯೆಇದ್ದಲ್ಲಿ ತಮ್ಮ ಹೆಸರಿನ ಸಹಿತ “ಉದಯವಾಣಿ’ ವಾಟ್ಸಪ್ ನಂಬರ್ 9148594259 ಬರೆದು ಕಳುಹಿಸಿ. – ಪುನೀತ್ ಸಾಲ್ಯಾನ್