Advertisement

ಜಲವರ್ಣದ ಚಿತ್ರಗಳು

09:42 PM Jun 22, 2019 | Team Udayavani |

ಈ ಕೆಳಗಿನದ್ದು ಯಾವುದೋ ಒಂದು ಮಳೆಗಾಲದಲ್ಲಿ ನಾನೇ ತೆಗೆದ ಫೊಟೊ. ಫೊಟೊ ಎನ್ನಲು ನನಗೇ ಅನುಮಾನವಾಗುತ್ತಿದೆ, ಜಲವರ್ಣದ ಕಲಾಕೃತಿ ಎನ್ನುವುದೇ ಹೆಚ್ಚು ಸರಿ. ಪ್ರತಿ ಸಾರಿ ಮಳೆ ಬರುವಾಗಲೂ ಮನೆಯ ಹೊರಗಡೆ ಕಾಲಿಟ್ಟರೆ ಸಾಕು, ಇಂಥ ಅನೇಕ ಕಲಾಕೃತಿಗಳು ಕೆಮರಾಕ್ಕೆ ಸಿಗುತ್ತವೆ. ಮಳೆಯ ಕುರಿತ ಕವಿತೆಯನ್ನು ನಮಗೆ ಬೇಕಾದಂತೆ ಹೊಸೆಯಬಹುದು, ಮಳೆಯ ಕುರಿತ ಚಿತ್ರವನ್ನು ನಮಗೆ ಬೇಕಾದಂತೆ ಬರೆಯಬಹುದು. ಆದರೆ, ಮಳೆಯ ಫೊಟೊ ತೆಗೆಯಬೇಕೆಂದರೆ ಅದು ನಮ್ಮ ಕೈಯಲ್ಲಿಲ್ಲ. ನಾವು ಕ್ಲಿಕ್ಕಿಸಿದ ಫೊಟೊವನ್ನು ಮತ್ತೆ ಪ್ರಕೃತಿಯೇ ಒರೆಸಿ ಅದರದ್ದೇ ಆದ ಅಮೂರ್ತ ಕಲಾಕೃತಿಯನ್ನು ರಚಿಸುತ್ತ¤ದೆ ; ತಾವು ಬರೆದ ಚಿತ್ರವನ್ನು ತಾವೇ ಒರೆಸಿ ಹಾಕುತ್ತಾರಲ್ಲ- ಪುಟ್ಟ ಮಕ್ಕಳು, ಹಾಗೆ.

Advertisement

ನಾನು ಕ್ಲಿಕ್ಕಿಸುವುದು ಮಾತ್ರ, ಫೊಟೊ ಹೇಗೆ ಬರಬೇಕು ಎಂದು ನಿರ್ಧರಿಸುವುದು ಪ್ರಕೃತಿಯೇ. ಇಂಥ ಅನೇಕ ಫೊಟೊಗಳು ನನ್ನ ಸಂಗ್ರಹದಲ್ಲಿವೆ. ಕಣ್ಣ ಬಿಂದು ಇನ್ನೇನು ಉರುಳುವುದಕ್ಕಿದೆ ಎಂಬಂಥ ಸ್ಥಿತಿಯಲ್ಲಿರುವಾಗ ಕಾಣಿಸುವ ಮಸುಕಾಗಿರುವ ಲೋಕದೃಶ್ಯದಂತೆ ಇಂಥ ಫೊಟೊಗಳನ್ನು ನೋಡಿದಾಗಲೆಲ್ಲ ಮನದೊಳಗೆ ಬೆರಗಿನ ಮಳೆ ಸುರಿಯುತ್ತಿರುತ್ತದೆ.

ಕೆ. ಎಸ್‌. ರಾಜಾರಾಮ್‌

Advertisement

Udayavani is now on Telegram. Click here to join our channel and stay updated with the latest news.

Next