Advertisement
ಜಿ.ಪಂ., ತಾ.ಪಂ. ಸದಸ್ಯರು, ಗ್ರಾ.ಪಂ. ಅಧ್ಯಕ್ಷರು, ಪಿಡಿಒ, ವಿ.ಎ. ಸಹಿತ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಬೋರ್‌ವೆಲ್, ಬಾವಿಗಳಿಗೆ ಪಂಪು, ಪೈಪ್‌ಲೈನ್ ಅಳವಡಿಸಲು ತುರ್ತಾಗಿ ಮೆಸ್ಕಾಂ ಕನೆಕ್ಷನ್‌ಗಳನ್ನು ಮಾಡಬೇಕು. ನೀರಿನ ಮೂಲಗಳಿದ್ದರೂ, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅಧಿಕಾರಿಗಳು ಆದ್ಯತೆ ಮೇರೆಗೆ ಕೆಲಸ ಮಾಡಬೇಕು ಎಂದು ಶಾಸಕ ಸೊರಕೆ ಸೂಚಿಸಿದರು.
Related Articles
Advertisement
ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ, ಜಿ.ಪಂ. ಸದಸ್ಯರಾದ ಚಂದ್ರಿಕಾ ರಂಜನ್ ಕೇಳ್ಕರ್, ಶಿಲ್ಪಾ ಜಿ. ಸುವರ್ಣ, ವಿಲ್ಸನ್ ರಾಡ್ರಿಗಸ್, ಮೈರ್ಮಾಡಿ ಸುಧಾಕರ ಶೆಟ್ಟಿ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ತಹಶೀಲ್ದಾರ್ ಮಹೇಶ್ಚಂದ್ರ, ತಾ.ಪಂ. ಇಒ ಶೇಷಪ್ಪ ಆರ್. ಉಪಸ್ಥಿತರಿದ್ದರು.
ಪಿಡಿಒ ಅವರಿಗೆ ವಸತಿಯದ್ದೇ ಗೋಳಂತೆ..!ವಸತಿ ಯೋಜನೆಗಳಿಗೆ ಸಂಬಂಧಿಸಿ ವಸತಿ ನಿಗಮ ಆ್ಯಪ್ ತಯಾರಿಸಿದ್ದು, ಇದರಿಂದ ಬಹಳ ಸಮಸ್ಯೆಯಾಗುತ್ತಲಿದೆ. 1 ಮನೆಯದ್ದು 5 ಬಾರಿ ಫೊಟೋ ತೆಗೆಯಬೇಕಾಗಿದೆ. ಹೀಗಾಗಿ ಒಬ್ಬ ಪಿಡಿಒ 1 ಮನೆಗೆ ಕನಿಷ್ಠ 20 ಬಾರಿ ಭೇಟಿ ನೀಡಬೇಕಿದೆ. ಆ್ಯಪ್‌ಗೆ ಸರಿಯಾಗಿ ಅಪ್‌ಲೋಡ್ ಆಗದಿದ್ದರೆ, ಟಾರ್ಗೆಟ್ ಆಗದಿದ್ದರೆ ನಿಗಮದಿಂದ ಶೋಕಾಸ್ ನೊಟೀಸ್ ಕಳುಹಿಸುತ್ತಾರೆ. ಇದರಿಂದಾಗಿ ಬೇರೆ ಕೆಲಸಗಳತ್ತ ಗಮನ ಕೊಡಲೂ ಆಗುತ್ತಿಲ್ಲ ಎಂದು ಹಲವು ಪಿಡಿಒ ಅವರು ಶಾಸಕರಲ್ಲಿ ಗೋಳು ತೋಡಿಕೊಂಡರು. ಈ ಬಗ್ಗೆ ವಸತಿ ಸಚಿವರು, ನಿಗಮದ ಎಂಡಿ ಅವರಲ್ಲಿ ಮಾತನಾಡುವುದಾಗಿ ಶಾಸಕರು ತಿಳಿಸಿದರು. ಮನೆನಿವೇಶನ ಹಂಚಿಕೆಗೆ ಕ್ರಮ
ಮನೆನಿವೇಶನಕ್ಕೆ ಜಾಗಗಳನ್ನು ಆಯಾ ಗ್ರಾ.ಪಂ.ಗಳನ್ನು ಗುರುತಿಸಿಡಬೇಕು. ಜಾಗದ ಲಭ್ಯತೆ ಇಲ್ಲದಿದ್ದರೆ, ಪಕ್ಕದ ಪಂಚಾಯತ್‌ಗಳಲ್ಲಿ ಜಾಗವಿದ್ದರೆ ಕೊಡಲು ಅವಕಾಶವಿದೆ. ಪಂಚಾಯತ್ ಕಾಡು, ನೆಡುತೋಪು, ಡೀಮ್ಡ್ ಫಾರೆಸ್ಟ್ ಇದ್ದಲ್ಲಿ ಅದನ್ನು ವಿರಹಿತಗೊಳಿಸಿ ನಿವೇಶನಕ್ಕೆ ಮೀಸಲಿಡಲು ಅವಕಾಶಗಳಿದೆ. ಜಿಲ್ಲಾಧಿಕಾರಿಗಳ ಹಂತದಲ್ಲಿ ಸಮಿತಿಯೊಂದಿದ್ದು, ಪಂಚಾಯತ್ ಕಾಡು, ನೆಡುತೋಪುವಿನ ಪಟ್ಟಿಯನ್ನು ಗ್ರಾ.ಪಂ.ಗಳು ತಹಶೀಲ್ದಾರ್ ಅಥವಾ ರೇಂಜರ್ ಅವರಿಗೆ ನೀಡಬೇಕು ಎಂದು ಶಾಸಕರು ಹೇಳಿದರು.