Advertisement

ವಾಟರ್‌ ಯುನಿವರ್ಸಿಟಿ ಅಗತ್ಯವಿಲ್ಲ: ಡಿಕೆಶಿ

06:00 AM Dec 22, 2018 | Team Udayavani |

ವಿಧಾನಸಭೆ: ರಾಜ್ಯದಲ್ಲಿ ನೀರು ನಿರ್ವಹಣೆ ಮಾಡುವ ಕುರಿತು ಈಗಾಗಲೇ ಅನೇಕ ಸಂಸ್ಥೆಗಳು ಬೇರೆ, ಬೇರೆ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಪ್ರತ್ಯೇಕವಾಗಿ ವಾಟರ್‌ ಯುನಿವರ್ಸಿಟಿ ರಚಿಸುವ ಅಗತ್ಯವಿಲ್ಲ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

Advertisement

ತುಮಕೂರು ಶಾಸಕ ಜ್ಯೋತಿಗಣೇಶ್‌ ಪ್ರಶ್ನೆಗೆ ಉತ್ತರಿಸಿರುವ ಅವರು, ರಾಜ್ಯದಲ್ಲಿ ವಾಟರ್‌ ಯುನಿವರ್ಸಿಟಿ ಸ್ಥಾಪನೆ ಮಾಡುವ ಕುರಿತು ಜಲ ಸಂಪನ್ಮೂಲ ಇಲಾಖೆಯ ಪ್ರಧಾನ ಸಲಹೆಗಾರರು ಹಾಗೂ ತಾಂತ್ರಿಕ ಸಲಹೆಗಾರರ ಅಭಿಪ್ರಾಯ ಕೋರಲಾಗಿತ್ತು. ಅವರು ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ನೀರು ಮತ್ತು ನೆಲ ನಿರ್ವಹಣೆಗೆ ವಾಲಿ¾ ಸಂಸ್ಥೆ,  ಸಮಗ್ರ ಜಲ ಸಂಪನ್ಮೂಲ ನಿರ್ವಹಣೆ ಉನ್ನತ ಕೇಂದ್ರ, ಕಾಡಾ, ಕರ್ನಾಟಕ ಎಂಜಿನಿಯರ್ ಸಂಶೋಧನಾ ಕೇಂದ್ರ, ನೀರು ಬಳಕೆದಾರರ ಸಹಕಾರ ಸಂಘ, ಸಂಶೋಧನಾ ಕೇಂದ್ರಗಳು, ಪ್ರಾಧಿಕಾರಗಳು, ನಿರ್ದಿಷ್ಟ ಕಾರ್ಯ ಚಟುವಟಿಕೆಗಳಿಗಾಗಿ ಕಾರ್ಯ ನಿರ್ವಹಿಸುತ್ತಿವೆ. ಅವುಗಳನ್ನು ಅಭಿವೃದ್ಧಿ ಪಡಿಸಿ ಇನ್ನಷ್ಟು ಉತ್ತಮ ಕಾರ್ಯಗಳನ್ನು ಕೈಗೊಳ್ಳಲು ಸಲಹೆ ನೀಡಿದ್ದಾರೆ. ಆದ್ದರಿಂದ ನೀರು ನಿರ್ವಹಣೆಗೆ ಪ್ರತ್ಯೇಕ ವಿಶ್ವವಿದ್ಯಾಲಯದ ಅಗತ್ಯವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next