Advertisement
ಪತ್ರಕರ್ತರೊಂದಿಗೆ ಮಾತನಾ ಡಿದ ಅವರು, ಈ ವರ್ಷ ರಾಜ್ಯದಲ್ಲಿ ಮಳೆ ಕಡಿಮೆಯಿದ್ದು ಅಣೆಕಟ್ಟುಗಳು ಭರ್ತಿಯಾಗಿಲ್ಲ. ಬೆಂಗಳೂರು, ಕೋಲಾರ, ಮೈಸೂರು, ಮಂಡ್ಯ, ತುಮಕೂರಿಗೆ ಕುಡಿಯುವ ನೀರು ಒದಗಿಸುವ ಕಾವೇರಿ ನದಿಯ ನೀರನ್ನು ತಮಿಳುನಾಡಿಗೆ ಬಿಟ್ಟರೆ ಬೇಸಗೆಯಲ್ಲಿ ನೀರಿನ ಕೊರತೆ ಉಂಟಾಗಲಿದೆ ಎಂದರು.
ಕಾಂಗ್ರೆಸ್ ಸರಕಾರದ ಉಚಿತ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಲ್ಲಿ ಅವಾಂತರ ಸೃಷ್ಟಿಯಾಗಿದೆ. ಅಭಿವೃದ್ಧಿ ಯೋಜನೆಗಳಿಗೆ ಹಣ ಇಲ್ಲ. ಎಲ್ಲವನ್ನೂ ಉಚಿತವಾಗಿ ಕೊಟ್ಟು, ಸಾಮಾಜಿಕ ಭದ್ರತಾ ಯೋಜನೆಗಳಿಗೆ ಸರಕಾರ ಹಣ ಬಿಡುಗಡೆ ಮಾಡುತ್ತಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಿದರೆ ಸಾಕು ಎಂದು ಸರಕಾರ ಯೋಚಿಸುತ್ತಿದೆ ಎಂದು ಅವರು ಹೇಳಿದರು.
ಮಹಿಳೆಯರು ಖುಷಿಯಾಗಿ ಸರಕಾರಿ ಬಸ್‌ಗಳಲ್ಲಿ ಓಡಾಡುತ್ತಿರು ವುದು ಸಂತಸದ ವಿಚಾರ. ಆದರೆ ಸರಕಾರ ಸರಿಯಾಗಿ ವಿದ್ಯುತ್ ಕೊಡುತ್ತಿಲ್ಲ. ರೂಟ್ ಬಸ್‌ಗಳ ಸಂಖ್ಯೆಯನ್ನು ಶೇ. 50ರಷ್ಟು ಕಡಿತ ಮಾಡಲಾಗಿದೆ. ಸಾರಿಗೆ ಸಂಸ್ಥೆಗಳು ನಷ್ಟಕ್ಕೆ ಜಾರುತ್ತಿವೆ ಎಂದು ಅವರು ತಿಳಿಸಿದರು.
Related Articles
ನಿರಂತರ ಚುನಾವಣೆಗಳಿಂದ ಅಭಿವೃದ್ಧಿ ಕಾರ್ಯಕ್ಕೆ ತೊಡಕಾಗುತ್ತಿದೆ. ಈ ನಿಟ್ಟಿನಲ್ಲಿ “ಒಂದು ದೇಶ ಒಂದು ಚುನಾವಣೆ’ ನಡೆಯಬೇಕು. ಏಕಕಾಲದಲ್ಲಿ ಚುನಾವಣೆಗಳು ನಡೆದರೆ ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗಲಿದೆ. ಚುನಾವಣೆ ವೆಚ್ಚ ತಗ್ಗಲಿದೆ. ಸಮಯವೂ ಉಳಿಯಲಿದೆ. ಕೇರಳದಲ್ಲಿ ಜಿ.ಪಂ., ಗ್ರಾ.ಪಂ., ನಗರಸಭೆ ಚುನಾವಣೆಗಳು ಒಟ್ಟಿಗೆ ನಡೆಯುವಂತೆ, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ನಡೆಸಬಹುದು ಎಂದರು.
Advertisement
ಯಾರೂ ಬಿಜೆಪಿ ಬಿಡುವುದಿಲ್ಲಕಾಂಗ್ರೆಸ್ ನಾಯಕರನ್ನು ಬಿಜೆಪಿಗೆ ಕರೆತರುವ ಯೋಚನೆ ಇಲ್ಲ. ಬಿಜೆಪಿಗೆ ಶಾಸಕರನ್ನು ಸೆಳೆಯುವ ಉದ್ದೇಶವಿಲ್ಲ, ಆದರೆ ಕಾಂಗ್ರೆಸ್ ಆಪರೇಷನ್ ಪ್ರಯತ್ನಕ್ಕೆ ಕೈಹಾಕಿದೆ. ಅನ್ಯ ಪಕ್ಷದ ನಾಯಕರನ್ನು ಪಕ್ಷಕ್ಕೆ ಕರೆತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಪೈಪೋಟಿ ಶುರುವಾಗಿದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಜನಾದೇಶ ಪಾಲನೆ ಮಾಡುತ್ತಿದ್ದು ವಿಪಕ್ಷವಾಗಿ ಕೆಲಸ ಮಾಡಲು ತಯಾರಿದೆ. 100 ದಿನಗಳ ಆಡಳಿತ ಪೂರೈಸಿರುವ ಕಾಂಗ್ರೆಸ್ ಮುಂದೆ ಒಳ್ಳೆಯ ಆಡಳಿತ ಕೊಡಲಿ. ಪ್ರಸ್ತುತ ರಾಜ್ಯದಲ್ಲಿ ಬಿಜೆಪಿ ಸಂಕಷ್ಟದಲ್ಲಿ ಇರಬಹುದು. ಇಂತಹ ಸಂದರ್ಭದಲ್ಲಿ ಅಧಿಕಾರಕ್ಕಾಗಿ ಯಾರೂ ಪಕ್ಷ ತೊರೆಯದಂತೆ ಮನವಿ ಮಾಡುತ್ತೇನೆ ಎಂದರು.