Advertisement

ದೇಹದ ತೂಕ ಇಳಿಕೆಗೆ ನೀರು

12:46 PM May 08, 2019 | mahesh |

ದೇಹದ ತೂಕ ಇಳಿಸಲು ನೀರು ಸಾಕಷ್ಟು ಪ್ರಯೋಜನಕಾರಿ. ಇದು ಜೀರ್ಣಕ್ರಿಯೆ, ಸ್ನಾಯುಗಳ ಕಾರ್ಯವೈಖರಿಗೂ ಅಗತ್ಯ. ದೇಹದ ತೂಕ ಇಳಿಸಿಕೊಳ್ಳಬೇಕು ಎಂದು ಬಯಸುತ್ತಿರುವವರು ಹೆಚ್ಚು ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು.

Advertisement

ಕೊಬ್ಬು ಕರಗಿಸಲು ನೀರು ಅಗತ್ಯ
ನೀರು ಅಥವಾ ಕ್ಯಾಲೋರಿ ತುಂಬಿದ ಗಿಡಮೂಲಿಕೆಗಳ ಚಹಾವನ್ನು ಪ್ರತಿದಿನ ಹೆಚ್ಚಿನ ಕ್ಯಾಲೋರಿ ಪಾನೀಯಗಳ ಬದಲು ಕುಡಿಯುವುದರಿಂದ ದೀರ್ಘ‌ಕಾಲದ ಪ್ರಯೋಜನವಿದೆ.

ವರ್ಕ್‌ಔಟ್‌ಗೆ ಸಹಕಾರಿ
ನೀರು ಸ್ನಾಯುಗಳು, ಸಂಯೋಜನಕ ಅಂಗಾಂಶಗಳು ಮತ್ತು ಕೀಲುಗಳು ಸರಿಯಾಗಿ ಚಲಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ವ್ಯಾಯಾಮದ ವೇಳೆ ಶ್ವಾಸಕೋಶ, ಹೃದಯ ಮತ್ತು ಇತರ ಅಂಗಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ನೆರವಾಗುತ್ತದೆ. ಹೀಗಾಗಿ ವ್ಯಾಯಾಮದ ಮೊದಲು, ಅನಂತರ ನೀರು ಕುಡಿಯಬೇಕು.

ಕೊಬ್ಬುಕರಗಿಸಲು ನೀರು ಅಗತ್ಯ

ಕೊಬ್ಬು ಅಥವಾ ಕಾರ್ಬೋ ಹೈಡ್ರೇಟ್‌ಗಳಿಂದ ದೇಹದಲ್ಲಿ ಸರಿಯಾಗಿ ಚಯಾಪಚಯಿಸಲು ಸಾಧ್ಯವಿಲ್ಲ. ಆಹಾರ ಮತ್ತು ಪಾನೀಯದಿಂದ ಉಂಟಾದ ಕೊಬ್ಬನ್ನು ಕರಗಿಸಲು ಸಾಕಷ್ಟು ನೀರು ಕುಡಿಯುವುದು ಅತ್ಯಗತ್ಯ.

ಹಸಿವು ಕಡಿಮೆ ಮಾಡುತ್ತದೆ
ನೀರು ಹೊಟ್ಟೆಯಲ್ಲಿರುವ ಖಾಲಿ ಜಾಗವನ್ನು ತುಂಬುತ್ತದೆ. ಇದರಿಂದ ಹೊಟ್ಟೆ ತುಂಬಿದ ಭಾವನೆ ಮೂಡುವುದಲ್ಲದೆ ಹಸಿವನ್ನು ಕಡಿಮೆಗೊಳಿಸುತ್ತದೆ. ಆಹಾರ ಸೇವಿಸುವ ಮುನ್ನ ಒಂದು ಗ್ಲಾಸ್‌ ನೀರು ಕುಡಿಯಬೇಕು. ಇದು ಅನಗತ್ಯ ಕಾಬೊರ್ಹೈಡ್ರೇಟ್‌ಗಳನ್ನು ತಡೆಯುತ್ತದೆ. ಇದು ದೇಹದ ತೂಕಕ್ಕೆ ಇಳಿಕೆಗೆ ಕಾರಣವಾಗುತ್ತದೆ.

ಕ್ಯಾಲೋರಿ ಬರ್ನಿಂಗ್‌ ಹೆಚ್ಚಿಸುತ್ತದೆ

ನೀರು ಕುಡಿಯುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲೋರಿ ಬರ್ನ್ ಆಗುತ್ತದೆ. ವಿಶ್ರಾಂತಿ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾಲೋರಿಯನ್ನು ಕಡಿಮೆಗೊಳಿಸುತ್ತದೆ. ತಣ್ಣೀರು ಕುಡಿಯುವುದು ಮತ್ತಷ್ಟು ಕ್ಯಾಲೋರಿಗಳನ್ನು ಕಡಿಮೆ ಮಾಡಬಹುದು. ಏಕೆಂದರೆ ದೇಹ ಜೀರ್ಣಕ್ರಿಯೆಗಾಗಿ ನೀರನ್ನು ಬಿಸಿ ಮಾಡುವ ಮೂಲಕ ಶಕ್ತಿ ಅಥವಾ ಕ್ಯಾಲೋರಿಗಳನ್ನು ಖರ್ಚು ಮಾಡುತ್ತದೆ.

-ಎಂ.ಕೆ.

Advertisement

Udayavani is now on Telegram. Click here to join our channel and stay updated with the latest news.

Next