Advertisement
ಈ ವೇಳೆ ಶಾಸಕ ಡಿ.ಸಿ.ತಮ್ಮಣ್ಣ ಮಾತನಾಡಿ, ಈಏತನೀರಾವರಿ ಕಾಮಗಾರಿ ಮದ್ದೂರು ಹಾಗೂಮಳವಳ್ಳಿ ಎರಡು ಕ್ಷೇತ್ರದ ಬಾಧಿತ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಒದಗಿಸುವ ಕಾಮಗಾರಿಯಾಗಿದೆ.ಮದ್ದೂರು ಕ್ಷೇತ್ರದ 4 ಕೆರೆ, ಮಳವಳ್ಳಿ ಕ್ಷೇತ್ರದ 12ಕೆರೆಗಳಿಗೆ ನೀರು ತುಂಬಿಸಲಾಗುವುದು. ಇದರಿಂದ ಈಭಾಗದ ನೂರಾರು ಎಕರೆ ಪ್ರದೇಶದ ಬೆಳೆಗಳಿಗೆಅನುಕೂಲವಾಗಲಿದೆ ಎಂದರು.
Related Articles
Advertisement
ಅಧಿಕಾರಿಗಳಿಗೆ ಸೂಚನೆ: ವಿಸಿ ನಾಲೆ ಅಚ್ಚುಗಟ್ಟು ಪ್ರದೇಶಕ್ಕೆ ಏತನೀರಾವರಿ ಮೂಲಕ ನೀರನ್ನು ಸರಬರಾಜು ಮಾಡುವುದರ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಕಾಮಗಾರಿಯನ್ನು 4 ತಿಂಗಳಲ್ಲಿಮುಗಿಸಬೇಕೆಂದು ತಾಕೀತು ಮಾಡಿ ರೈತರಿಗೆ ಯಾವುದೇರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.
ನೀರಾವರಿ ಇಲಾಖೆಯ ಅಧಿಕಾರಿ ಎಇಇ ನಾಗರಾಜು, ಚಂದ್ರೇಗೌಡ, ಅವಿನಾಶ್, ಶೀಲ, ಶಿವಕುಮಾರ್, ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ತಿಟ್ಟಮಾರನಹಳ್ಳಿ ಸುರೇಶ್, ವೆಂಕಟೇಶ, ಶ್ರೀನಿವಾಸ, ಮೆಣಸಗೆರೆ ಪಟೇಲ್ ಉಮೇಶ್ ಇದ್ದರು.
30ಕ್ಕೆ ರೈತರೊಂದಿಗೆ ಮಾತುಕತೆ :
ಈ ಏತನೀರಾವರಿ ಕಾಮಗಾರಿ ಮಾಡಲು ಕೆಲವು ರೈತರ ಜಮೀನನ್ನು ಭೂಸ್ವಾಧೀನ ಇಲಾಖೆವಶಪಡಿಸಿಕೊಂಡಿದೆ. ಇದರಿಂದ ರೈತರುಆತಂಕಗೊಂಡು ಇನ್ನೂ ಪರಿಹಾರ ಸಿಕ್ಕಿಲ್ಲ,ಪರಿಹಾರ ಕೊಡಿಸಿಕೊಡಬೇಕೆಂದು ನನಗೆಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿಮಾ.30ರಂದು ರೈತರೊಂದಿಗೆ ಮಾತುಕತೆ ನಡೆಸಿಬೆಲೆ ನಿಗದಿ ಪಡಿಸಲು ಮುಂದಾಗಿದ್ದಾರೆ. ಆಸಂದರ್ಭದಲ್ಲಿ ರೈತರಿಗೆ ಉತ್ತಮ ಪರಿಹಾರ ಕೊಡಿಸಲು ಒತ್ತಾಯಿಸುವುದಾಗಿ ಶಾಸಕ ಡಿ.ಸಿ.ತಮ್ಮಣ್ಣ ತಿಳಿಸಿದರು.
ಸರ್ ಎಂ.ವಿಶ್ವೇಶ್ವರಯ್ಯ ರೈತರ ಜಮೀನುಗಳಿಗೆ ನೀರೊದಗಿಸಲುಒಂದನೆಯದು ಕನ್ನಂಬಾಡಿ ಕಟ್ಟೆ, ಎಡನೆಯದುಯತ್ತಂಬಾಡಿ ಕಟ್ಟೆಯನ್ನು ಕಟ್ಟಲು ಕನಸುಕಂಡಿದ್ದರು. ಆದರೆ, ಯತ್ತಂಬಾರಿ ಅಣೆಕಟ್ಟೆಯನ್ನು ಕಟ್ಟಲು ಸಾಧ್ಯ ವಾಗಿರಲಿಲ್ಲ. ವಿಶ್ವೇಶ್ವರಯ್ಯನವರ ಕನಸನ್ನು ಶಾಸಕ ಸಿ.ಡಿ.ತಮ್ಮಣ್ಣಅವರು ಈ ಭಾಗದ ಕೂಳಗೆರೆ ಮತ್ತುತಿಟ್ಟ ಮಾರನಹಳ್ಳಿ ಏತ ನೀರಾವರಿ ಕಾಮಗಾರಿ ಮಾಡಿ ರೈತರಿಗೆ ಅನುಕೂಲ ಕಲ್ಪಿಸಿದ್ದಾರೆ. –ಉಮೇಶ್ ಪಟೇಲ್, ರೈತ ಮೆಣಸಗೆರೆ