Advertisement
ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿ ಗುತ್ತು, ಬಂಟ್ವಾಳ ಪುರಸಭಾ ಸದಸ್ಯ ಎ. ಗೋವಿಂದ ಪ್ರಭು ಮತ್ತು ಇತರರು ಜೆಸಿಬಿ, ಹಿಟಾಚಿ ಬಳಸಿ ಮರಳು ಡ್ರೆಜ್ಜಿಂಗ್ ಮೂಲಕ ತೆರವು ಮಾಡಿದ್ದರಿಂದ ಹರಿವು ಆರಂಭವಾಗಿದೆ. ಸುಮಾರು 2 ಕಿ.ಮೀ. ದೂರಕ್ಕೆ ನೀರು ಹರಿದು ಜ್ಯಾಕ್‌ವೆಲ್ ಸುತ್ತ ತುಂಬಿದೆ. ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕೊರತೆ ನೀಗಿದೆ.
ಡ್ಯಾಂ ಪಾತ್ರದಲ್ಲಿ ತುಂಬಿದ ಹೂಳು ತೆರವು ಮಾಡಿದಲ್ಲಿ ನೀರು ಸಾಕಷ್ಟು ಲಭ್ಯವಾಗುವುದಾಗಿ “ಉದಯವಾಣಿ’ ಎರಡು ತಿಂಗಳಿಂದ ಸತತ ವರದಿ ಮಾಡಿದ್ದು, ಅದೀಗ ಸತ್ಯವಾಗಿದೆ. ಜೂನ್‌ನಲ್ಲಿ ಎರಡು ಮಳೆ ಬಂದಿದ್ದರೂ ಮಳೆ ನೀರು ನದಿಗೆ ಹರಿದು ಬಂದಿರಲಿಲ್ಲ. ಆದರೂ ಇಷ್ಟೊಂದು ನೀರು ಹೂಳಿನಡಿ ಅಡಗಿದ್ದುದು ಅಚ್ಚರಿಗೆ ಕಾರಣವಾಗಿದೆ. ಎರಡು ವಾರ ಹಿಂದಿನ ಮಳೆಯ ಬಳಿಕ ಉಪ್ಪಿನಂಗಡಿ ನೆಕ್ಕಿಲಾಡಿ ಕಿರು ಡ್ಯಾಂನಲ್ಲಿ ನೀರು ಹೊರಹರಿದಿದ್ದರೂ ಮರಳಿನಡಿ ಇಂಗುತ್ತಿದ್ದು, ಮೇಲ್ಭಾಗದಲ್ಲಿ ಹರಿವು ಇರಲಿಲ್ಲ. ಅಧಿಕಾರಿ ವರ್ಗ ನೀರಿನ ರೇಶನಿಂಗ್ ಅನಿವಾರ್ಯವಾಗಿ ಘೋಷಿಸಿತ್ತೇ ವಿನಾ ಸರಪಾಡಿ, ಶಂಭೂರು ಡ್ಯಾಂಗಳಲ್ಲಿ ಹೂಳು ತೆರವಿಗೆ ಮುಂದಾಗಿರಲಿಲ್ಲ. ಎಂಆರ್‌ಪಿಎಲ್ ಡ್ಯಾಂ ಹೂಳು ತೆರವು ಮಾಡಿ ತೂಬು ಬಿಡಿಸಿಕೊಟ್ಟದ್ದು ನೀರು ಹರಿದು ಬರಲು ಕಾರಣ ವಾಗಿದೆ. ಇದರಿಂದ ಜಕ್ರಿಬೆಟ್ಟು ಮತ್ತು ತುಂಬೆಗೆ ನೀರು ಬಂದಿದೆ.
ಲಿಂಗೇ ಗೌಡ, ಮನಪಾ ಕಾ.ನಿ. ಎಂಜಿನಿಯರ್
Related Articles
ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಶಾಸಕರು
Advertisement