Advertisement

ನೀರು ಪೂರೈಕೆ- ಪ್ರತಿ ದಿನ ನಿಗಾವಹಿಸಿ: ಸಿಂಧೂ ರೂಪೇಶ್‌ ಸೂಚನೆ

12:58 AM May 21, 2019 | Team Udayavani |

ಕುಂದಾಪುರ: ಎಲ್ಲ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ತಾಲೂಕಿನಲ್ಲಿ 53 ಗ್ರಾಮಗಳಲ್ಲಿ ಟ್ಯಾಂಕರ್‌ ನೀರು ಪೂರೈಸಲಾಗುತ್ತಿದೆ. ಈ ಬಗ್ಗೆ ಪ್ರತಿ ದಿನ ಪಿಡಿಒಗಳು ಮಾಹಿತಿ ಪಡೆದು, ಜನರಿಗೆ ಸಮರ್ಪಕ ರೀತಿಯಲ್ಲಿ ಹಂಚಿಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಉಡುಪಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧು ರೂಪೇಶ್‌ ಸೂಚನೆ ನೀಡಿದರು.

Advertisement

ಕುಂದಾಪುರ ತಾ.ಪಂ. ಸಭಾಂಗಣದಲ್ಲಿ ಸೋಮವಾರ ನಡೆದ ತಾಲೂಕಿನ ಎಲ್ಲ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸ್ವತ್ಛ ಮೇವಾ ಜಯತೇ
ಎಲ್ಲ ಕಡೆ ನೀರು ಸಮರ್ಪಕ ರೀತಿಯಲ್ಲಿ ಹಂಚಿಕೆಯಾಗುತ್ತಿದೆಯೇ ಎನ್ನುವುದರ ಕುರಿತು ತಾ.ಪಂ. ಇಒ ಗಮನಹರಿಸಬೇಕು. 15 ದಿನದೊಳಗೆ ಕುಡಿಯುವ ನೀರಿಗೆ ವ್ಯಯಿಸಿದ ವೆಚ್ಚವನ್ನು ನೀರು ಪೂರೈಸುವ ಗುತ್ತಿಗೆದಾರರಿಗೆ ಪಾವತಿಸಬೇಕು. ರಶೀದಿಯನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಬೇಕು ಎಂದ ಅವರು, ಸ್ವತ್ಛ ಮೇವಾ ಜಯತೇ ಆಂದೋಲನ ಪ್ರತೀ ಪಂಚಾಯತ್‌ನಲ್ಲೂ ನಡೆಯಲಿದ್ದು, ಜೂ. 11 ರಂದು ಎಲ್ಲ ಗ್ರಾ.ಪಂ.ಗಳಲ್ಲಿ ತಲಾ 500 ಗಿಡಗಳನ್ನು ನೆಡಲು ಕ್ರಮಕೈಗೊಳ್ಳಬೇಕು. ಇದೇ ವೇಳೆ ಜಲಾಮೃತ ಯೋಜನೆಯಡಿ ಗಿಡ ನೆಡುವುದು, ಕೆರೆ ಹೂಳೆತ್ತುವುದು, ಜಲ ಸಂರಕ್ಷಣೆ ಸಂಬಂಧ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದವರು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್‌ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್‌, ಜಿಲ್ಲಾ ಪಂಚಾಯತ್‌ ಉಪ ಕಾರ್ಯದರ್ಶಿ ನಾಗೇಶ್‌ ರಾಯ್ಕರ್‌, ಕುಂದಾಪುರ ತಾಲೂಕು ಪಂಚಾಯತ್‌ ಕಾರ್ಯ ನಿರ್ವಹಣಾಧಿಕಾರಿ ಕಿರಣ್‌ ಪೆಡೆ°àಕರ್‌, ಬೈಂದೂರು ತಹಶೀಲ್ದಾರ್‌ ಬಸಪ್ಪ ಪೂಜಾರಿ, ಎಲ್ಲ ಗ್ರಾಮ ಪಂಚಾಯತ್‌ ಪಿಡಿಒಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next