Advertisement

ನೀರು ಕಳ್ಳತನ: ಪ್ರಕರಣ ದಾಖಲು

12:03 PM May 14, 2019 | Vishnu Das |

ಮುಂಬಯಿ: ಮಹಾರಾಷ್ಟ್ರದ ಹಲವು ಕಡೆಗಳಲ್ಲಿ ಇತ್ತೀಚೆಗೆ ನೀರಿನ ಸಂಕಟ ಹೆಚ್ಚಾಗಲಾರಂಭಿಸಿದೆ. ಇಲ್ಲಿನ ನಿವಾಸಿಗರಿಗೆ ನೀರು ಚಿನ್ನದಂತೆ ದುಬಾರಿಯಾಗಿ ಕಾಣಲಾರಂಭಿಸಿದೆ. ನಾಸಿಕ್‌ ಜಿಲ್ಲೆ ಸೇರಿದಂತೆ ಹಲವೆಡೆ ನೀರಿಗೆ ಕನ್ನ ಹಾಕುವ ಪ್ರಕರಣಗಳು ಆರಂಭವಾಗಿವೆ. ಅದೇ ನಾಸಿಕ್‌ನಲ್ಲಿ ಜನರಿಗೆ ತಿಂಗಳಿಗೊಮ್ಮೆ ನೀರು ವಿತರಣೆ ಆಗುತ್ತದೆ. ಆದ್ದರಿಂದ ಕೆಲವು ಮನೆಗಳಲ್ಲಿ ಅಳವಡಿಸಲಾದ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿ ಇಟ್ಟಿರುವ ನೀರು ಕಳ್ಳತನ ನಡೆದಿದೆ.

Advertisement

ನಾಸಿಕ್‌ ಜಿಲ್ಲೆಯ ಶ್ರವಾಸ್ತಿ ನಗರದ ವಿಲಾಸ್‌ ಅಹಿರೆ ಅವರ ಮನೆಯ ಮೇಲ್ಗಡೆ ಸಂಗ್ರಹಿಸಿ ಇಟ್ಟ 500 ಲೀ. ನೀರು ಕಳ್ಳತನ ಆಗಿದ್ದು, ಇದರ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ಬದ್ಲಾಪುರದಿಂದ ಹರಿಯುವ ಉಲ್ಲಾಸ್‌ ನದಿ ಹಾಗೂ ಅಂಬರ್‌ನಾಥ್‌ ಚಿಖಲೋಲಿ ಗ್ರಾಮದ ಹತ್ತಿರದಲ್ಲಿಯ ಚಿಖಲೋಲಿ ಅಣೆಕಟ್ಟಿನಿಂದ ದೈನಂದಿನ ನೂರಾರು ಟ್ಯಾಂಕರ್‌ಗಳ ಮೂಲಕ ನೀರು ಕಳ್ಳತನ ಮಾಡಲಾಗುತ್ತಿದೆ. ಅಣೆಕಟ್ಟಿನ ಬಳಿಯಲ್ಲಿ ಅನಧಿಕೃತವಾಗಿ ಜನರೇಟರ್‌ ಹಾಗೂ ಪಂಪ್‌ ಕಂಡುಬಂದಿವೆ.

ಹಣಕ್ಕಾಗಿ ಮಾರಾಟ
ಪಂಪ್‌ ಮೂಲಕ ನೀರು ತೆಗೆಯುವ ಮೂಲಕ ಟ್ಯಾಂಕರ್‌ ನೀರನ್ನು ಕಟ್ಟಡಗಳಿಗೆ, ಕಾಂಪ್ಲೆಕ್ಸ್‌ , ಔದ್ಯೋಗಿಕ ಕ್ಷೇತ್ರಗಳು ಸೇರಿದಂತೆ ವಿವಿಧೆಡೆ ಹಣಕ್ಕಾಗಿ ಮಾರಾಟ ಮಾಡಲಾಗುತ್ತದೆ. ಈ ರೀತಿ ನೀರು ಕಳ್ಳತನ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎನ್‌ಸಿಪಿ ಮಹಾರಾಷ್ಟ್ರ ರಾಜ್ಯ ವಕ್ತಾರ ಮಹೇಶ್‌ ತಾಪ್ಸೆ ಅವರು ಸ್ಥಾನೀಯ ಶಿವಾಜಿನಗರ ಠಾಣೆಯ ಪೊಲೀಸ್‌ ನಿರೀಕ್ಷಕರಿಗೆ ಶನಿವಾರ ಲಿಖೀತ ಪತ್ರದ ಮೂಲಕ ಬೇಡಿಕೆ ಇರಿಸಿದ್ದಾರೆ.

ಅದೇ ರೀತಿ ಮಾನಾ³ಡಾ ನಗರದ ಶ್ರಾವಸ್ತಿ ನಗರದಲ್ಲಿ ನಾಗರಿಕರೋರ್ವರ ಮನೆಯಿಂದ ಸುಮಾರು 300 ಲೀ. ನೀರು ಕಳ್ಳತನವಾಗಿದ್ದು, ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

ಟ್ಯಾಂಕರ್‌ ಮೂಲಕ ಕಳ್ಳತನ
ಅಂಬರ್‌ನಾಥ್‌ ಹಾಗೂ ಬದ್ಲಾಪುರದಲ್ಲಿಯ ಜಲಾಶಯದಿಂದ ನೀರು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಈ ಅಣೆಕಟ್ಟಿನಿಂದ ಕಲ್ಯಾಣ್‌ , ಡೊಂಬಿವಲಿ, ಉಲ್ಲಾಸ್‌ನಗರ, ನವಿಮುಂಬಯಿ, ಔದ್ಯೋಗಿಕ ಕ್ಷೇತ್ರ ಸೇರಿದಂತೆ ಪರಿಸರಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತದೆ. ಪ್ರಸಕ್ತ ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದಂತೆ ನೀರಿನ ಬೇಡಿಕೆಯು ಹೆಚ್ಚಾಗಲಾರಂಭಿಸಿದೆ. ಆದರೆ ಜಲಾಶಯಗಳಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿರುವುದು ಕಂಡುಬಂದಿದೆ. ಇದಕ್ಕೆ ಮುಖ್ಯ ಕಾರಣ ನಗರ ನಿವಾಸಿಗರ ನೀರಿನ ಸಂಕಟ ಪರಿಹರಿಸಲು ಹಣಕ್ಕಾಗಿ ಟ್ಯಾಂಕರ್‌ ಮಾಫಿಯಾಗಳ ವತಿಯಿಂದ ದಿನ ರಾತ್ರಿ ನೀರು ಕಳ್ಳತನ ಮಾಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next