Advertisement
ಮಧುಗಿರಿ ಬೆಟ್ಟದ ತಪ್ಪಲಿನಲ್ಲಿರುವ ಸಿಹಿನೀರಿನ ಬಾವಿ ಬಳಿಯ ಕಟ್ಟೆ ಹಾಗೂ ಇಸ್ಲಾಂಪುರದ ಹಿಂಭಾಗದಲ್ಲಿ ಸಿದ್ದರಕಟ್ಟೆ ರಾಜರ ಕಾಲದಲ್ಲಿ ನಿರ್ಮಿಸಿದ್ದಾಗಿದೆ. ಬೆಟ್ಟದ ಮೇಲಿನ ಕೋಟೆ ನಿರ್ಮಿಸಿದ ಕಾಲದಲ್ಲೇ ನೀರಿನ ಸೆಲೆ ಅರಿತು, ಈಗಿನ ಇಸ್ಲಾಂಪುರದಲ್ಲಿ ಶುದ್ಧ ಕುಡಿಯುವ ನೀರಿನ ಬಾವಿ, ಶಿರಾಗೇಟ್ ಬಳಿಯಿರುವ ಎರಡು ಕಲ್ಯಾಣಿಗಳನ್ನು ಪೂರ್ವಜರು ನಿರ್ಮಿಸಿದ್ದರು. ಈ ಕಟ್ಟೆಗಳಿಂದ ಜಿನುಗುತ್ತಿದ್ದ ನೀರು ಬಾವಿ ಹಾಗೂ ಕಲ್ಯಾಣಿಗಳಿಗೆ ಒಸರುತ್ತಿತ್ತು. ಇದು ಸುತ್ತಲೂ ನೆಲೆಸಿದ್ದ ಜನತೆಗೆ ನೀರಿನ ದಾಹ ತಣಿಸುತ್ತಿತ್ತು.
Related Articles
Advertisement
ಸ್ಮಶಾನಕ್ಕೆ ಪರ್ಯಾಯ ಭೂಮಿ ನೀಡಿ: ಪಟ್ಟಣದಲ್ಲಿ ಹಿಂದೂ ರುದ್ರಭೂಮಿ ಅವಶ್ಯಕತೆಯಿದ್ದು, ಈ ಭಾಗದ ಭೂಮಿಯಿಲ್ಲದವರು ಸಿದ್ದರಕಟ್ಟೆಯನ್ನೇ ಸ್ಮಶಾನವಾಗಿಸಿ ಕೊಂಡಿದ್ದಾರೆ. ಜನರಿಗೆ ಸ್ಮಶಾನ ಒದಗಿಸಿಕೊಡುವುದು ಸರ್ಕಾರದ ಕರ್ತವ್ಯವಾಗಿದ್ದು, ಜನರ ಮೂಲಭೂತ ಹಕ್ಕಾಗಿದೆ. ಇದರಿಂದಾಗಿ ಈಗ ಭೂಮಿಯಿಲ್ಲದೆ ಈ ಕಟ್ಟೆಯಲ್ಲಿ ಶವ ಸಂಸ್ಕಾರ ಮಾಡುತ್ತಿದ್ದು, ಕಟ್ಟೆಯ ಉಳಿವಿಗಾಗಿ ಸ್ಮಾಶಾನಕ್ಕೆ ಪರ್ಯಾಯ ಭೂಮಿ ನೀಡಬೇಕಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದಂತೆ ದೇವಸ್ಥಾನದ ಬದಲು ಶಾಲೆಗಳನ್ನು ನಿರ್ಮಿಸಬೇಕು ಎಂದು. ಅದೇ ರೀತಿಗೋರಿಗಳ ನಿರ್ಮಾಣದ ಬದಲು ಕಟ್ಟೆಯನ್ನು ಉಳಿಸಿದರೆ ಜೀವಜಲ ರಕ್ಷಿಸಿದಂತಾಗುತ್ತದೆ. ಇಲ್ಲಿನ ಪ್ರಸ್ತುತ ಸಂದರ್ಭದಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲು ಇದೇ ಬಲವಾದ ಕಾರಣ. ಕಟ್ಟೆಯೇ ಜೀವ ರಕ್ಷಕ: ಮಾನವನ ದುರಾಸೆಯಿಂದ ಪೂರ್ವಜರು ನಿರ್ಮಿಸಿದ ಕೆರೆ-ಕಟ್ಟೆಗಳು ನಾಶ ಮಾಡುತ್ತಿದ್ದು, ಇದರಿಂದ ಜಿನುಗುವ ನೀರು ಕೊಳವೆ ಬಾವಿ ಹಾಗೂ ಬಾವಿಗಳಿಗೆ ತಲುಪದೆ ಅಂತರ್ಜಲ ಕಾಣದಂತಾಗುತ್ತಿದೆ. ಇದನ್ನು ಪುನರ್ ನಿರ್ಮಿಸಿದರೆ ಸಿದ್ದರಕಟ್ಟೆಯಿಂದ ನೂರಾರು ಕೊಳವೆಬಾವಿ ಹಾಗೂ 2 ಕಲ್ಯಾಣಿಗಳಿಗೆ ಮರುಜೀವ ಬರಲಿದೆ. ಬೆಟ್ಟದ ಮೇಲಿಂದ ಬಿದ್ದ ನೀರು ಸ್ವಲ್ಪವೂ ವ್ಯರ್ಥವಾಗದೆ ಕಟ್ಟೆಯಲ್ಲಿ ನಿಂತಾಗ, ಇದರಿಂದ ಜಿನುಗುವ ನೀರಿಂದ ಪಟ್ಟಣದ ಜನತೆಗೆ ನೀರಿನ ಲಭ್ಯತೆ ಸಿಗಲಿದೆ. ನೈಸರ್ಗಿಕವಾದ ಜಲಸಂಗ್ರಾಹಾರಗಳನ್ನು ರಕ್ಷಣೆ ಮಾಡುವುದು ನಮ್ಮ ಮೊದಲ ಆದ್ಯತೆ. ಈಗಿರುವ ನೀರಿನ ಬಿಕ್ಕಟ್ಟಿಗೆ ಪರಿಹಾರ ಕಂಡುಹಿಡಿಯಬೇಕಿದೆ. ಆದ್ದರಿಂದ ಈ ಭೂಮಿ ಸಿದ್ದರಕಟ್ಟೆಯೆಂದೇ ದಾಖಲೆಯಲ್ಲಿದ್ದು, ಇದರ ಸಂರಕ್ಷಣೆ ನಮ್ಮ ಕರ್ತವ್ಯವಾಗಿದೆ. ಈ ಕಟ್ಟೆಯ ಅಭಿವೃದ್ಧಿಗಾಗಿ ಎಲ್ಲ ರೀತಿಯ ಕಾನೂನು ರೀತಿಯ ಕಾರ್ಯಕ್ಕೆ ಕ್ರಮ ವಹಿಸುತ್ತೇನೆ.
ನಂದೀಶ್, ತಹಶೀಲ್ದಾರ್ ನೀರಿನ ಸಮಸ್ಯೆಗೆ ಈ ಕಟ್ಟೆಗಳ ಅಭಿವೃದ್ಧಿ ಆಗಲೇಬೇಕು. ಇದರಿಂದ 2 ಕಲ್ಯಾಣಿ ಹಾಗೂ ಹತ್ತಾರು ಕೊಳವೆಬಾವಿಗಳು
ಮರುಜೀವ ಪಡೆಯಲಿವೆ. ಸಾರ್ವಜನಿಕರು ಹಾಗೂ ಶಾಸಕರು ಈ ಕಾರ್ಯಕ್ಕೆ ಬೆಂಬಲ ನೀಡಿದರೆ ಮುಂಬರುವ ವರ್ಷವೇ ಈ ಭಾಗದ ಎಲ್ಲ ಕೊಳವೆ ಬಾವಿಯಲ್ಲಿ ಹಾಗೂ ಕಲ್ಯಾಣಿಯಲ್ಲಿ ನೀರೂರುವಂತೆ ಮಾಡುತ್ತೇನೆ.
ಲೋಹಿತ್, ಪುರಸಭೆ ಮುಖ್ಯಾಧಿಕಾರಿ ಮಧುಗಿರಿ ಸತೀಶ್