Advertisement
ಜಲಮೂಲ ಬರಿದುಪಂಚಾಯತ್ ವ್ಯಾಪ್ತಿಯ ಸರಕಾರಿ, ಖಾಸಗಿ ಬಾವಿಗಳು ಬರಿದಾಗಿವೆ. ನೀರಿನ ಇಶ್ರಯದ ಸೀತಾ ನದಿ ಸಂಪೂರ್ಣ ಒಣಗಿದೆ. ಈ ವರ್ಷದ ಕಡುಬೇಸಗೆಗೆ ನಂದಿಕೋಣ ಗುಂಡಿಯೂ ಬತ್ತಿದೆ.
ಪ್ರಸ್ತುತ ಪಂಚಾಯತ್ ವತಿಯಿಂದ ಎರಡು ಟ್ಯಾಂಕರ್‌ಗಳಲ್ಲಿ ನೀರನ್ನು ಪೂರೈಸಲಾಗುತ್ತಿದೆ. ಪಂಚಾಯತ್ ಮಾಜಿ ಅಧ್ಯಕ್ಷ ಸಂತೋಷ್ ಹೆಗ್ಡೆ ಮಾರಾಳಿ ಅವರು ಸ್ವಂತ ಖರ್ಚಿನಿಂದ ಟ್ಯಾಂಕರ್ ನೀರು ವಿತರಿಸುತ್ತಿದ್ದಾರೆ. ಇವೆಲ್ಲದಕ್ಕೂ ಮಾರಾಳಿಯ ಶೇಖರ ಹೆಗ್ಡೆ ಮತ್ತು ಮಿತ್ಯಂತರ ಮನೆಯ ಬೋರ್‌ವೆಲ್ ನೀರೇ ಆಧಾರವಾಗಿದೆ. ಕೆಲವು ದಿನ ಗಳಲ್ಲಿ ಮಳೆ ಬಾರದಿದ್ದರೆ ಅದೂ ಸಹ ಖಾಲಿಯಾಗಲಿದೆ. ಅಣೆಕಟ್ಟು ವೈಫಲ್ಯ
ಮೀಯಾರು ಕಿಂಡಿ ಅಣೆಕಟ್ಟಿನ ವೈಫಲ್ಯ ಬಲು ದುಬಾರಿಯಾಗಿ ಪರಿಣಮಿಸಿದೆ. ಹಲಗೆ ಅಳವಡಿಸುವಲ್ಲಿನ ತಪ್ಪಿನಿಂದಾಗಿ ಅಮೂಲ್ಯವಾದ ನೀರು ಬಹುತೇಕ ಸೋರಿ ಹೋಗಿದೆ. ಪರಿಣಾಮ ಈಗ ಅಣೆಕಟ್ಟಿನಲ್ಲಿ ಒಂದು ಹನಿಯೂ ನೀರು ಉಳಿದಿಲ್ಲ.
Related Articles
ಪಂಚಾಯತ್ ವ್ಯಾಪ್ತಿಯ ಸರಕಾರಿ ಶಾಲೆಗಳಲ್ಲಿ ನೀರಿನ ತೀವ್ರ ಅಭಾವ ತಲೆದೋರಿದೆ. ಇದೇ ಸಮಸ್ಯೆಯಿಂದ ಆಂಗ್ಲ ಮಾಧ್ಯಮ ಶಾಲೆಯು ಜೂ.10ರ ವರೆಗೆ ಮುಂದೂಡಲ್ಪಟ್ಟಿದೆ.
Advertisement
ಫೈಬರ್ ಹಲಗೆ ಅಳವಡಿಸಿಮಿಯಾರು ಕಿಂಡಿಅಣೆಕಟ್ಟಿನಲ್ಲಿ ಮರದ ಹಲಗೆ ಅಳವಡಿಸುವುದರಿಂದ ನೀರು ಸಂಪೂರ್ಣ ಸೋರಿ ಹೋಗುತ್ತದೆ. ಪರಿಣಾಮ ಇಷ್ಟೊಂದು ನೀರಿನ ಸಮಸ್ಯೆ ಎದುರಾಗಿದೆ. ಆದ್ದರಿಂದ ಮುಂದಿನ ವರ್ಷ ಫೈಬರ್ ಹಲಗೆ ಅಳವಡಿಸುವುದು ಅತ್ಯಗತ್ಯ.
ಜತೆಗೆ ಜಲಾನಯನ ಇಲಾಖೆಯಿಂದ ನಿರ್ಮಿಸಿದ ಚಿಕ್ಕ ಕಿಂಡಿ ಅಣೆಕಟ್ಟುಗಳ ನಿರ್ವಹಣೆಯೂ ಅಗತ್ಯ.
-ಸಂತೋಷ್ ಹೆಗ್ಡೆ ಮಾರಾಳಿ, ಪಂಚಾಯತ್ ಮಾಜಿ ಅಧ್ಯಕ್ಷ