ಉಳ್ಳಾಲ: ಅತಿ ಹೆಚ್ಚು ಮಳೆ ಬೀಳುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೆರಡು ತಿಂಗಳಿನಿಂದ ನೀರಿಗೆ ತಾತ್ವಾರ ಎದುರಾಗಿದ್ದು, ನೀರಿನ ಮೂಲಗಳು ಬತ್ತಿ ಹೋಗಿವೆ. ಹೀಗಾಗಿ ಬತ್ತಿ ಹೋಗಿರುವ ಬೋರ್‌ವೆಲ್ಗಳಲ್ಲಿ ವೈಜ್ಞಾನಿಕವಾಗಿ ಜಲ ಮರುಪೂರಣ ಮಾಡುವ ಬಗ್ಗೆ ಇತ್ತೀಚೆಗೆ ಚಿತ್ರದುರ್ಗದ ಜಲತಜ್ಞ ಎನ್.ಜೆ. ದೇವರಾಜ್ ರೆಡ್ಡಿ ಅವರು ಪಾವೂರಿನ ಇನೊಧೀಳಿಯ ಕಿಶೋರ್ ಶೆಟ್ಟಿ ಎಂಬುವವರೂ ಮನೆಯ ಬೋರ್ ವೆಲ್‌ನ ಜಲ ಮರುಪೂರಣ ಮಾಡುವ ಬಗ್ಗೆ ಪ್ರ್ಯಾತ್ಯಕ್ಷಿಕೆ ನೀಡಿದರು.
ಎನ್.ಜೆ. ದೇವರಾಜ್ ರೆಡ್ಡಿ ಅವರು ಮೂರು ದಶಕಗಳಿಂದ ಸುಮಾರು 25,000 ಹೆಚ್ಚು ಬೋರ್‌ವೆಲ್ ಮರುಪೂರಣ ಮಾಡಿ ನಾಡಿಗೆ ಜಲ ಸಾಕ್ಷರತೆಯ ಜಾಗೃತಿಯ ಮೂಲಕ ಯಶಸ್ವಿಯಾಗಿದ್ದಾರೆ.
ಜಿಲ್ಲೆಯ ಭೂಮಿಯೂ ಗ್ರಾನೆಟಿಕ್ ರಾಕ್‌ನಿಂದಾಗಿ ಶೇ. 90 ರಷ್ಟು ಕೊಳವೆ ಬಾವಿಗಳ ಅಂತರ್ಜಲ ಕುಸಿತಗೊಂಡಿದೆ. ಹೀಗಾಗಿ 3,000 ಮೀ.ಮೀ. ಮಳೆ ಬಂದರೂ ಕೂಡ ಕೊಳವೆ ಬಾವಿಯಲ್ಲಿ ಅಂತರ್ಜಲ ಬತ್ತಿಹೋಗಿರುತ್ತದೆ. ಕಲ್ಲಿನ ಸೀಳಿನಲ್ಲಿ ಸಂಗ್ರಹವಾಗಿರುವ ಅಂತರ್ಜಲ ತಕ್ಷಣ ಹೆಚ್ಚಿಸಲು ಕೊಳವೆಬಾವಿಗಳಿಗೆ ಮಳೆ ನೀರಿನಿಂದ ಹರಿದು ಹೋಗುವ ನೀರನ್ನು ವೈಜ್ಞಾನಿಕವಾಗಿ ಮರುಪೂರಣ ನಡೆಸಿದರೆ ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯ ಎನ್ನುತ್ತಾರೆ ದೇವರಾಜ್ ರೆಡ್ಡಿ.
ಜಲ ಮರುಪೂರಣಕ್ಕಾಗಿ ಕೊಳವೆ ಬಾವಿಯ ಸುತ್ತ 10 ಅಡಿ ಇಂಗು ಗುಂಡಿ ರಚಿಸಿ ಬೋರ್‌ವೆಲ್‌ನ ಐದು ಅಡಿ ಪೈಪ್‌ಗೆ 3 ಇಂಚು ಅಂತರದ 120ರಷ್ಟು ರಂಧ್ರಗಳನ್ನು ಹಾಕಿ ಮೂರು ಫಿಲ್ಟರ್ ಹಾಕಬೇಕು. ಇಂಗುಗುಂಡಿಗೆ ಅರ್ಧದಷ್ಟು ಕಲ್ಲು ತುಂಬಬೇಕು. ಎಚ್‌ಡಿಪಿ ನೆಟ್ ಹಾಸಿ ಆದರ ಮೇಲ್ಭಾಗದಲ್ಲಿ ಇದ್ದಿಲು ಬಳಸಬೇಕು. ಮೇಲ್ಭಾಗದಲ್ಲಿ ಮರಳು ಅಥವಾ 6ಎಂಎಂ ಗಾತ್ರದ ಜಲ್ಲಿಕಲ್ಲು ಬಳಸಬಹುದು. ಕೊಳವೆ ಬಾವಿಯ ಮರುಪೂರಣದ ಗುಂಡಿಗೆ ನೇರವಾಗಿ ಮಳೆ ನೀರನ್ನು ಹಾಯಿಸದೆ ಸುತ್ತಲೂ ಇಂಗು ಗುಂಡಿಗಳನ್ನು ತೆಗೆದು ಅದರಲ್ಲಿ ಬರುವ ಕಸಕಡ್ಡಿಗಳನ್ನು ಸೋಸಿ ಉತ್ತಮ ನೀರು ಮರುಪೂರಣಗುಂಡಿಗೆ ಬರುವ ರೀತಿಯಲ್ಲಿ ನಡೆಸಿದರೆ ಉತ್ತಮ ಎನ್ನುತ್ತಾರೆ ದೇವರಾಜ್.
ಬೋರ್‌ವೆಲ್ ಮರು
ಪೂರಣವಾಗಲಿ
ಪಾವೂರಿನಲ್ಲಿ ನಡೆಸಿರುವ ಬೋರ್‌ವೆಲ್ ಮರುಪೂರಣವನ್ನು ಮಾದರಿಯನ್ನಾಗಿಸಿ ಉಳಿದ ಕಡೆ ಮರುಪೂರಣ ನಡೆಸುವ ಕಾರ್ಯಕ್ಕೆ ಚಾಲನೆ ನೀಡಬೇಕು. ಚಿತ್ರದುರ್ಗದ ಜಿ.ಪಂ. ಕ್ಷೇತ್ರದಲ್ಲಿ ನರೇಗಾ ಯೋಜನೆಯಡಿ ಇಂತಹ 5,000 ಬೋರ್‌ವೆಲ್ ಮರುಪೂರಣ ನಡೆಸಿ ಯಶಸ್ವಿಯಾಗಿದ್ದು ಇದಕ್ಕೆ ರಾಷ್ಟ್ರೀಯ ಪುರಸ್ಕಾರವೂ ಲಭಿಸಿದೆ.
– ಎನ್.ಜೆ. ದೇವರಾಜ್ ರೆಡ್ಡಿ,ಜಲತಜ್ಞ, ಜಿಯೋ ರೈನ್ ವಾಟರ್
ಬೋರ್ಡ್
ವೈಜ್ಞಾನಿಕ ಮರುಪೂರಣ ಸಾಧ್ಯ
11 ವರ್ಷಗಳಿಂದ ಇಲ್ಲಿ ಕೃಷಿಯನ್ನು ನಡೆಸುತ್ತಿದ್ದು, ಮೂರು ಕೊಳವೆಬಾವಿ ತೆಗೆಸಿದರೂ ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಯಿತು. ಇನ್ನು ಕೊಳವೆ ಬಾವಿಗೆ ಪರ್ಯಾಯ ಚಿಂತನೆ ನಡೆಸಿ ಅಂತರ್ಜಾಲದಲ್ಲಿ ತಡಕಾಡಿದಾಗ ಜಿಯೋ ರೈನ್ ವಾಟರ್ ಬೋರ್ಡ್‌ನ ದೇವರಾಜ ರೆಡ್ಡಿಯ ಕುರಿತಾದ ಮಾಹಿತಿ ತಿಳಿಯಿತು. ಅವರನ್ನು ಸಂಪರ್ಕಿಸಿದ್ದು ಇದೀಗ ವೈಜ್ಞಾನಿಕವಾಗಿ ಬೋರ್‌ವೆಲ್ ಮರುಪೂರಣ ನಡೆಸುತ್ತಿದ್ದೇವೆ.
– ಕಿಶೋರ್ ಶೆಟ್ಟಿ, ಇನೋಳಿ ನಿವಾ ಸಿ, ಜಲತಜ್ಞ, ಜಿಯೋ ರೈನ್ ವಾಟರ್ ಬೋರ್ಡ್