Advertisement

ನೀರಿನ ಕೊರತೆ, ರೇಷ್ಮೆಗೂಡು ಉತ್ಪಾದನೆ ಪಾತಾಳಕ್ಕೆ

02:58 PM Apr 26, 2019 | pallavi |

ಚಿಕ್ಕಬಳ್ಳಾಪುರ: ರಾಜ್ಯದ ಹಲವೆಡೆ ಮುಂಗಾರು ಶುಭಾರಂಭ ಮಾಡಿ ಬಿಸಿಲಿನ ಆರ್ಭಟ ತಗ್ಗಿದರೂ ಬರಪೀಡಿತ ಚಿಕ್ಕಬಳ್ಳಾಪುರ ಜಿಲ್ಲೆಯ ಪಾಲಿಗೆ ಮಾತ್ರ ಮುಂಗಾರು ಇನ್ನೂ ಮರೀಚಿಕೆಯಾಗಿದ್ದು, ಇದರ ಪರಿಣಾಮ ರೈತರ ಸ್ವಾವಲಂಬಿ ಬದುಕಿಗೆ ಆಧಾರ ವಾಗಿರುವ ರೇಷ್ಮೆ ಕೃಷಿಗೆ ಪೆಟ್ಟು ಬಿದ್ದಿದೆ.

Advertisement

ರೇಷ್ಮೆ ರೈತರು ಚಿಂತೆಗೀಡು: ಜಿಲ್ಲೆಯಲ್ಲಿ ಬಿಸಿಲಿನ ಆರ್ಭಟ ಒಂದೆಡೆಯಾದರೆ, ಮತ್ತೂಂದೆಡೆ ಕೃಷಿಗೆ ಆಶ್ರಯವಾಗಿರುವ ಕೊಳವೆ ಬಾವಿಗಳು ಒಂದರ ಹಿಂದೆ ಒಂದು ಬತ್ತಿ ಹೋಗಿ ರೈತರಿಗೆ ಕೈ ಕೊಡುತ್ತಿರುವ ಪರಿಣಾಮ ಜಿಲ್ಲೆಯಲ್ಲಿ ರೇಷ್ಮೆ ಕೃಷಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಬಿಸಿಲಿನ ಆರ್ಭಟದ ಜೊತೆ ನೀರಿನ ಕೊರತೆಗೆ ಈಗ ಜಿಲ್ಲೆಯಲ್ಲಿ ರೇಷ್ಮೆಗೂಡಿನ ಉತ್ಪಾದನೆ ಅರ್ಧಕ್ಕೆ ಅರ್ಧ ಕುಸಿತಗೊಂಡಿರುವುದು ರೇಷ್ಮೆ ಬೆಳೆಗಾರರನ್ನು ಚಿಂತೆ ಗೀಡು ಮಾಡಿದೆ.

ದಾಖಲೆ ಪ್ರಮಾಣದಲ್ಲಿ ಕುಸಿತ: ಜಿಲ್ಲೆಯ ರೈತರು ಎಷ್ಟೇ ಬರ ಇದ್ದರೂ ಹೈನೋದ್ಯಮ ಹಾಗೂ ರೇಷ್ಮೆ ಕೃಷಿಯಿಂದ ಬದುಕಿನ ಬಂಡಿ ಮುನ್ನಡೆಸುತ್ತಿದ್ದರೂ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಅಂತರ್ಜಲ ಬಳಕೆ ಹೆಚ್ಚಾಗಿ ಕೊಳವೆ ಬಾವಿಗಳು ಸದ್ದು ನಿಲ್ಲಿಸುತ್ತಿರುವ ಪರಿಣಾಮ ನೀರಿನ ಕೊರತೆ ಎದುರಾಗಿ ಈಗ ಕೃಷಿ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಹೀಗಾಗಿ ಜಿಲ್ಲೆ ಯಲ್ಲಿ ಕಳೆದ 10 ವರ್ಷಗಳಿಗೆ ಹೋಲಿಸಿಕೊಂಡರೆ ಈ ಬಾರಿ ರೇಷ್ಮೆಗೂಡು ಉತ್ಪಾದನೆಯಲ್ಲಿ ದಾಖಲೆ ಪ್ರಮಾಣದಲ್ಲಿ ಕುಸಿದಿರುವುದು ರೇಷ್ಮೆ ಇಲಾಖೆಯನ್ನು ತಲ್ಲಣಗೊಳಿಸಿದೆ.

ಅರ್ಧಕ್ಕೆ ಅರ್ಧ ಉತ್ಪಾದನೆ ಕುಸಿತ: ಜಿಲ್ಲೆಯಲ್ಲಿ ಬೇಸಿಗೆ ಅವಧಿಯಲ್ಲಿ ಕೂಡ 50 ರಿಂದ 60 ಟನ್‌ ರೇಷ್ಮೆ ಗೂಡು ಪ್ರತಿ ದಿನ ಉತ್ಪಾದನೆ ಆಗುತ್ತಿತ್ತು. ಆದರೆ ಈ ವರ್ಷ ಬರದ ಜಿಲ್ಲೆಗೆ ಬಿಸಿಲಿನ ಆರ್ಭಟ ಸಾಕಷ್ಟು ಅಪ್ಪಳಿಸಿರುವುದರ ಪರಿಣಾಮ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಸಹ ಕುಸಿಯಲಾರಂಭಿಸಿರುವುದ ರಿಂದ ಈ ವರ್ಷ ಜಿಲ್ಲೆಯಲ್ಲಿ ನಿತ್ಯ ಮಾರುಕಟ್ಟೆಗೆ ಬರುತ್ತಿದ್ದ 50 ರಿಂದ 60 ಟನ್‌ ರೇಷ್ಮೆ ಗೂಡು ಈಗ 25 ರಿಂದ 30 ಟನ್‌ ಹಂತಕ್ಕೆ ಬಂದಿದೆ.

ಇದಕ್ಕೆ ಮುಖ್ಯ ಕಾರಣ ಒಂದು ಬಿಸಿಲಾದರೆ ಮತ್ತೂಂದೆಡೆ ನೀರಿನ ಕೊರತೆ ಹೆಚ್ಚಾಗಿರುವುದೇ ಕಾರಣ ಎಂದು ಜಿಲ್ಲೆಯ ರೈತರು ಮಾತನಾಡಿಕೊಳ್ಳುತ್ತಿ ದ್ದಾರೆ. ಈ ವರ್ಷ ಬೇಸಿಗೆಯಲ್ಲೂ ಜಿಲ್ಲೆಯಲ್ಲಿ ಲಕ್ಷಾಂ ತರ ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗಿ ರುವುದರಿಂದ ತಮ್ಮ ಹೊಲದಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದ ರೈತಾಪಿ ಜನ ಈಗ ಕೆಲಸ ಆರಿಸಿ ಬೇರೆಯವರಿಗೆ ಕೂಲಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಸಾಕಾಣಿಕೆ ಮೇಲೆ ದುಷ್ಪರಿಣಾಮ: ಎಷ್ಟೇ ಬರಗಾಲ ಬಂದರೂ ಕೊಳವೆ ಬಾವಿಗಳಲ್ಲಿ ಬರುತ್ತಿದ್ದ ನೀರನ್ನು ಆಶ್ರಯಿಸಿಕೊಂಡು ರೈತರು ರೇಷ್ಮೆ ಬೆಳೆಯುತ್ತಿದ್ದರು. ಆದರೆ ಕೊಳವೆ ಬಾವಿಗಳು ಕೈ ಕೊಡುತ್ತಿರುವುದರಿಂದ ರೇಷ್ಮೆ ಬೆಳೆಗಾರರಿಗೆ ದಿಕ್ಕು ತೋಚದಂತಾಗಿದೆ. ಬಿಸಿಲಿನ ಆರ್ಭಟ ಹೆಚ್ಚಾಗಿರುವುದರಿಂದ ರೇಷ್ಮೆಹುಳ ಸಾಕಾಣಿಕೆ ಮೇಲೆ ದುಷ್ಪರಿಣಾಮ ಬೀರಿ ರೇಷ್ಮೆಗೂಡು ಉತ್ಪಾದನೆಯಲ್ಲಿ ಭಾರೀ ಕುಸಿತವಾಗಿದೆ.

ಒಟ್ಟಿನಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಸಾವಿರಾರು ಕುಟುಂಬಗಳು ರೇಷ್ಮೆ ಕೃಷಿಯನ್ನೇ ಅವಲಂಬಿಸಿ ಹಿಪ್ಪುನೇರಳೆ ಸೊಪ್ಪು ಖರೀದಿಸಿ ರೇಷ್ಮೆಹುಳ ಸಾಕಿ ಗೂಡು ಬೆಳೆಯುತ್ತಿರುವುದನ್ನೇ ಕಾಯಕ ಮಾಡಿ ಕೊಂಡಿದ್ದರೂ ಬರದ ಕಾರ್ಮೋಡಕ್ಕೆ ತತ್ತರಿಸುತ್ತಿರುವ ರೇಷ್ಮೆ ಬೆಳೆಗಾರರು, ಒಂದೆಡೆ ಹವಾಮಾನ ವೈಪರೀತ್ಯ, ಮಳೆ ಕೊರತೆ ಹಾಗೂ ಬಿಸಿಲಿನ ಬೇಗುದಿ ಮತ್ತು ನೀರಾವರಿ ಕೊರತೆಯಿಂದ ರೇಷ್ಮೆಗೂಡಿನ ಉತ್ಪಾದನೆ ಯಲ್ಲಿ ಭಾರೀ ಕುಸಿತಗೊಂಡು ಜೀವನ ನಿರ್ವಹಣೆಗೆ ಸಂಕಷ್ಟ ಎದುರಿಸುತ್ತಿದ್ದಾರೆ.

19,500 ಹೆಕ್ಟೇರ್‌ ಪ್ರದೇಶದಲ್ಲಿ ರೇಷ್ಮೆ ಬೆಳೆ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬರೋಬ್ಬರಿ 19,500 ಹೆಕ್ಟೇರ್‌ ಪ್ರದೇಶದಲ್ಲಿ ರೇಷ್ಮೆ ಕೃಷಿ ಮಾಡಲಾಗು ತ್ತಿದೆ. ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದ ಬಳಿಕ ಯೋಜನೆಯಡಿ ಜಿಲ್ಲಾದ್ಯಂತ ಸುಮಾರು ಒಂದೂವರೆ ವರ್ಷದಲ್ಲಿ 1,500 ರಿಂದ 2,000 ಹೆಕ್ಟೇರ್‌ ಪ್ರದೇಶದಲ್ಲಿ ರೇಷ್ಮೆ ಬೆಳೆ ವಿಸ್ತರಿಸಲಾಗಿದೆ. ಆ ಪೈಕಿ ರೇಷ್ಮೆಗೂಡು ಉತ್ಪಾದನೆಯಲ್ಲಿ ಶಿಡ್ಲಘಟ್ಟ, ಚಿಂತಾಮಣಿ ತಾಲೂಕುಗಳು ಜಿಲ್ಲೆಯಲ್ಲಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿ, ಗೌರಿಬಿದನೂರು ತಾಲೂಕು ಮೂರನೇ ಸ್ಥಾನ, ದ್ರಾಕ್ಷಿ ನಾಡು ಚಿಕ್ಕಬಳ್ಳಾಪುರ ತಾಲೂಕು ನಾಲ್ಕನೇ ಸ್ಥಾನ ದಲ್ಲಿದೆ. ಆದರೂ ಸತತ ಬರಗಾಲ, ಹವಾಮಾನ ವೈಪರೀತ್ಯದಿಂದ ಈಗ ರೇಷ್ಮೆಗೂಡು ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ ಗೂಡು ಉತ್ಪಾದನೆ ಕುಸಿಯ ಲಾರಂಭಿಸಿ ರೇಷ್ಮೆ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುವಂತಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next