Advertisement
ಮುಂಗಾರು ಮಳೆ ವೈಫಲ್ಯವಾದ ಹಿನ್ನೆಲೆಯಲ್ಲಿ ತಿರುಮಲದ ಸುತ್ತಲಿನ ಪಾಪ ವಿನಾಶನಂ, ಗೋಗರ್ಭ, ಆಕಾಶ ಗಂಗಾ, ಕುಮಾರಧಾರ -ಪಶುಪುಧಾರಾ ಸೇರಿ ಹಲವು ಅಣೆಕಟ್ಟುಗಳು ಕ್ರಮೇಣ ಡೆಡ್ ಸ್ಟೋರೇಜ್‌ಗೆ ಇಳಿಯಲಿವೆ. ಈ ಅಣೆಕಟ್ಟುಗಳಲ್ಲಿ ಈಗ 173 ಕೋಟಿ ಲೀ.ನಷ್ಟು ನೀರಿದೆ. ನಿತ್ಯ ತಿರುಮಲಕ್ಕೆ 1.58 ಕೋಟಿ ಲೀ. ನೀರು ಅಗತ್ಯವಿದೆ.ತಿರುಮಲಕ್ಕೆ ಪ್ರಮುಖ ಜಲಮೂಲ ವಾಗಿರುವ ಕಲ್ಯಾಣಿ ಅಣೆಕಟ್ಟಿನಲ್ಲೂ ಪ್ರಸ್ತುತ 212 ಕೋಟಿ ಲೀ. ನೀರು ಲಭ್ಯವಿ ದೆ. ಹಾಗಾಗಿ ಮಿತವಾಗಿ ನೀರು ಬಳಸಿದರೂ 130 ದಿನಗಳಷ್ಟು ಮಾತ್ರ ಲಭ್ಯವಿರಲಿದೆ. ಆದ್ದರಿಂದ ತಿರುಮಲದ ಜನತೆ ಮಿತವಾಗಿ ನೀರು ಬಳಸಬೇ ಕೆಂದು ಟಿಟಿಡಿ ಮನವಿ ಮಾಡಿದೆ.