Advertisement

ಜಲಮೂಲಗಳಿಗೆ ತ್ಯಾಜ್ಯ ನೀರು ಹರಿಸಿದರೆ ಕ್ರಿಮಿನಲ್‌ ಕೇಸ್‌

12:04 PM Aug 05, 2017 | Team Udayavani |

ಬೆಂಗಳೂರು: ನಗರದಲ್ಲಿರುವ ಯಾವುದೇ ಕಾರ್ಖಾನೆಯಾಗಲಿ, ಅಪಾರ್ಟ್‌ಮೆಂಟ್‌ ಆಗಲಿ ರಾಜ್ಯ ಮಾಲಿನ್ಯ ನಿಯಂತ್ರಣ ವಿಧಿಸಿರುವ ಷರತ್ತುಗಳನ್ನು ಮೀರಿ ತ್ಯಾಜ್ಯ ನೀರನ್ನು ಕಾಲುವೆಗಳು, ಕೆರೆಗಳು ಅಥವಾ ಇನ್ನಿತರ ಜಲ ಮೂಲಗಳಿಗೆ ಹರಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಅಂತಹವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವುದಾಗಿ ಮಂಡಳಿ ಎಚ್ಚರಿಕೆ ನೀಡಿದೆ. 

Advertisement

ನಗರದ ಹಲವಾರು ಭಾಗಗಳಲ್ಲಿ ಅನಧಿಕೃತವಾಗಿ ತ್ಯಾಜ್ಯ ನೀರು ಹಾಗೂ ಕಾರ್ಖಾನೆ ಕಲುಷಿತ ನೀರನ್ನು ಕಾಲುವೆಗಳು ಹಾಗೂ ಕೆರೆಗಳಿಗೆ ರಾತ್ರಿ ವೇಳೆ ಹರಿಸುತ್ತಿರುವ ಕುರಿತು ದೂರುಗಳು ಬಂದಿವೆ. ದೂರುಗಳನ್ನು ಮಂಡಳಿ ಗಂಭೀರವಾಗಿ ಪರಿಗಣಿಸಿದ್ದು, ಜಲಮೂಲಗಳಿಗೆ ತೊಂದರೆಯನ್ನುಂಟು ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುತ್ತದೆ. 

ಜಲ ಮಾಲಿನ್ಯ (ನಿಯಂತ್ರಣ ಮತ್ತು ನಿವಾರಣಾ) ಕಾಯ್ದೆ 1974ರ ಅನ್ವಯ ಜಲ ಮೂಲಗಳಿಗೆ ಅನಧಿಕೃತವಾಗಿ ಕಲುಷಿತ ನೀರು ಹರಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಹೀಗಾಗಿ ಮಂಡಳಿಯಿಂದ ವಿಧಿಸಿರುವ ನಿಯಮಗಳಿಗಳನ್ನು ಪಾಲಿಸಿ ಶುದ್ಧೀಕರಿಸಿ ನಂತರದಲ್ಲಿ ನೀರುನ್ನು ಹರಿಸಬೇಕಾಗುತ್ತದೆ. ಒಂದೊಮ್ಮೆ ಯಾವುದೇ ಕಾರ್ಖಾನೆಯಾಗಲಿ, ವಸತಿ ಸಮುತ್ಛಯವಾಗಲಿ ನಿಯಮಗಳು ಉಲ್ಲಂ ಸಿರುವುದು ಕಂಡು ಬಂದರೆ ಅಂತವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಅವಕಾಶವಿದೆ.

ಒಂದೊಮ್ಮೆ ಅಪರಾಧ ಸಾಬೀತಾದರೆ ನಿಯಮ ಉಲ್ಲಂ ಸಿದವರು ಜೈಲು ಶಿಕ್ಷೆ ಅನುಭವಿಸಲಿದ್ದಾರೆ. ಮಂಡಳಿಯಿಂದ ಈಗಾಗಲೇ ಕಾರ್ಖಾನೆಗಳು, ಸಂಯುಕ್ತ ಶುದ್ಧೀಕರಣ ಘಟಕಗಳು ಹಾಗೂ ವಸತಿ ಮತ್ತು ವಾಣಿಜ್ಯ ಸಮುತ್ಛಯಗಳಿಗೆ ತ್ಯಾಜ್ಯ ನೀರು ಹರಿಸುವಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತು ನೋಟಿಸ್‌ ನೀಡಲಾಗಿದೆ.

ಇದರೊಂದಿಗೆ ಅನಧಿಕೃವಾಗಿ ತ್ಯಾಜ್ಯ ನೀರು ಹರಿಸುವಂತವರ ವಿರುದ್ಧ ಕ್ರಮಕೈಗೊಳ್ಳಲು ಮಂಡಳಿಯ ಅಧಿಕಾರಿಗಳು ರಾತ್ರಿ ಸಮಯ ಗಸ್ತು ನಡೆಸುವುದು ತೀವ್ರಗೊಳಿಸಲಾಗಿದೆ. ನಗರದ ಜಲಮೂಲಗಳನ್ನು ಸಂರಕ್ಷಣೆ ಮಾಡುವುದು ನಗರದ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಮಂಡಳಿಯಿಂದ ಕೈಗೊಳ್ಳು ಕಾರ್ಯಕ್ರಮಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮಂಡಳಿ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next