Advertisement
ಕುಕ್ಕುಂದೂರು ಗ್ರಾಮದ ಅಯ್ಯಪ್ಪ ನಗರ ನಿವಾಸಿ ಎನ್. ಶಿವಾನಂದ ಪ್ರಭು ಅವರು ಕಳೆದ ವರ್ಷದಿಂದ ಮನೆ ಛಾವಣಿ ನೀರನ್ನು ಬಾವಿಗೆ ಹರಿಸುವ ಮೂಲಕ ಮಳೆಕೊಯ್ಲು ನಡೆಸುತ್ತಿದ್ದಾರೆ. ಹೀಗಾಗಿ ಕಳೆದ ಕಡುಬೇಸಗೆಯಲ್ಲೂ ಕೂಡ ಬಾವಿಯಲ್ಲಿ ನೀರು ಬತ್ತಿಲ್ಲ. ಮನೆ ಪರಿಸರದಲ್ಲಿನ ತರಕಾರಿ, ಹೂವಿನ ಗಿಡಗಳಿಗೂ ಬಾವಿಯೇ ನೀರಿನ ಮೂಲವಾಗಿದ್ದು ನೀರಿಗಾಗಿ ಪರಿತಪಿಸುವಂತಹ ಸಂದರ್ಭ ಒದಗಿಬಂದಿಲ್ಲ
ಉದಯವಾಣಿಯ ಅಭಿಯಾನ ಮನೆ ಮನೆಗೆ ಮಳೆಕೊಯ್ಲು ಜಲ ಸಾಕ್ಷರತೆಯೊಂದಿಗೆ ಜಾಗೃತಿ ಮೂಡಿಸುತ್ತಿದೆ. ಪತ್ರಿಕೆಯ ಸಾಮಾಜಿಕ ಕಳಕಳಿ ಅನೇಕರಿಗೆ ಪ್ರೇರಣೆ ಒದಗಿಸಿಕೊಟ್ಟಿದೆ.
-ಎನ್. ಶಿವಾನಂದ ಪ್ರಭು,ಅಯ್ಯಪ್ಪ ನಗರ ಮಳೆ ಕೊಯ್ಲು ಇಂದಿನ ಅಗತ್ಯ
ಮಳೆಕೊಯ್ಲು ಇಂದಿನ ದಿನಗಳಲ್ಲಿ ತೀರಾ ಅವಶ್ಯ. ಸುಲಭ ವಿಧಾನದಲ್ಲಿ ಮಳೆಕೊಯ್ಲು ಮಾಡಬಹುದಾಗಿದ್ದು, ಎಲ್ಲರೂ ಮಳೆಕೊಯ್ಲಿಗೆ ಪ್ರಾಧಾನ್ಯತೆ ನೀಡಿದಲ್ಲಿ ಮುಂದಿನ ಬೇಸಗೆಯಲ್ಲಿ ನೀರಿನ ಕೊರತೆ ಅಷ್ಟಾಗಿ ಕಾಡದು. ನಾವು ಕಳೆದ ವರ್ಷ ಮನೆ ಛಾವಣಿ ನಿರ್ಮಾಣದ ವೇಳೆ ಪೈಪು ಅಳವಡಿಸಿ ನೀರು ನೇರವಾಗಿ ಬಾವಿಗೆ ಹರಿಯುವಂತೆ ಮಾಡಿದ್ದೇವೆ.
-ಪೂರ್ಣಿಮಾ ಪ್ರಭು,ಅಯ್ಯಪ್ಪನಗರ, ಶಿಕ್ಷಕಿ
Related Articles
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿರುವುದು ಗಮನಕ್ಕೆ ಬಂದಿದೆ. ಇನ್ನಷ್ಟು ಮಂದಿಯನ್ನು ಜಲ ಸಂರಕ್ಷಣೆ ಯತ್ತ ತೊಡಗಿಸಲು, ನಿಮ್ಮ ಮನೆಯಲ್ಲಿ ಕೈಗೊಂಡ ಮಳೆ ಕೊಯ್ಲು ವ್ಯವಸ್ಥೆಯ ಕುರಿತು ವಿವರಿಸಿ, ಫೋಟೋ ವಾಟ್ಸಪ್‌ನಲ್ಲಿ ಕಳುಹಿಸಿ. ಅವುಗಳನ್ನು ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ.
7618774529
Advertisement