Advertisement

ಕಡಪಟ್ಟಿ ಶಾಲೆಯೊಳಗೆ ನೀರು-ಪ್ರತಿಭಟನೆ

08:36 AM Jul 19, 2019 | Team Udayavani |

ಕುಂದಗೋಳ: ಪ್ರತಿ ಮಳೆಗಾಲದಲ್ಲಿ ತಾಲೂಕಿನ ಕಡಪಟ್ಟಿ ಗ್ರಾಮದ ಸಹಿಪ್ರಾ ಶಾಲೆಯೊಳಗೆ ಪದೇ ಪದೇ ಚರಂಡಿ ನೀರು ನುಗ್ಗುತ್ತಿದೆ. ಅಲ್ಲದೆ ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿ ಇರುವುದರಿಂದ ಮುಂದಾಗುವ ಅನಾಹುತಗಳನ್ನು ತಪ್ಪಿಸಲು ಸಾಕಷ್ಟು ಬಾರಿ ಬಿಇಒಗೆ ಮನವಿ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ಆರೋಪಿಸಿ ಎಸ್‌ಡಿಎಂಸಿ ಸದಸ್ಯರು, ಪಾಲಕರು ಮತು ವಿದ್ಯಾರ್ಥಿಗಳು ಶಾಲೆಗೆ ಬೀಗ ಹಾಕಿ ಗುರುವಾರ ಪ್ರತಿಭಟಿಸಿದರು.

Advertisement

ಬುಧವಾರ ರಾತ್ರಿ ಸುರಿದ ಮಳೆಯಿಂದ ಶಾಲೆ ಆವರಣ ನೀರು ತುಂಬಿ ಹೊಂಡದಂತಾಗಿದ್ದ, ಕೊಠಡಿಯೊಳಗೂ ನೀರು ನುಗ್ಗಿದ್ದರಿಂದ ಮಕ್ಕಳು ಗುರುವಾರ ಶಾಲೆಗೆ ಬಂದಾಗ ಹೊರಗೆ ನಿಲ್ಲುವ ಸ್ಥಿತಿ ಎದುರಾಗಿತ್ತು. ಇದು ಶಾಲಾ ಸುಧಾರಣಾ ಸಮಿತಿ ಸದಸ್ಯರು ಹಾಗೂ ಪಾಲಕರ ಕೆಂಗಣ್ಣಿಗೆ ಗುರಿಯಾಯಿತು. ಶಾಲೆಯಲ್ಲಿನ ಕೊಠಡಿಗಳು ಸೋರುತ್ತಿದ್ದು, ವಿದ್ಯಾರ್ಥಿಗಳು ರಸ್ತೆಬದಿಯಲ್ಲೇ ಕುಳಿತು ಪ್ರತಿಭಟಿಸಿದರು.

ಕೊಠಡಿಗಳ ದುರಸ್ತಿ ಹಾಗೂ ಮಳೆ ನೀರು ಶಾಲೆಗೆ ನುಗ್ಗದಂತೆ ತಡೆಯುವವರೆಗೂ ಶಾಲಾ ಬಾಗಿಲು ತೆರೆಯಬಾರದೆಂದು ಸಮಿತಿಯವರು ಹಾಗೂ ಪಾಲಕರು ಪಟ್ಟುಹಿಡಿದ್ದಾರೆ. ಮಧ್ಯಾಹ್ನದ ಬಿಸಿಯೂಟ, ಹಾಲು ವಿತರಿಸಿದ ನಂತರ ಮಕ್ಕಳು ಮನೆಗೆ ತೆರಳಿದರು. ಶಿಕ್ಷಕರು ಸಂಜೆ 5ರ ವರೆಗೆ ಶಾಲೆಯ ಮುಂದೆ ಕಾಯ್ದು ಮರಳಿದರು. ಎಸ್‌ಡಿಎಂಸಿ ಅಧ್ಯಕ್ಷ ಜಗದೀಶ ಕಮತಗಿ, ಸದಸ್ಯರಾದ ಸಂತೋಷ ನೆಲ್ಲೂರ, ಸೋಮನಗೌಡ ಮಲ್ಲನಗೌಡ್ರ ಸೇರಿದಂತೆ ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next