Advertisement

ಬಸವಸಾಗರ ಜಲಾಶಯದಲ್ಲಿ ನೀರು ಸಂಗ್ರಹ ಕೊಂಚ ಏರಿಕೆ

10:04 AM Jun 04, 2018 | Team Udayavani |

ನಾರಾಯಣಪುರ: ಕಳೆದ ಮೇ 18ರಿಂದ ಮಲಪ್ರಭಾ ನದಿ ತೀರ ಹಾಗೂ ಜಲಾಶಯದ ತೀರ ಪ್ರದೇಶಗಳಲ್ಲಿ ಮುಂಗಾರು ಪೂರ್ವದಲ್ಲಿ ಅನೀರಿಕ್ಷಿತವಾಗಿ ಸುರಿದ ಮಳೆಯಿಂದ ಇಲ್ಲಿನ ಬಸವಸಾಗರ ಜಲಾಶಯಕ್ಕೆ ನೀರಿನ ಒಳಹರಿವು ಆರಂಭವಾಗಿದ್ದು, ಜಲಾಶಯದ ನೀರಿನ ಸಂಗ್ರಹ ಮಟ್ಟದಲ್ಲಿ ಕೊಂಚ ಏರಿಕೆ ಕಂಡಿದೆ.

Advertisement

ಕೃಷ್ಣಾ ಅಚ್ಚುಕಟ್ಟು ಪ್ರದೇಶ ಸುಮಾರು ಆರು ಲಕ್ಷ ಹೆಕ್ಟೇರ್‌ ಪ್ರದೇಶದ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಮಹತ್ವದ ನೀರಾವರಿ ಯೋಜನೆಗಳೊಂದಾದ ಕೃಷ್ಣಾ ಮೇಲ್ದಂಡೆ ಯೋಜನೆ ಅಡಿ ನಿರ್ಮಿಸಲಾದ ಬಸವಸಾಗರ ಜಲಾಶಯವು 1982ರಲ್ಲಿ ಲೋಕಾರ್ಪಣೆಗೊಂಡು ಈ ಭಾಗದ ಜನರ ಜೀವನಾಡಿಯಾಗಿದೆ.

ಉತ್ತರ ಕರ್ನಾಟಕದ ಯಾದಗಿರಿ, ಕಲಬುರಗಿ, ವಿಜಯಪುರ, ರಾಯಚೂರು ಜಿಲ್ಲೆ ಸೇರಿದಂತೆ ಬಸವಸಾಗರ ಹಿನ್ನೀರನ್ನು ಬಳಸಿಕೊಂಡು  ಕುಡಿಯುವ ನೀರು, ಬೃಹತ್‌ನೀರಾವರಿ ಯೋಜನೆ ಅಡಿಯಲ್ಲಿ ಕಾಲುವೆ ಮತ್ತು ಏತ ನೀರಾವರಿಯಿಂದ ನೀರು ಬಳಸಿಕೊಂಡು ಕೃಷಿಗೆ ನೀರಾವರಿ ಸೇರಿದಂತೆ ಉದ್ಯಮಗಳಿಗೆ ಅಗತ್ಯ ನೀರನ್ನು ಒದಗಿಸಲು ಈ ಬೃಹತ್‌ ಜಲಾಶಯವೇ ಜಲಮೂಲವಾಗಿದೆ. 

ಜಲಾಶಯಕ್ಕೆ ಒಳಹರಿವು: ಕೃಷ್ಣಾ ಹಾಗೂ ಮಲಪ್ರಭಾ ನದಿಗಳು ಕೂಡಲ ಸಂಗಮದಲ್ಲಿ ಕೂಡಿ ಸಂಗಮವಾಗುವ ನೀರೇ ಬಸವಸಾಗರ ಜಲಾಶಯದ ಹಿನ್ನೀರಾಗಿದೆ. ಕೃಷ್ಣೆ ಉಗಮವಾದ ಸ್ಥಳ ಮಹಾರಾಷ್ಟ್ರದ ಮಹಾಬಲೇಶ್ವರ ಕಣಿವೆ
ಪ್ರದೇಶ ಸೇರಿದಂತೆ ಕೃಷ್ಣಾ ನದಿ ತೀರದ ಪ್ರದೇಶದಲ್ಲಿ ಸುರಿಯುವ ಮಳೆಯಿಂದಲೇ ಅತ್ಯಧಿಕ ಪ್ರಮಾಣದಲ್ಲಿ ಒಳಹರಿವು ಹರಿದು ಆಲಮಟ್ಟಿ ಲಾಲ್‌ಬಹದ್ದೂರ ಶಾಸ್ತ್ರೀ ಜಲಾಶಯಕ್ಕೆ ಬಂದು ಸೇರುತ್ತದೆ. ನಂತರ ಆಲಮಟ್ಟಿ ಜಲಾಶಯ ಭರ್ತಿಯಾಗಿ ಹೊರಬಿಡಲಾದ ನೀರು ಇಲ್ಲಿನ ಬಸವಸಾಗರ ಭರ್ತಿಗೆ ಸಹಕಾರಿಯಾಗತ್ತದೆ. ಪ್ರಸ್ತುತ
ಮುಂಗಾರು ಪೂರ್ವವೇ ಮಲಪ್ರಭಾ ನದಿ ತೀರದಲ್ಲಿ ಮಳೆ ಸುರಿದಿದ್ದರಿಂದ ಅನೀರಿಕ್ಷಿತವಾಗಿ ಬಸವಸಾಗರಕ್ಕೆ ಒಳಹರಿವು ಹರಿದು ಬರುತ್ತಿದೆ ಎಂದು ಆಣೆಕಟ್ಟು ಗೇಟ್ಸ್‌ ಉಪವಿಭಾಗದ ಪ್ರಭಾರಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಆರ್‌.ಎಲ್‌. ಹಳ್ಳೂರ ಮಾಹಿತಿ ನೀಡಿದ್ದಾರೆ.

ಆರ್ಟಿಪಿಸಿಎಲ್‌ಗೆ ಒಂದು ಟಿಎಂಸಿ ಅಡಿ ನೀರು: ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಉತ್ಪಾದನ ಘಟಕದ ಬೇಡಿಕೆ ಹಾಗೂ ಸರ್ಕಾರದ ನಿರ್ದೇಶನದಂತೆ ಪ್ರತಿ ವರ್ಷದಂತೆ ಈ ವರ್ಷವೂ ಒಂದು ಟಿಎಂಸಿ ಅಡಿಯಷ್ಟು ನೀರನ್ನು ಜಲಾಶಯದ ಮುಖ್ಯ ಕ್ರಸ್ಟ್‌ಗೇಟ್‌ ಮುಖಾಂತರ ನದಿ ಮೂಲಕ ಆರ್ಟಪಿಸಿಎಲ್‌ ಗೆ ಹರಿಬಿಡಲಾಗಿದೆ. ಮೇ 31ರಿಂದ ಜಲಾಶಯದ ಮುಖ್ಯ ಕ್ರಸ್ಟ್‌ಗೇಟ್‌ಗಳನ್ನು ತೆರೆದು ನೀರು ಹರಿಸಿ ಪುನಃ ಜೂ. 2ರ ಸಂಜೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಣೆಕಟ್ಟು ಉಪವಿಭಾಗದ ಪ್ರಭಾರಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ರಾಮಚಂದ್ರ ತಿಳಿಸಿದ್ದಾರೆ.
 
ಪ್ರಸ್ತುತ ಜಲಾಶಯದ 487.94 ಮೀಟರ್‌ ನೀರಿನ ಮಟ್ಟದಲ್ಲಿ 17.12 ಟಿಎಂಸಿ ಅಡಿಯಷ್ಟು ನೀರು ಸಂಗ್ರಹಗೊಂಡಿದೆ. ಜಲಾಶಯಕ್ಕೆ ಮೇ 18ರಿಂದ 1200 ಕ್ಯೂಸೆಕ್‌ನಷ್ಟು ಒಳಹರಿವು ನಿರಂತವಾಗಿ ಬರುವುದಕ್ಕೆ ಆರಂಭವಾಗಿ, ಜೂ.
3ಕ್ಕೆ 738 ಕ್ಯೂಸೆಕ್‌ನಷ್ಟು ನೀರಿನ ಒಳಹರಿವು ಇದೆ. ಜಲಾಶಯವನ್ನೇ ನೆಚ್ಚಿಕೊಂಡಿರುವ ಪ್ರಮುಖ ನಗರ, ಪಟ್ಟಣಗಳು ಹಾಗೂ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜಿಗೆ ಯಾವುದೇ ತೊಂದರೆಯಿಲ್ಲ ಎಂದು ಮಾಹಿತಿ
ಅಣೆಕಟ್ಟು ಅಧಿಕಾರಿಗಳು ತಿಳಿಸಿದ್ದಾರೆ.

Advertisement

„ಬಸವರಾಜ ಶಾರದಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next