Advertisement

ಹಿಪ್ಪರಗಿ ಜಲಾಶಯದಿಂದ ನೀರು ಬಿಡುಗಡೆ: ಶಾಸಕ ಸವದಿ

02:32 PM May 18, 2020 | Suhan S |

ಜಮಖಂಡಿ: ಹಿಪ್ಪರಗಿ ಜಲಾಶಯದಿಂದ ಜಮಖಂಡಿ ಹಾಗೂ ಅಥ ತಾಲೂಕಿನ 40 ಗ್ರಾಮಗಳಿಗೆ ಬೇಸಿಗೆ ಕಾಲದಲ್ಲಿ ಕುಡಿವ ನೀರಿಗೆ ಹಾಹಾಕಾರ ಉಂಟಾಗಬಾರದೆಂಬ ಉದ್ದೇಶದಿಂದ ಚಿಕ್ಕಪಡಸಲಗಿ ಬ್ಯಾರೇಜ್‌ ವರೆಗೆ ಮತ್ತೆ 0.03 ಟಿಎಂಸಿ ನೀರು ಬಿಡಲಾಗಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.

Advertisement

ಹಿಪ್ಪರಗಿ ಬ್ಯಾರೇಜ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವಶ್ಯಕತೆಗೆ ಅನುಗುಣವಾಗಿ ನೀರು ಬಿಡಲಾಗಿದ್ದು, ರೈತರು ನೀರನ್ನು ಪೋಲು ಮಾಡದೇ ಬಳಕೆ ಮಾಡಬೇಕು. ಶೂರ್ಪಾಲಿ, ಕಡಕೋಳ, ತುಬಚಿ, ಮೈಗೂರು-ಮುತ್ತೂರು, ಕಂಕನವಾಡಿ ಇನ್ನಿತರರ ಗ್ರಾಮಗಳಿಗೆ ನೀರಿನ ಬವಣೆ ತಪ್ಪಲಿದೆ. ಮಹಾರಾಷ್ಟ್ರದ ರಾಜಾಪುರ ಡ್ಯಾಂದಲ್ಲಿ ನೀರಿನ ಸಂಗ್ರಹ ಹೆಚ್ಚಾಗಿದ್ದು, ಪ್ರತಿದಿನ 1 ಸಾವಿರ ಕ್ಯೂಸೆಕ್‌ ನೀರು ಬಿಡಲಾಗುತ್ತಿದ್ದು, ಹಿಪ್ಪರಗಿ ಬ್ಯಾರೇಜ್‌ ಹೆಚ್ಚಿನ ಒಳಹರಿವು ಹೆಚ್ಚಾಗಿದೆ ಎಂದರು.

ಹಿಪ್ಪರಗಿ ಬ್ಯಾರೇಜ್‌ದಿಂದ 2500 ಕ್ಯೂಸೆಕ್‌ ನೀರನ್ನು ಬ್ಯಾರೇಜಿನ ಜಿರೋ ಪಾಯಿಂಟ್‌ ಭಾಗದಿಂದ ಒಂದು ಗೇಟ್‌ ತೆರವುಗೊಳಿಸಿ ಸತತ 4 ದಿನಗಳ ಕಾಲ ಬಿಡಲಾಗುತ್ತದೆ. ಬ್ಯಾರೇಜಿನಲ್ಲಿ ಪ್ರಸಕ್ತ 1.84 ಟಿಎಂಸಿ ನೀರು ಸಂಗ್ರಹವಾಗಿದೆ ಎಂದರು. ಜಿಪಂ ಸದಸ್ಯ ಪುಂಡಲೀಕ ಪಾಲಬಾವಿ, ಬಸವರಾಜ ಸಿಂಧೂರ, ರಮೇಶ ನಾಯಿಕ, ಆನಂದ ಕಂಪು, ಅಣ್ಣಪ್ಪ ಸಾವಳಗಿ, ಚನ್ನಬಸಪ್ಪ ಹೊಸಮನಿ, ಸಲಬಣ್ಣ ಮಂಟೂರ, ಜಮಖಂಡಿ: ಹಿಪ್ಪರಗಿ ಬ್ಯಾರೇಜ್‌ಗೆ ಶಾಸಕ ಸಿದ್ದು ಸವದಿ ಭೇಟಿ ನೀಡಿದ್ದರು. ದಯಾನಂದ ಧರೀಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next