Advertisement

ನೀರು ಶುದ್ಧೀಕರಣ ಘಟಕ ಪರಿಶೀಲನೆ

03:18 PM Dec 08, 2021 | Team Udayavani |

ಕೆ.ಆರ್‌.ಪೇಟೆ: ಪಟ್ಟಣ ವ್ಯಾಪ್ತಿಯ 23 ವಾರ್ಡ್‌ಗಳ 20 ಸಾವಿರಕ್ಕೂ ಹೆಚ್ಚಿನ ಜನರಿಗೆ ಪ್ರತಿದಿನವೂ ಹೇಮಗಿರಿ ಬಳಿಯ ಹೇಮಾವತಿ ನದಿಯಿಂದ ಶುದ್ಧ ಕುಡಿಯುವನೀರನ್ನು ಸರಬರಾಜು ಮಾಡುವ ಬಾಣಂತಿಗುಡ್ಡದಲ್ಲಿರುವ ನೀರು ಶುದ್ಧೀಕರಣ ಘಟಕದಶುದ್ಧೀಕರಣ ಕಾರ್ಯಕ್ಕೆ ಚಾಲನೆ ನೀಡಿದ ಪುರಸಭೆಮುಖ್ಯಾಧಿಕಾರಿ ಕುಮಾರ್‌ ಸ್ವಚ್ಛತಾ ಕಾರ್ಯ ಪರಿಶೀಲನೆ ನಡೆಸಿದರು.

Advertisement

ತರಾಟೆ: ಕಳೆದ 2-3 ವರ್ಷಗಳಿಂದಲೂ ಫಿಲ್ಟರ್‌ ಹೌಸ್‌ನ ನೀರು ಶುದ್ಧೀಕರಣ ಘಟಕದ ನೀರು ಸಂಗ್ರಹಣಾ ತೊಟ್ಟಿಗಳು ಹಾಗೂ ನೀರು ಶುದ್ಧೀಕರಣ ಘಟಕಗಳಲ್ಲಿಸಂಗ್ರಹವಾಗಿದ್ದ ಕಸಕಡ್ಡಿಗಳು, ಮರಗಳ ಎಲೆಗಳುಹಾಗೂ ನೈರ್ಮಲ್ಯದ ವಸ್ತುಗಳನ್ನು ಪ್ರತ್ಯೇಕಗೊಳಿಸಿ ಬ್ಲೀಚಿಂಗ್‌ ಪೌಡರ್‌ ಹಾಗೂ ಪೆನಾಯಲ್‌ನಿಂದ ಸ್ವಚ್ಛಗೊಳಿಸುತ್ತಿದ್ದನ್ನು ವೀಕ್ಷಿಸಿದರು. ನೀರು ಸರಬರಾಜು ಹಾಗೂ ನೈರ್ಮಲ್ಯ ವಿಭಾಗದ ಸಿಬ್ಬಂದಿಗಳನ್ನು ತರಾಟೆ ತೆಗೆದುಕೊಂಡರು.

ಕಡ್ಡಾಯವಾಗಿ ಸ್ವಚ್ಛಗೊಳಿಸಿ: ಕನಿಷ್ಠ 6 ತಿಂಗಳಿಗೊಮ್ಮೆಯಾದರೂ ನೀರು ಶುದ್ಧೀಕರಣ ಘಟಕ ಹಾಗೂ ನೀರು ಸಂಗ್ರಹವಾಗುವ ತೊಟ್ಟಿಗಳನ್ನು ಸ್ವಚ್ಛಗೊಳಿಸುವ ಕೆಲಸವನ್ನು ಕಡ್ಡಾಯವಾಗಿ ಮಾಡಬೇಕು. ಕಳೆದ ಎರಡು-ಮೂರು ವರ್ಷಗಳಿಂದಲೂ ಸ್ವಚ್ಛಗೊಳಿಸದ ಕಾರಣ ಮಣ್ಣಿನ ಕಸ,ಬಗ್ಗಡ ಹಾಗೂ ಕಸಕಡ್ಡಿ ಹೆಚ್ಚಾಗಿ ಸಂಗ್ರಹವಾಗಿದೆ.

ವಜಾಕ್ಕೆ ಶಿಫಾರಸು: ಕುಡಿಯುವ ನೀರು ಸರಬರಾಜು ಮಾಡುವ ವಿಚಾರದಲ್ಲಿ ಬೇಜವಾಬ್ದಾರಿತನ ಮಾಡಿ ಜನಸಾಮಾನ್ಯರ ಆರೋಗ್ಯದ ಜೊತೆಯಲ್ಲಿ ಚೆಲ್ಲಾಟವಾಡಿದರೆ ಕೆಲಸದಿಂದ ಅಮಾನತುಗೊಳಿಸುವ ಜೊತೆಗೆ ಸೇವೆಯಿಂದ ಕಾಯಂ ಆಗಿ ವಜಾಗೊಳಿಸಲು ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಸಿದರು.

ಹೋಟೆಲ್‌, ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ: ಪಟ್ಟಣದ ಪ್ರತಿಷ್ಟಿತ ರಾಮದಾಸ್‌ ಹೋಟೆಲ್‌, ಅಂಬಾರಿ ಹೋಟೆಲ್‌ ಸೇರಿದಂತೆ ಫುಟ್‌ಫಾತ್‌ಗಳಲ್ಲಿರುವ ಹೋಟೆಲ್‌ಗ‌ಳ ಮೇಲೆ ಪುರಸಭೆಯ ಆರೋಗ್ಯ ನಿರೀಕ್ಷಕರು ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ದಾಳಿ ನಡೆಸಿದ ಮುಖ್ಯಾಧಿಕಾರಿ ಕುಮಾರ್‌, ಇಡ್ಲಿಯನ್ನುಬೇಯಿಸಲು ಹಿಟ್ಟಿನ ಕೆಳಗೆ ಪ್ಲೇಟ್‌ಗಳಲ್ಲಿ ಪ್ಲಾಸ್ಟಿಕ್‌ ಹಾಕಿ ಬೇಯಿಸುತ್ತಿರುವುದನ್ನು ಕಂಡು ಹೋಟೆಲ್‌ ಮಾಲೀಕರಿಗೆ ಅಂತಿಮ ಎಚ್ಚರಿಕೆ ನೀಡಿದರು.

Advertisement

ಇಡ್ಲಿ ಬೇಯಿಸಲು ಪ್ಲಾಸ್ಟಿಕ್‌ ಬಳಕೆ ಮಾಡುವುದರಿಂದಕ್ಯಾನ್ಸರ್‌ ಸೇರಿದಂತೆ ಹಲವಾರು ರೋಗರುಜಿನಗಳಿಗೆ ಜನಸಾಮಾನ್ಯರು ತುತ್ತಾಗುತ್ತಿದ್ದಾರೆ. ಅಂಗಡಿಮುಂಗಟ್ಟುಗಳಲ್ಲಿ ಯತೇತ್ಛವಾಗಿ ಪ್ಲಾಸ್ಟಿಕ್‌ ಕವರ್‌ಗಳಮಾರಾಟ ನಡೆಯುತ್ತಿದೆ. ಇದು ಪುರಸಭೆ ವತಿಯಿಂದಅಂತಿಮ ಎಚ್ಚರಿಕೆಯಾಗಿದ್ದು, ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ನಿಷೇದಿಸಿದೆ ಎಂದರು.

ಪ್ಲಾಸ್ಟಿಕ್‌ ಕವರ್‌ ಪತ್ತೆಯಾದರೆ ಕ್ರಿಮಿನಲ್‌ ಮೊಕದ್ದಮೆ :

ಪಟ್ಟಣವನ್ನು ಪ್ಲಾಸ್ಟಿಕ್‌ ಮುಕ್ತ ವಲಯವೆಂದು ಘೋಷಿಸಲಾಗಿದ್ದು ವರ್ತಕರು, ಹೋಟೆಲ್‌ ಹಾಗೂ ಕ್ಯಾಂಟೀನ್‌ಗಳ ಮಾಲೀಕರು ಪ್ಲಾಸ್ಟಿಕ್‌ ಕವರ್‌ಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ನಮ್ಮಸಿಬ್ಬಂದಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಪ್ಲಾಸ್ಟಿಕ್‌ ಕವರ್‌ಗಳು ಪತ್ತೆಯಾದರೆ ಅಂಗಡಿಗಳು ಹಾಗೂ ಹೋಟೆಲ್‌ಗ‌ಳ ಬಾಗಿಲು ಮುಚ್ಚಿಸುವ ಜೊತೆಗೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಕುಮಾರ್‌ ಎಚ್ಚರಿಸಿದರು.

ನಲ್ಲಿ ಸಂಪರ್ಕ ಶಾಶ್ವತ ಬಂದ್‌ ಎಚ್ಚರಿಕೆ :

ಪಟ್ಟಣದಲ್ಲಿ ಎರಡೂವರೆ ಸಾವಿರಕ್ಕೂ ಹೆಚ್ಚಿನ ಅಕ್ರಮ ನಲ್ಲಿಗಳ ಸಂಪರ್ಕವಿದ್ದು, ಶೇ.90ರಷ್ಟು ನಲ್ಲಿಗಳಿಗೆಟ್ಯಾಪ್‌ ಹಾಕದಿರುವುದರಿಂದ ಒಂದು ಬಿಂದಿಗೆ ನೀರು ಹಿಡಿಯಲು ಎರಡು ಬಿಂದಿಗೆ ನೀರನ್ನುಜನಸಾಮಾನ್ಯರು ವ್ಯರ್ಥವಾಗಿ ಚರಂಡಿಗೆ ಹರಿಸಿ ಪೋಲು ಮಾಡುತ್ತಿದ್ದಾರೆ. ನಲ್ಲಿಗಳಿಗೆ ಟ್ಯಾಪ್‌ಗ್ಳನ್ನು ಅಳವಡಿಸದ ಸಂಪರ್ಕವನ್ನು ಶಾಶ್ವತವಾಗಿ ಬಂದ್‌ ಮಾಡಿಸಲಾಗುವುದು ಎಂದು ಮುಖ್ಯಾಧಿಕಾರಿ ಕುಮಾರ್‌ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next