Advertisement

ನೀರು ಶುದ್ಧೀಕರಿಸುವ ಯಂತ್ರ ದುರಸ್ತಿ

07:21 PM Apr 02, 2021 | Team Udayavani |

ದೋಟಿಹಾಳ: ಅನೇಕ ಗ್ರಾಮಗಳಲ್ಲಿ ಶುದ್ಧ ನೀರಿನಘಟಕಗಳು ಆರಂಭವಾಗದೇ ಹಾಳಗುತ್ತಿದ್ದದರೂ ಯಾವ ಅಧಿಕಾರಿ, ಜನಪ್ರತಿನಿಧಿಗಳು ಈ ಬಗ್ಗೆಸೂಕ್ತ ಕ್ರಮಕೈಗೊಳ್ಳುತ್ತಿಲ್ಲ. ಜನರಿಗೆ ಫ್ಲೋರೈಡ್‌ಮುಕ್ತ ನೀರನ್ನು ಒದಗಿಸಲು ರೂಪಿಸಲಾದ ಯೋಜನೆ ಹಳ್ಳ ಹಿಡಿಯುತ್ತಿರುವುದು ವಿಷಾದದ ಸಂಗತಿ.

Advertisement

ಟೆಂಗುಂಟಿ ಗ್ರಾಮದಲ್ಲಿ ಎರಡು ಶುದ್ಧ ನೀರಿನ ಘಟಕಗಳು ಸ್ಥಾಪನೆ ಮಾಡಿದರೂ ಜನರಿಗೆಫ್ಲೊರೈಡ್‌ಯುಕ್ತ ನೀರು ಕುಡಿಯುವುದುತಪ್ಪಲಿಲ್ಲ. ಗ್ರಾಮದಲ್ಲಿ ಹೆಸರಿಗೆ ಮಾತ್ರಎರಡು ಶುದ್ಧ ನೀರಿನ ಘಟಕಗಳು ಇವೆ.ಅವು ಕಾರ್ಯರೂಪಕ್ಕೆ ಬಂದಿಲ್ಲ. ಗ್ರಾಮದಲ್ಲಿನೀರಿನ ಸಮಸ್ಯೆ ಇಲ್ಲ, ಆದರೆ ಕುಡಿಯಲು ಯೋಗ್ಯವಾದ ನೀರಿಲ್ಲ. ಇದರಿಂದ ಕುಷ್ಟಗಿಪಟ್ಟಣದಿಂದ ಟೆಂಗುಂಟಿ ಗ್ರಾಮಕ್ಕೆ ಸಣ್ಣಪ್ರಮಾಣದಲ್ಲಿ ನೀರು ಸರಬರಾಜುಗುತ್ತಿದೆ. ಗ್ರಾಮದ ನಾಲ್ಕು ಕಡೆಗಳಲ್ಲಿ ನಲ್ಲಿಗಳ ಮೂಲಕಕುಡಿಯುವ ನೀರು ಅಲ್ಪ ಸ್ವಲ್ಪ ಸಿಗುತ್ತಿದೆ.ಫ್ಲೋರೈಡ್‌ ರಹಿತ ನೀರು ಪೂರೈಸುವ ಬಗ್ಗೆ ಹಲವು ಬಾರಿ ಜಿಪಂ ಸದಸ್ಯರ, ಅಧಿಕಾರಿಗಳಿಗೆಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸದ್ಯ ಬೇಸಿಗೆ ಆರಂಭವಾಗಿದ್ದು, ಜನರಿಗೆ ಶುದ್ಧ ನೀರು ಸಿಗುತ್ತಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ನೀರು ಶುದ್ಧೀಕರಣ ಘಟಕ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಟೆಂಗುಂಟೆ ಗ್ರಾಮ ಮಾತ್ರವಲ್ಲ ರಾಜ್ಯದ ಅಲ್ಲಲ್ಲಿ ಶುದ್ಧನೀರಿನ ಘಟಕಗಳು ಕೆಟ್ಟಿವೆ. ಯಾವ ಕಾರಣಗಳಿಂದನೀರು ಶುದ್ಧೀಕರಿಸುವ ಯಂತ್ರ ಹಾಳಾಗಿವೆ. ಇದರಲ್ಲಿ ಯಾವ ದೋಷವಿದೆ ಎಂದು ತಿಳಿಯಲು ಅರಗ ಜ್ಞಾನೆಂದ್ರ ಅವರನೇತೃತ್ವದಲ್ಲಿ ಒಂದು ಸಮಿತಿ ಮಾಡಲಾಗಿದೆ. ಇದರಲ್ಲಿ ಹಿರಿಯಶಾಸಕರು ಇದ್ದಾರೆ. ಇವರು ಶುದ್ಧ ನೀರಿನ ಘಟಕಗಳ ಸ್ಥಿತಿಗತಿ ಬಗ್ಗೆ ಅಧ್ಯಯನ ಮಾಡಿ ಸರಕಾರ ವರದಿ ನೀಡಲಿದ್ದಾರೆ. ಅಮರೇಗೌಡ ಪಾಟೀಲ್‌ ಬಯ್ನಾಪೂರ, ಶಾಸಕ

ಟೆಂಗುಂಟೆ ಗ್ರಾಮದಲ್ಲಿ ಎರಡು ಶುದ್ಧ ನೀರಿನ ಘಟಕಗಳನ್ನುಸ್ಥಾಪಿಸಲಾಗಿದೆ. ಒಂದು ಘಟಕ್ಕೆ ಗ್ರಾಮದಲ್ಲಿ ಸಿಗುವಫ್ಲೊರೈಡ್‌ ನೀರನ್ನು ಸರಬರಾಜು ಮಾಡಿದ್ದರಿಂದ ಘಟಕದ ಯಂತ್ರ ಆಗಾಗ ಹಾಳಾಗುತ್ತಿದೆ. ಗ್ರಾಮದಲ್ಲಿ ಒಂದು ಹೊಸದಾಗಿ ಬೋರ್‌ವೆಲ್‌ ಹಾಕಲಾಗಿದೆ. ಅದರಲ್ಲಿ ಫ್ಲೊರೈಡ್‌ ಪ್ರಮಾಣ ಕಡಿಮೆ ಇದ್ದು, ಒಂದು ವಾರದೊಳಗೆ ಶುದ್ಧ ನೀರಿನ ಘಟಕಕ್ಕೆ ನೀರನ್ನು ಸರಬರಾಜು ಮಾಡಿ ಜನರಿಗೆ ಶುದ್ಧ ನೀರು ಪೂರೈಸುತ್ತೇವೆ. ಶರಣಮ್ಮ ಸಂಗನಗೌಡ ಜೈನರ, ಜಿಪಂ ಸದಸ್ಯೆ

 

Advertisement

ಮಲ್ಲಿಕಾರ್ಜುನ ಮೆದಿಕೇರಿ

Advertisement

Udayavani is now on Telegram. Click here to join our channel and stay updated with the latest news.

Next