Advertisement
ತಾಲೂಕಿನಲ್ಲಿ ದಬ್ಬೇಘಟ್ಟ, ಮಾಯಸಂದ್ರ, ಕಸಬಾ, ದಂಡಿನಶಿವರ ಹೋಬಳಿ ವ್ಯಾಪ್ತಿಯ ಸುಮಾರು 256 ಗ್ರಾಮಗಳನ್ನು ಹೊಂದಿದೆ. ಇದರಲ್ಲಿ ಅನೇಕ ಗ್ರಾಮ ಗಳಲ್ಲಿ ನೀರಿ ಪ್ರಮಾಣ ಕಡಿಮೆ ಇದೆ.
Related Articles
Advertisement
ಜನರು ಕುಡಿಯುಲು ಹನಿ ಹನಿ ನೀರಿಗೂ ಪರದಾಡು ವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಯಸಂದ್ರ ಹೋಬಳಿಯ ಭೈತರಹೊಸಹಳ್ಳಿ ಗ್ರಾಪಂ ದೊಡ್ಡಬೀರನ ಕೆರೆ, ಶೆಟ್ಟಿಗೊಂಡನಹಳ್ಳಿ ಗ್ರಾಪಂ ಚಟ್ಟನಹನಳ್ಳಿ, ನರಿಗೇಹಳ್ಳಿ, ಚನ್ನಿಂಗಯ್ಯನ ಪಾಳ್ಯ, ಮುತ್ತುಗದಹಳ್ಳಿ ಗ್ರಾಪಂ ಕಾಚೀಹಳ್ಳಿ, ಹೆಡ್ಡನಕಟ್ಟೆ, ಮಣಿಚಂಡೂರು ಗ್ರಾಪಂ ದೊಡ್ಡೇರಿಹಟ್ಟಿ, ಹನುಮಾಪುರ, ದಬ್ಬೇಘಟ್ಟ ಹೋಬಳಿಯ ಅರೆಮಲ್ಲೇನಹಳ್ಳಿ ಗ್ರಾಪಂ ರಂಗನಾಥ ಪುರ, ದಂಡಿನಶಿವರ ಹೋಬಳಿ ಕೊಂಡಜ್ಜಿ ಗ್ರಾಪಂನ ಡಿ.ಶೆಟ್ಟಿಹಳ್ಳಿ, ದೊಂ.ಗೊಲ್ಲರಹಟ್ಟಿ, ಹೊಸಕಟ್ಟೆ, ಸೊಪ್ಪನ ಹಳ್ಳಿ, ಹಡವನಹಳ್ಳಿ ಗ್ರಾಪಂ ಹೆಗ್ಗೆರೆ, ಕಸಬಾ ಹೋಬಳಿಯ ತಾಳಕೆರೆ ಗ್ರಾಪಂ ಚಂಡೂರು, ಲೋಕಮ್ಮನಹಳ್ಳಿ ಗ್ರಾಪಂ ಬಸವನಹಳ್ಳಿ, ಮೂನಿ ಯೂರು ಗ್ರಾಪಂನ ಮಾದಪಟ್ಟಣ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ.
ತಾಲೂಕು ಆಡಳಿತದಿಂದ ನೀರಿನ ವ್ಯವಸ್ಥೆ: ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ತಾಲೂಕು ಆಡಳಿತ ಗ್ರಾಮ ಪಂಚಾಯ್ತಿ ವತಿಯಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದೆ.
ಕೆಲವು ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ನೆರವು ಪಡೆದು ನೀರು ಪೂರೈಸಲಾಗುತ್ತಿದೆ. ದಿನೇ ದಿನೆ ತಾಲೂಕಿನ ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ತಾಲೂಕು ಆಡಳಿತ ಹರಸಾಹಸ ಪಡುವಂತಾಗಿದೆ.
48 ಹೊಸ ಕೊಳವೆ ಬಾವಿ: ಎನ್‌ಆರ್‌ಡಿಪಿ ಇಲಾಖೆ ಯಿಂದ ಕುಡಿಯುವ ನೀರಿಗಾಗಿ ತಾಲೂಕಿನಲ್ಲಿ 48 ಹೊಸ ಕೊಳವೆ ಬಾವಿ ಕೊರೆಸಲಾಗಿದೆ. ಅದರಲ್ಲಿ ದೊಂಬರನಹಳ್ಳಿ, ಡಿ.ಶಟ್ಟಿಹಳ್ಳಿ, ಬಳ್ಳೆಕಟ್ಟೆ, ಮಾಚೇನ ಹಳ್ಳಿ, ಹನುಮಾಪುರ ಗ್ರಾಮಗಳಲ್ಲಿನ 6 ಕೊಳವೆ ಬಾವಿಗಳು ವಿಫಲವಾಗಿದೆ.
79 ಶುದ್ಧ ನೀರಿನ ಘಟಕ: ತಾಲೂಕಿನಲ್ಲಿ ಕೆಆರ್‌ಡಿಎಲ್, ಕೆಎಂಎಫ್, ಎನ್‌ಆರ್‌ಡಿ ಸಂಸದರನಿಧಿಯಿಂದ ಸುಮಾರು 79 ಶುದ್ಧ ನೀರಿನ ಘಟಕ ಗಳನ್ನು ಪ್ರಾರಂಭಿಸಲಾಗಿದೆ.
ಅವುಗಳಲ್ಲಿ ಮಾಯ ಸಂದ್ರ, ಬಾಣಸಂದ್ರ, ಹರಿದಾಸನಹಳ್ಳಿ, ದೊಡ್ಡ ಗೊರಘಟ್ಟ, ಭೂವನಹಳ್ಳಿ ನೀರಿಲ್ಲದೇ ಸ್ಥಗಿತಗೊಂಡಿವೆ. ಗಿರಿನಹಳ್ಳಿ, ಮುದ್ದನಹಳ್ಳಿ ರಾಮಡಿಹಳ್ಳಿ ಇನ್ನೂ ಕೂಡ ಪ್ರಾರಂಭ ಮಾಡಿಲ್ಲ.
● ಎಸ್.ದೇವರಾಜ್