Advertisement

ಗಂಗಾವತಿಯಲ್ಲಿಲ್ಲ ನೀರಿನ ಸಮಸ್ಯೆ

05:12 PM May 23, 2019 | Team Udayavani |

ಗಂಗಾವತಿ: ಪ್ರಸ್ತುತ ಬರ ಹಾಗೂ ಬೇಸಿಗೆಯ ತೀವ್ರತೆಗೆ ಜನತೆ ತತ್ತರಿಸಿ ಹೋಗಿದ್ದಾರೆ. ಇಡೀ ಜಿಲ್ಲಾದ್ಯಂತ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಜನತೆಗೆ ಕುಡಿಯುವ ನೀರನ್ನು ಪೂರೈಸಲು ಜಿಲ್ಲಾಡಳಿತ ಇನ್ನಿಲ್ಲದ ಕಸರತ್ತು ನಡೆಸಿದೆ. ಆದರೂ ಬಹುತೇಕ ಪಟ್ಟಣ, ಹಳ್ಳಿಗಳಲ್ಲಿ ನೀರಿಗಾಗಿ ಹಾಹಾಕಾರ ತಪ್ಪಿಲ್ಲ. ಆದರೆ ಗಂಗಾವತಿ ನಗರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮುಂದಾಲೋಚನೆಯಿಂದಾಗಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ.

Advertisement

ಬೇಸಿಗೆ ಆರಂಭಕ್ಕೂ ಮುನ್ನವೇ ನಗರಸಭೆಯ ಹಾಗೂ ಶಾಸಕರ ವಿಶೇಷ ಅನುದಾನ 20 ಲಕ್ಷ ರೂ. ವೆಚ್ಚದಲ್ಲಿ ದೇವಘಾಟ ಹತ್ತಿರ ಜಾಕ್ವೆಲ್ ಸಮೀಪವೇ ಮರಳಿನ ಚೀಲಗಳ ರಿಂಗ್‌ ಬಾಂಡ್‌ ಹಾಕಿ 6 ತಿಂಗಳಿಗಾಗುಷ್ಟು ನೀರನ್ನು ಸಂಗ್ರಹಿಸಲಾಗಿದೆ. ನದಿಯಲ್ಲಿ ಹರಿದು ಬರುವ ನೀರು ಜಾಕ್ವೆಲ್ಗೆ ಬರುವಂತೆ ನದಿಯಲ್ಲಿ ಜೆಸಿಬಿಯಿಂದ ದಾರಿ ಮಾಡಲಾಗಿದೆ. ಇದಕ್ಕಾಗಿ ನಗರಸಭೆ ಹಾಗೂ ಗುತ್ತಿಗೆ ಕಾರ್ಮಿಕರು ಹಗಲಿರುಳು ಶ್ರಮಿಸಿದ್ದಾರೆ. ಕುಡಿಯುವ ನೀರಿನ ಸಲುವಾಗಿ ತುಂಗಭದ್ರಾ ಜಲಾಶಯದಲ್ಲಿ ಉಳಿದ ನೀರು ನದಿಯಲ್ಲಿ ಹರಿದು ಬರುವುದಕ್ಕೆ ಜಾಕ್ವೇಲ್ ಹತ್ತಿರ ಮರಳಿನ ಚೀಲಗಳ ತಡೆಗೋಡೆ ನಿರ್ಮಿಸಿ ಪ್ರತಿ ದಿನ ನೀರನ್ನು ಸಂಗ್ರಹಿಸಲಾಗಿದೆ.

ಕಳೆದ ಬೆಸಿಗೆ ಸಂದರ್ಭದಲ್ಲಿ ನದಿಯಲ್ಲಿ ನೀರಿನ ಕೊರತೆಯಿಂದ ನಗರದ ಜನರಿಗೆ 7 ದಿನಕ್ಕೆ ಒಮ್ಮೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಇದನ್ನು ಅರಿತ ನಗರಸಭೆ ಅಧಿಕಾರಿಗಳು ಶಾಸಕರು ಮತ್ತು ಸದಸ್ಯರ ಜತೆ ಮಾತನಾಡಿ, ಈ ಭಾರಿ ಬೇಸಿಗೆ ಮುಂಚಿತವಾಗಿ ನದಿಯಲ್ಲಿ ಹರಿಯುವ ನೀರನ್ನು ಸಂಗ್ರಹವಾಗುವಂತೆ ಮಾಡಿದ್ದರಿಂದ ಬೇಸಿಗೆಯಲ್ಲಿ ನಗರದ ಜನರಿಗೆ ಕುಡಿಯುವ ನೀರು ಕೊರತೆಯಾಗಿಲ್ಲ. ಜಾಕ್ವೇಲ್ನಲ್ಲಿ ಎರಡು ಮೋಟರ್‌ ಅಳವಡಿಸಲಾಗಿದೆ. ಪ್ರತೇಕ ಪೀಡರ್‌ ಲೈನ್‌ ಜೋಡಣೆಯಾಗಿದೆ. ದಿನದ 24 ಗಂಟೆಗಳ ಕಾಲ ನದಿಯಲ್ಲಿ ಹರಿದು ಬರುವ ನೀರನ್ನು ಜಾಕ್ವೇಲ್ನಲ್ಲಿ ಸಂಗ್ರಹಿಸಿ ಪೂರೈಕೆ ಮಾಡಲಾಗುತ್ತಿದೆ.

•ಕೆ. ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next