Advertisement

ಪಾವಂಜೆ ನೀರಿನ ಸಮಸ್ಯೆ: ಅಧಿಕಾರಿಗಳಿಂದ ಪರಿಶೀಲನೆ

08:57 PM May 15, 2019 | Sriram |

ಪಾವಂಜೆ: ಹಳೆಯಂಗಡಿ ಗ್ರಾಮ ಪಂಚಾಯತ್‌ನ ಪಾವಂಜೆಯ ಅರಾಂದ್‌ ಪ್ರದೇಶದಲ್ಲಿ ಕುಡಿಯುವ ನೀರಿನ ಬವಣೆಯ ಬಗ್ಗೆ ಉದಯವಾಣಿ ಸುದಿನದಲ್ಲಿ ಮೇ 15ರಂದು ಪ್ರಕಟಗೊಂಡ ಜೀವಜಲ ವರದಿಗೆ ಸ್ಪಂದಿಸಿ ಜನ ಪ್ರ ತಿನಿಧಿಗಳು ಹಾಗೂ ಅಧಿಕಾರಿಗಳ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

Advertisement

ಕಿನ್ನಿಗೋಳಿ ಬಹುಗ್ರಾಮ ಯೋಜ ನೆಯ ನೀರು ಅರಾಂದ್‌ ಪ್ರದೇಶಕ್ಕೆ ಸೂಕ್ತವಾಗಿ ಸರಬರಾಜು ನಡೆಯುತ್ತಿಲ್ಲ ಎಂಬುದರ ಬಗ್ಗೆ ಪರಿಶೀಲನೆಗೆ ಆಗಮಿಸಿದ ತಂಡವು ಅರಾಂದ್‌ ಪ್ರದೇಶಕ್ಕೆ ಬರುವ ಪೈಪ್‌ಲೈನ್‌ ಅನ್ನು ಪರಿಶೀಲನೆ ನಡೆಸಿ ಬೇರೆಲ್ಲ ಗೇಟ್‌ ವಾಲ್‌ನ್ನು ಬಂದ್‌ ಮಾಡಿ ನೀರಿನ ಒತ್ತಡ ವನ್ನು ಪರಿಶೀಲನೆ ನಡೆಸಿತು.ಈ ಸಂದರ್ಭದಲ್ಲಿ ಉದಯವಾಣಿಗೆ ಪ್ರತಿಕ್ರಿಯಿಸಿದ ದಕ್ಷಿಣ ಕನ್ನಡ ಜಿಲ್ಲಾ ಪಂಚಾ ಯತ್‌ನ ಸದಸ್ಯ ವಿನೋದ್‌ ಬೊಳ್ಳೂರು,ಮುಖ್ಯವಾಗಿ ಆರಾಂದ್‌ ಪ್ರದೇಶದಲ್ಲಿನ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ. ಇಲ್ಲಿ ಹಾಕಿರುವ ಪೈಪ್‌ಲೈನ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣವಂತಾಗಿದೆ. ಇಲ್ಲೊಂದು ನೀರು ಶೇಖರಣೆಯ ಸಂಪ್‌ ಅಥವಾ ಸಣ್ಣ ಮಟ್ಟಿನ ನೀರಿನ ಟ್ಯಾಂಕ್‌ ಅನ್ನು ನಿರ್ಮಿಸುವ ಬಗ್ಗೆ ಚಿಂತನೆ ನಡೆದಿದೆ ಎಂದರು.

ಎಂಜಿನಿಯರ್‌ ವಿಶ್ವನಾಥ್‌ ಅವರು ಕಿನ್ನಿಗೋಳಿ ಬಹುಗ್ರಾಮ ಯೋಜನೆಯ ಬಗ್ಗೆ ಇರುವ ನಿರ್ವಹಣೆಯ ಮಾಹಿತಿ ಹಾಗೂ ಸರಬರಾಜಿನಲ್ಲಿ ನಡೆಸಬೇಕಾದ ಕೆಲವೊಂದು ತಾಂತ್ರಿಕ ಸಲಹೆಗಳನ್ನು ಜನಪ್ರತಿನಿಧಿಗಳಿಗೆ,ಪಂಪ್‌ ಚಾಲಕರಿಗೆ ನೀಡಿದರು. ತಾ.ಪಂ.ಸದಸ್ಯ ಜೀವನ್‌ ಪ್ರಕಾಶ್‌, ಹಳೆಯಂಗಡಿ ಗ್ರಾ.ಪಂ.ನ ಸದಸ್ಯರಾದ ವಿನೋದ್‌ ಕುಮಾರ್‌ ಕೊಳುವೈಲು,ಸುಕೇಶ್‌ ಪಾವಂಜೆ,ಪ್ರಭಾರ ಪಿಡಿಒ ಅನಿತಾ ಕ್ಯಾಥರಿನ್‌,ಪಂಪ್‌ ಚಾಲಕ ಪ್ರಭಾಕರ್‌,ಬಹುಗ್ರಾಮ ಯೋಜನೆಯ ತಾಂತ್ರಿಕ ನಿರ್ವಹಣೆಯ ಪ್ರದೀಪ್‌,ಸಾಮಾಜಿಕ ಕಾರ್ಯಕರ್ತ ಮನೋಜ್‌ಕುಮಾರ್‌ ಕೆಲಸಿಬೆಟ್ಟು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next