Advertisement

ಉಡುಪಿ ನಗರದಲ್ಲಿ ಮತ್ತೆ ನೀರಿಗಾಗಿ ಹಾಹಾಕಾರ?

09:58 AM Jun 07, 2019 | Team Udayavani |

ಉಡುಪಿ: ಸ್ವರ್ಣಾ ನದಿಯಲ್ಲಿ ಪುತ್ತಿಗೆ ಸೇತುವೆ ಕೆಳಭಾಗ, ಪುತ್ತಿಗೆ ಮಠ, ಪುತ್ತಿಗೆ ದೇವಸ್ಥಾನದ ಬಳಿ ನೀರೆತ್ತುವ ಪ್ರಕ್ರಿಯೆ ನಡೆಯುತ್ತಿದ್ದು, ಶುಕ್ರವಾರವೂ ಮುಂದುವರಿಯಲಿದೆ. ಈ ಭಾಗದಲ್ಲೂ ನೀರು ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿರುವುದರಿಂದ ಒಂದೆರಡು ದಿನಗಳಲ್ಲಿ ಧಾರಾಕಾರ ಮಳೆ ಸುರಿಯದಿದ್ದರೆ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣವಾಗಲಿದೆ.
ಅತ್ತ ಹೂಳೆತ್ತುವ ಕಾಮಗಾರಿಯೂ ಆರಂಭವಾಗುವ ಲಕ್ಷಣ ಗೋಚರಿಸುತ್ತಿಲ್ಲ.

Advertisement

ಇನ್ನೊಂದೆಡೆ ಮಳೆ ಸುರಿಯುವ ಲಕ್ಷಣವೂ ಕಾಣುತ್ತಿಲ್ಲ. ಸದ್ಯಕ್ಕೆ ಕೆಲವು ವಾರ್ಡ್‌ಗಳಿಗೆ ನಗರಸಭೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡುತ್ತಿದ್ದು, ಒಂದೆರಡು ದಿನಗಳಲ್ಲಿ ನಿಲುಗಡೆಯಾಗುವ ಸಾಧ್ಯತೆಯೂ ಹೆಚ್ಚಿದೆ.

ತುಂಬೆ ಮಟ್ಟ ತುಸು ಏರಿಕೆ: ರೇಷನಿಂಗ್‌ ಪರಿಷ್ಕರಣೆ
ಮಂಗಳೂರು: ಬಂಟ್ವಾಳ ಆಸುಪಾಸಿನಲ್ಲಿ ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ 14 ಸೆಂ.ಮೀ.ನಷ್ಟು ಹೆಚ್ಚಳವಾಗಿದ್ದು, ಸದ್ಯ ಒಟ್ಟು ನೀರಿನ ಮಟ್ಟ 2.34 ಮೀ.ಗೆ ಏರಿದೆ. ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ರೇಷನಿಂಗ್‌ ವ್ಯವಸ್ಥೆಯನ್ನು ಗುರುವಾರದಿಂದ ಮತ್ತೆ ಪರಿಷ್ಕರಿಸಲಾಗಿದೆ.

ಇದರಂತೆ ಜೂ.6ರಿಂದ ಜೂ.9ರ ವರೆಗೆ ನೀರು ಪೂರೈಕೆ ಸ್ಥಗಿತ ಕೈಬಿಟ್ಟು, ಜೂ.8ರ ಬೆಳಗ್ಗೆ 6ರಿಂದ ಜೂ.12ರ ಬೆಳಗ್ಗೆ 6 ಗಂಟೆಯ ವರೆಗೆ ಒಟ್ಟು 96 ಗಂಟೆ ನೀರು ಸರಬರಾಜು ಮಾಡಲು ತೀರ್ಮಾನಿಸಲಾಗಿದೆ. ಹೀಗಾಗಿ ಜೂ.7ರಂದು ಮಾತ್ರ ನಗರದಲ್ಲಿ ನೀರು ಸರಬರಾಜು ಸ್ಥಗಿತಗೊಳ್ಳಲಿದೆ.

ಸದ್ಯ ಮುಂಗಾರು ಮಳೆಯ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಮತ್ತು ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ಇನ್ನಷ್ಟು ಏರಿಕೆಯಾದರೆ ರೇಷನಿಂಗ್‌ ಕೂಡಲೇ ಕೈಬಿಡಲು ನಿರ್ಧರಿಸಲಾಗಿದೆ. ಆದರೆ ನೀರು ಮಿತವಾಗಿ ಬಳಸಿ ಸಾರ್ವಜನಿಕರು ಪಾಲಿಕೆ ಜತೆಗೆ ಕೈಜೋಡಿಸಬೇಕು ಎಂದು ಮನಪಾ ಆಯುಕ್ತರ ಪ್ರಕಟನೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next